ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರೆ ಮಾಡಿ ಟ್ರಾಫಿಕ್‌ ಪೊಲೀಸರಿಗೆ ಮತ ನೀಡಿ

|
Google Oneindia Kannada News

ಬೆಂಗಳೂರು: ಸೆ. 18: ಟ್ರಾಫಿಕ್ ಪೊಲೀಸರ ಕಾರ್ಯ ವೈಖರಿ ಬಗ್ಗೆ ನಿಮ್ಮ ದೂರನ್ನು ಅಥವಾ ಮೆಚ್ಚುಗೆಯನ್ನು ಇನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು. ಟ್ರಾಫಿಕ್‌ ಪೊಲೀಸರ ಮೇಲೆ ಜನರು ಇಟ್ಟಿರುವ ಭಾವನೆಗಳೇನು? ಇಲಾಖೆ ಮಟ್ಟದಲ್ಲಿ ಯಾವ ಸುಧಾರಣೆ ಮಾಡಿಕೊಳ್ಳಬಹುದು ಎಂಬ ಅಂಶಗಳನ್ನು ಲೆಕ್ಕಹಾಕಲು ವಿನೂತನ ವ್ಯವಸ್ಥೆ ಜಾರಿಗೆ ಬಂದಿದೆ.

ಟ್ರಾಫಿಕ್‌ ಪೊಲೀಸರ ಕೆಲಸ ತೃಪ್ತಿದಾಯಕವಾಗಿದೆ ಅಥವಾ ಇಲ್ಲ ಎಂದು ನೀವೇ ವೋಟ್‌ ಮಾಡಬಹುದು. ನಿಮ್ಮ ಪ್ರತಿಕ್ರಿಯೆ ಆಧರಿಸಿ ಉತ್ತಮ ಪೊಲೀಸರಿಗೆ ಇಲಾಖೆಯಿಂದ ಸನ್ಮಾನವೂ ದೊರೆಯಲಿದೆ.(ಶನಿವಾರ ರಾತ್ರಿ ಕುಡಿದು ಗಾಡಿ ಓಡಿಸಿದವರ ಲೆಕ್ಕ)

traffic police

ಅಕ್ಟೋಬರ್ 1 ರಿಂದ ಬೆಂಗಳೂರಿನ 5 ಪ್ರಮುಖ ವೃತ್ತಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಪೊಲೀಸ್‌ ಇಲಾಖೆ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರ ನೆರವಿನಲ್ಲಿ ಎನ್‌ಜಿಒವೊಂದು ಈ ಯೋಜನೆಯನ್ನು ರೂಪಿಸಿದೆ.

ಹೇಗೆ ಕಾರ್ಯನಿರ್ವಹಿಸುತ್ತೆ?
ನಿರ್ದಿಷ್ಟ ಪಡಿಸಿದ ಜಂಕ್ಷನ್ ನಲ್ಲಿ ಡಿಸ್ಪ್ಲೇ ಬೋರ್ಡ್ ಅಳವಡಿಸಿ ಮೊಬೈಲ್‌ ನಂಬರ್‌ ವೊಂದನ್ನು ಬಿತ್ತರಿಸಲಾಗುವುದು. ಜನರಿಗೆ ಈ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗುವುದು. ನಾಗರಿಕರು ಈ ನಂಬರ್‌ಗೆ ಕರೆ ಮಾಡಿದರೆ ಅದು ತನ್ನಿಂದ ತಾನೇ ಕೊನೆಗೊಳ್ಳುವುದು. ಆದರೆ ಕರೆ ಮಾಡಿದವರಿಗೆ ಒಂದು(ಅಂತರ್ಜಾಲ ತಾಣದ) ಲಿಂಕ್‌ ಇರುವ ಎಸ್‌ಎಂಎಸ್‌ ತಲುಪುತ್ತದೆ. ಈ ಲಿಂಕ್‌ ಕ್ಲಿಕ್‌ ಮಾಡಿ www.ourtpc.com ಕ್ಕೆ ಭೇಟಿ ನೀಡಿ ನಿಮ್ಮ ಅಭಿಪ್ರಾಯ ದಾಖಲಿಸಬಹುದು ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರುವ ಟಿಪಿಸಿ ಸಂಸ್ಥೆಯ ಸಿಇಒ ಸಂತೋಷ್‌ ಕುಮಾರ್ ತಿಳಿಸಿದರು.('ಸಾರ್ವಜನಿಕ ಕಣ್ಣು' ಅಂದ್ರೇನು ಗೊತ್ತಾ ನಿಮಗೆ?)

ಎಲ್ಲೆಲ್ಲಿ ಡಿಸ್ಪ್ಲೇ ಬೋರ್ಡ್‌ ಅಳವಡಿಕೆ?
ನಗರದ ಅತ್ಯಧಿಕ ಟ್ರಾಫಿಕ್‌ ಸಮಸ್ಯೆ ಅನುಭವಿಸುವ ಸಿಎಂಎಚ್‌ ರಸ್ತೆ ಬಿಎಂಶ್ರೀ ವೃತ್ತ, ಜಯನಗರ ಸೌತ್‌ ಎಂಡ್‌ ವೃತ್ತ, ಕೋರಮಂಗಲ ಸೋನಿ ಜಂಕ್ಷನ್‌, ಸಿಲ್ಕ್‌ ಬೋರ್ಡ್‌ ಮತ್ತು ಮಾನ್ಯತಾ ಟೆಕ್ ಪಾರ್ಕ್ ಗಳಲ್ಲಿ ಪೋನ್‌ ನಂಬರ್‌ ಬಿತ್ತರಿಸಲಾಗುವುದು ಎಂದು ಟ್ರಾಫಿಕ್‌ ವಿಭಾಗದ ಎಸಿಪಿ ಬಿ.ದಯಾನಂದ್‌ ತಿಳಿಸಿದರು. ನಂತರ ಪ್ರತಿಕ್ರಿಯೆ ಆಧರಿಸಿ ಇತರ ಕಡೆ ವಿಸ್ತರಿಸುವ ಯೋಜನೆಯಿದೆ ಎಂದು ತಿಳಿಸಿದರು.

English summary
The city’s commuters can now have a say in what they feel about the traffic police. A public polling system where commuters can vote if they are ‘happy’ or ‘unhappy’ with the traffic police has been launched. Based on the feedback, the police will be rewarded by the Police Department. The programme is being launched by the Bangalore City Police and Traffic Police Care, an NGO, on a pilot basis from October 1 at five busy junctions - CMH Road-B.M. Shri. junction, Jayanagar South End Circle, Koramangala Sony World junction, Silk Board junction and Manyata-Lumbini park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X