ಬಿಎಂಟಿಸಿ ಟಿಕೆಟ್ ದರ ಅರ್ಧದಷ್ಟು ಇಳಿಕೆಯಾಗಲಿದೆ?

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 02 : ಬಸ್ ಟಿಕಟ್ ದರ ಅರ್ಧದಷ್ಟು ಕಡಿಮೆ ಮಾಡಿದರೆ ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ಎಚ್. ಎಂ. ರೇವಣ್ಣ ಅವರಿಗೆ ಮನವಿ ಮಾಡಿದರು.

ಬೆಂಗಳೂರಿನ ಇಂದಿರಾ ಕ್ಲಿನಿಕ್ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಸ್ ಟಿಕೆಟ್ ದರವನ್ನು ಅರ್ಧದಷ್ಟು ಇಳಿಕೆ ಮಾಡಬಹುದು , ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ. ಜತೆಗೆ ಮೆಟ್ರೋ ಮತ್ತು ಬಸ್ ಪ್ರಯಾಣಿಸುವವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ರೇವಣ್ಣ ಅವರಲ್ಲಿ ಮನವಿ ಮಾಡಿದರು.

Half of Bus fare cut down: Dinesh urged

ಈ ಹೇಳಿಕೆಯ ಮೂಲಕ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಂಧನ ದರಕ್ಕನುಗುಣವಾಗಿ ಅಲ್ಪಮೊತ್ತದ ದರವನ್ನು ಇಳಿಸದ ಸರ್ಕಾರ ಇನ್ನು ಅರ್ಧದಷ್ಟು ಮೊತ್ತದ ದರವನ್ನು ಇಳಿಸುವುದು ಕಾರ್ಯಸಾಧುವಲ್ಲ ಪ್ರಚಾರಕ್ಕಾಗಿ ಹೇಳಿದ್ದು ಎಂದು ಪ್ರತಿಪಕ್ಷದವರ ಟೀಕೆಯಾಗಿದೆ.

ಬಿಎಂಟಿಸಿ ಕಳೆದ ಫೆಬ್ರವರಿಯಲ್ಲಿ ಬಸ್​ ದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿತ್ತು. ಚಿಲ್ಲರೆ ಸಮಸ್ಯೆ ಸರಿದೂಗಿಸಲು ಸ್ಟೇಜ್​ ಆಧಾರದಲ್ಲಿ ಬಸ್​ ದರ ಇಳಿಕೆ ಮಾಡಲಾಗಿತ್ತು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KPCC working president Dinesh Gundurao urged transport minister HM Revanna that the bus fare should be cut down up to fifty percent to promote the public transport system in the same.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ