ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯುನ್ನತ ದೇಶ ಸೇವೆ

By Kiran B Hegde
|
Google Oneindia Kannada News

ಬೆಂಗಳೂರು, ಜ. 6: ಯುವ ಜನತೆಯೇ ದೇಶದ ಭವಿಷ್ಯದ ಅಡಿಪಾಯ. ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವುದು ದೇಶಕ್ಕೆ ಸಲ್ಲಿಸುವ ಅತ್ಯುನ್ನತ ಸೇವೆ ಎಂದು ಉಪ ರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಆರ್.ವಿ. ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಮಂಗಳವಾರ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

೨೦೧೧ ರಲ್ಲಿ ಭಾರತದ ಜನಸಂಖ್ಯೆಯ ಶೇ. ೫೦ರಷ್ಟು ಜನ ೨೪ ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ೨೦೨೦ ರ ವೇಳೆಗೆ ನಮ್ಮ ಜನಸಂಖ್ಯೆಯ ಮೂರನೇ ಎರಡು ಭಾಗ ದುಡಿಯುವ ವರ್ಗವಾಗಿರುತ್ತದೆ. ಇದರ ಲಾಭವನ್ನು ಸೂಕ್ತವಾಗಿ ಬಳಸಿಕೊಳ್ಳಲು ಉತ್ತಮ ಆರೋಗ್ಯ ಸೇವೆ, ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯ ತರಬೇತಿ ಮತ್ತು ಆಶೋತ್ತರ ಈಡೇರಿಸುವಂತಹ ಅವಕಾಶಗಳ ನಿರ್ಮಾಣ ನಡೆಯಬೇಕು ಎಂದರು.

hameed

ದೇಶದಲ್ಲಿ ಉನ್ನತ ಶಿಕ್ಷಣ ರಂಗವು ಲಭ್ಯತೆ, ಸಮತೆ ಮತ್ತು ಗುಣಮಟ್ಟದ ಸಮಸ್ಯೆಗಳಿಂದ ಬಳಲುತ್ತಿದೆ. ಅಂತಾರಾಷ್ಟ್ರೀಯ ಶಿಕ್ಷಣ ಗುಣಮಟ್ಟಕ್ಕೆ ಹೋಲಿಸಿದಾಗ ನಾವು ಬಹಳ ಹಿಂದುಳಿದಿದ್ದೇವೆ. ಉನ್ನತ ಶಿಕ್ಷಣ ದೇಶದ ಅಗತ್ಯಗಳನ್ನು ಪೂರೈಸುವಂತಿರಬೇಕು. ಉದ್ಯೋಗದ ಮಾರುಕಟ್ಟೆಯತ್ತ ಗಮನವಿರಬೇಕು. ಸ್ವಂತ ಉದ್ಯೋಗಕ್ಕೂ ಅವಕಾಶ ಕಲ್ಪಿಸಬೇಕು ಎಂದರು.

ಪ್ರತಿ ವರ್ಷ ಏಳು ಲಕ್ಷ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವೀಧರರನ್ನು ತಯಾರಿಸುತ್ತಿದ್ದೇವೆ. ಆದರೆ ಕೇವಲ ಶೇ. 25ರಷ್ಟು ಜನ ಮಾತ್ರ ಉದ್ಯೋಗಕ್ಕೆ ಅರ್ಹರು ಎಂದು ಉದ್ದಿಮೆ ಕ್ಷೇತ್ರ ಹೇಳುತ್ತಿದೆ ಎಂದರು.

ಜ್ಙಾನದಷ್ಟೇ ಧೈರ್ಯವೂ ಮುಖ್ಯ : ಯುವಜನತೆಗೆ ಜ್ಞಾನದ ಜೊತೆಗೆ ಅದನ್ನು ಪ್ರತಿಪಾದಿಸುವ ಧೈರ್ಯವೂ ಮುಖ್ಯ ಎಂದು ರಾಜಪಾಲ ವಜುಭಾಯಿ ರೂಡಾಭಾಯಿ ವಾಲ ಹೇಳಿದರು.

ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಬಹುಪಾಲು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರತಿಯೊಬ್ಬರೂ ಗ್ರಾಮೀಣ ಪ್ರದೇಶದ ಒಬ್ಬ ಬಾಲಕಿಯ ಶಿಕ್ಷಣದ ಜವಾಬ್ದಾರಿ ಹೊತ್ತರೆ ಮಹಿಳಾ ಸಬಲೀಕರಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಕೃಷಿ ಸಚಿವ ಕೃಷ್ಣ ಭೈರೇಗೌಡ ಮುಂತಾದವರು ಪಾಲ್ಗೊಂಡಿದ್ದರು.

English summary
Vice President of India Hamid Ansari has inaugurated the golden jubilee celebrations of R.V. Engineering college in Bengaluru. Governor Vajubhai Vala, cheif minister Siddaramaiah and many other ministers were also present in the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X