ಸಹೋದ್ಯೋಗಿಯ ಕಿರುಕುಳ ತಾಳಲಾರದೆ ಪ್ರಾಣ ಬಿಟ್ಟ ಟೆಕ್ಕಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 19: ಬೆಳ್ಳಂದೂರು ಬಳಿಯ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದಿದ್ದಾರೆ.

33 ವರ್ಷ ಸಾಫ್ಟ್ ವೇರ್ ಟೆಕ್ಕಿ ಗುಲ್ಶನ್ ಛೋಪ್ರಾ ಅವರು ಬೆಳ್ಳಂದೂರಿನಲ್ಲಿರುವ ತಮ್ಮ ಕಂಪನಿಯ ಎಂಟನೇ ಮಹಡಿ ಏರಿ ಅಲ್ಲಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ.

ಐಟಿ ಕಂಪನಿಯೊಂದರಲ್ಲಿ ಕ್ವಾಲಿಟಿ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗುಲ್ಶನ್ ಅವರು ಕೆಲ ಕಾಲದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಗೆಳೆಯರು ಕೂಡಾ ಹೇಳಿದ್ದಾರೆ.

'Harassed' by senior, techie ends life Bellandur

ಗುಲ್ಶನ್ ಅವರು ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಯ ಮ್ಯಾನೇಜರ್ ರೊಬ್ಬರು ಗುಲ್ಶನ್ ಗೆ ತುಂಬಾ ತೊಂದರೆ ಕೊಡುತ್ತಿದ್ದರಂತೆ. ಈ ಬಗ್ಗೆ ತನ್ನ ಕುಟುಂಬದವರ ಜೊತೆ ಗುಲ್ಶನ್ ಹೇಳಿಕೊಂಡಿದ್ದರು.

ಸೋಮವಾರ ರಾತ್ರಿ ಕಂಪನಿಗೆ ಬಂದಿದ್ದ ಗುಲ್ಶನ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಬಗ್ಗೆ ಯಾರಿಗೂ ತಿಳಿಸಿಲ್ಲ. ನೈಟ್ ಬೀಟ್ ನಲ್ಲಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ತಕ್ಷಣವೇ ಮಾಹಿತಿ ಸಿಕ್ಕಿದೆ. ನಂತರ ಪ್ರಕರಣ ದಾಖಲಿಸಿಕೊಂಡಿರುವ ಎಚ್ ಎಸ್ ಆರ್ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಗುಲ್ಶನ್ ಅವರು ಯಾವುದೇ ಸೂಸೈಡ್ ನೋಟ್ ಬರೆದಿಲ್ಲ, ಗುಲ್ಶನ್ ಅವರ ಬಳಿ ಇದ್ದ ಲ್ಯಾಪ್ ಟಾಪ್, ಮೊಬೈಲ್ ಫೋನ್ ನಲ್ಲಿ ಸುಳಿವಿಗಾಗಿ ಶೋಧನೆ ನಡೆಸಲಾಗಿದೆ. ಗುಲ್ಶನ್ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 33-year-old techie Gulshan Chopra committed suicide by jumping from the eighth floor of his office building in Bellandur allegedly due to harassment from his senior, on Monday night. HSR Layout police are probing the case.
Please Wait while comments are loading...