ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾಬ್ ಚಾಲಕರಿಂದ ಕಿರುಕುಳ: ಮಹಿಳಾ ಚಾಲಕರಿಗೆ ಹೆಚ್ಚಿದ ಬೇಡಿಕೆ

By Nayana
|
Google Oneindia Kannada News

ಬೆಂಗಳೂರು, ಜು.25: ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಕ್ಯಾಬ್‌ ಚಾಲಕರ ಕಿರುಕುಳ ಹೆಚ್ಚುತ್ತಿರುವ ಪರಿಣಾಮ ಮಹಿಳಾ ಡ್ರೈವರ್‌ಗಳನ್ನು ನೇಮಿಸಿಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕಳೆದ ಒಂದು ತಿಂಗಳಿಂದೀಚೆಗೆ ಬೆಂಗಳೂರಿನಲ್ಲಿ ನಮಗೆ ತಿಳಿದಿರುವ ಹಾಗೆ ಮೂರು ಘಟನೆಗಳು ನಡೆದಿವೆ, ಹಾಗಾಗಿ ಓಲಾ, ಊಬರ್ ಇನ್ನಿತರೆ ಕ್ಯಾಬ್ ಸೇವೆಗಳಿಗೆ ಮಹಿಳಾ ಚಾಲಕರನ್ನು ನೇಮಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

ಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕ

ಬೆಂಗಳೂರಿನಲ್ಲಿ ಒಟ್ಟು 3 ಟ್ಯಾಕ್ಸಿ ಸೇವೆಗಳು ಮಹಿಳೆಯರಿಗಾಗಿಯೇ ಇದೆ, ಡೊಮೆನ್‌ ಕ್ಯಾಬ್ಸ್‌, ಗೋ ಪಿಂಕ್‌ ಪ್ರೀಮಿಯಂ ಕ್ಯಾಬ್ಸ್‌ ಹಾಗೂ ಟ್ಯಾಕ್ಶೆ ಇದನ್ನು ಹೊರತುಪಡಿಸಿ ಮಹಿಳೆಯರಿಗಾಗಿಯೇ ಮಹಿಳೆಯರೇ ಚಲಾಯಿಸುವ ಟ್ಯಾಕ್ಸಿಗಳಿಲ್ಲ. ಮಹಿಳೆಯರು ಸ್ವಂತ ಪರವಾನಗಿ ಪಡೆದ ಬಳಿಕ ವಾಣಿಜ್ಯ ಪರವಾನಗಿ ನೀಡಲಾಗುತ್ತದೆ ಬಳಿಕವಷ್ಟೇ ಮಹಿಳಾ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತದೆ.

Harassment cases up demand for cabs with women drivers

ಡೊಮೆನ್‌ ಕ್ಯಾಬ್ಸ್‌ ಹಿರಿಯ ಅಧಿಕಾರಿ ಹೇಳುವ ಪ್ರಕಾರ ಇದುವರೆಗೆ ಕೇವಲ 45 ಟ್ಯಾಕ್ಸಿಗಳಿವೆ, ಬೆಂಗಳೂರಿನಲ್ಲಿ ಕೆಲವು ಘಟನೆಗಳು ನಡೆದ ಬಳಿಕ ಈ ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ವರ್ಷಾಂತ್ಯದ ಒಳಗೆ 100 ಕ್ಕೂ ಹೆಚ್ಚು ಕ್ಯಾಬ್‌ಗಳು ಸಂಚರಿಸಲಿವೆ ಎಂದಿದ್ದಾರೆ.

ಪ್ರಯಾಣಿಕರು ಹೊರಡುವ ನಾಲ್ಕು ಗಂಟೆಗಳ ಮೊದಲು ಕ್ಯಾಬ್‌ ಬುಕ್ ಮಾಡಬೇಕಿದೆ. ಮಹಿಳಾ ಪ್ರಯಾಣಿಕರಿದ್ದಾಗ ಮಹಿಳಾ ಚಾಲಕರನ್ನು ಕಳುಹಿಸಲಾಗುತ್ತದೆ.

ಶಾಲಾ ಮಕ್ಕಳು, ವೃದ್ಧರು, ಮಹಿಳೆಯರನ್ನು ಕರೆತರಲು ಪಿಂಕ್‌ ಕ್ಯಾಬ್‌ ವ್ಯವಸ್ಥೆ ಇದೆ. ವಿದೇಶಿ ಮಹಿಳೆಯರನ್ನೂ ಕೂಡ ಏರ್‌ಪೋರ್ಟ್‌ನಿಂದ ಬರುವಾಗ ಪಿಂ ಕ್‌ ಕ್ಯಾಬ್‌ ಬುಕ್ ಮಾಡುತ್ತಾರೆ. ಈ ಮಹಿಳೆಯರು ತಿಂಗಳಿಗೆ 20 ಸಾವಿರಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದಾರೆ.

English summary
Horror stories of airport-bound female passengers facing harassment from cab drivers have forced women to choose a safer option: taxis driven by women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X