ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗೆ ಮಧ್ಯಂತರ ಜಾಮೀನು

ಸಂಖ್ಯಾಶಾಸ್ತ್ರ ತರಬೇತಿ ವೇಳೆ ಮಹಿಳೆಯೊಬ್ಬರಿಗೆ ವಂಚಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ಬಂಧಿತರಾಗಿದ್ದ ಆರ್ಯವರ್ಧನ್ ಅವರಿಗೆ ಶುಕ್ರವಾರ ಸಂಜೆ ಮಧ್ಯಂತರ ಜಾಮೀನು ಸಿಕ್ಕಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ಸಂಖ್ಯಾಶಾಸ್ತ್ರ ತರಬೇತಿ ವೇಳೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಆರ್ಯವರ್ಧನ್ ಅವರಿಗೆ ಶುಕ್ರವಾರ ಸಂಜೆ ಮಧ್ಯಂತರ ಜಾಮೀನು ಸಿಕ್ಕಿದೆ. ನಗರದ 51ನೇ ಸಿಟಿ ಸಿವಿಲ್ ಕೋರ್ಟಿನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ ಬಿಎಸ್ ರೇಖಾ ಅವರು ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.

ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಆರ್ಯವರ್ಧನ್ ಮೇಲೆ ಲೈಂಗಿಕ ಕಿರುಕುಳ, ವಂಚನೆ, ಪ್ರಾಣ ಬೆದರಿಕೆ ಆರೋಪ ಹೊರೆಸಿ,ರಾಜರಾಜೇಶ್ವರಿ ನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.[ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಮತ್ತೊಮ್ಮೆ ಬಂಧನ]

ತಲೆಮರೆಸಿಕೊಂಡಿದ್ದ ಆರ್ಯವರ್ಧನ್ ರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ಶನಿವಾರ ಕೋರ್ಟಿಗೆ ಹಾಜರುಪಡಿಸಲಾಗಿತ್ತು. [ಬೆಂಗಳೂರಿನ ಸಂಖ್ಯಾಶಾಸ್ತ್ರೀಗೆ ಆಂಧ್ರದ ಮಹಿಳೆಯಿಂದ ಶಾಸ್ತಿ]

Harassment Case : Numerologist Aryavardhan gets Interim Bail

ಘಟನೆ ಹಿನ್ನಲೆ: ಜ್ಯೋತಿಷಿ ಆರ್ಯವರ್ಧನ್ ಕೆಲದಿನಗಳ ಹಿಂದೆ ಜ್ಯೋತಿಷ್ಯ ತರಬೇತಿ ನೀಡುವುದಾಗಿ ಜಾಹೀರಾತು ನೀಡಿದ್ದರು. 5 ದಿನಗಳ ತರಗತಿ ಪ್ರವೇಶಾತಿಗೆ 24 ಸಾವಿರ ನಿಗದಿ ಮಾಡಲಾಗಿತ್ತು. ಹೆಚ್ಚಿನ ತರಬೇತಿಗಾಗಿ 1.5ಲಕ್ಷ ಹಣವನ್ನು ಆಕೆಯಿಂದ ಆರ್ಯವರ್ಧನ್ ಪಡೆದಿದ್ದರು. ತಮ್ಮ ತರಗತಿ ಉಪಯೋಗವಾಗದಿದ್ದರೆ ಹಣ ವಾಪಸ್ ನೀಡುವುದಾಗಿ ಹೇಳಿದ್ದರು.

ಕೆಲವು ದಿನ ತರಬೇತಿ ಭಾಗವಹಿಸಿದ ನಂತರ ಸಂಖ್ಯಾಶಾಸ್ತ್ರ ಪ್ರಯೋಜನವಿಲ್ಲವೆಂದು ತಿಳಿದು ಆಕೆ ಹಣ ವಾಪಸ್ ಕೇಳಿದ್ದರು. ಇದರಿಂದ ಇಬ್ಬರ ನಡುವೆ ವಾಗ್ವಾದಗಳು ನಡೆದಿದ್ದವು. ಆಗಸ್ಟ್ 21ರಂದು ಆರ್ಯವರ್ಧನ್ ಆಕೆಯ ಮನೆಗೆ ತೆರಳಿ ಹಣ ನೀಡುವಂತೆ ಕೇಳಿದ್ದು ಈ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.

English summary
Harassment Case : Numerologist Aryavardhan gets Interim bail today by 51st City civil court in Bengaluru. He was alleged harassed a woman during the numerology classes. Rajarajeshwari Nagar police investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X