ಬೆಂಗಳೂರಲ್ಲಿ 5 ದರೋಡೆಕೋರರ ಬಂಧನ, 12 ಪ್ರಕರಣಗಳು ಪತ್ತೆ

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 03 : ರಾತ್ರಿ ವೇಳೆ ಓಡಾಡುವ ಒಬ್ಬಂಟಿಗರನ್ನು ಗುರಿಯಾಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡುತಿದ್ದ ಕುಖ್ಯಾತ 5 ಜನ ಆರೋಪಿಗಳ ತಂಡವೊಂದನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಈ ಐವರ ಆರೋಪಿಗಳ ಸ್ವ-ಇಚ್ಚಾ ಹೇಳಿಕೆ ಮೇರೆಗೆ ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ .ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ. ಚಾಮರಾಜಪೇಟೆ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಮಹಾಂತ ರೆಡ್ಡಿ ಅವರ ನೇತೃತ್ವದಲ್ಲಿ ಹನುಮಂತನಗರ, ಜೆ.ಪಿ ನಗರ, ಆಡುಗೋಡಿ, ಆರ್.ಆರ್ ನಗರ, ಬಸವನಗುಡಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿಂದತೆ ಒಟ್ಟು 12 ಪ್ರಕರಣಗಳನ್ನು ಪತ್ತೆ ಮಾಡಿ ಹಲವರನ್ನು ಬಂಧಿಸಿ ಯಶಸ್ವಿಯಾಗಿದ್ದಾರೆ.

Hanumanth Nagar police Arrest 5 dacoits in bangalore

ಬಂಧಿತರಿಂದ ಸುಮಾರು 8,00,000 ರೂ ಬೆಲೆ ಬಾಳುವ 62 ಮೊಬೈಲ್‍ ಗಳು, 1 ಲ್ಯಾಪ್ ಟಾಪ್ , 80 ಗ್ರಾಂ 80 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಒಟ್ಟು 4 ಬೈಕ್ ಗಳು, ಒಂದು ಚಾಕು, 2 ಮಚ್ಚು, ಒಂದು ಕಬ್ಬಿಣದ ರಾಡ್ ನ್ನು ವಶಪಡಿಸಿಕೊಂಡಿದ್ದಾರೆ.

ನಗರದ ವಿವಿಧ ಕಡೆಗಳಲ್ಲಿ ರಾತ್ರಿ ಸಮಯದಲ್ಲಿ ಓಡಾಡುವರನ್ನು ಗುರಿಯಾಸಿಕೊಂಡು ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆ ಅವರ ಬಳಿ ಇದ್ದ ವಸ್ತುಗಳನ್ನು ದೋಚುವುದೇ ಆರೋಪಿಗಳು ಕಾಯಕ ಮಾಡಿಕೊಂಡಿದ್ದರು. ಇತರ ಆರೋಪಿಗಳ ಹೇಳಿಕೆಯಿಂದ ಬೇರೆ-ಬೇರೆ ಜಾಲಗಳನ್ನು ಪೊಲೀಸರು ಪತ್ತೆ ಹಚ್ಚಿ ಯಶಸ್ವಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangaluru Hanumanth Nagar police have arrested 5 dacoits various places. and 12 others cases found in the city various Areas.
Please Wait while comments are loading...