ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ ಎಎಲ್ ರಸ್ತೆಯಲ್ಲಿ ಅಂಡರ್ ಪಾಸ್: ಕೊನೆಗೂ ಪಾಲಿಕೆಗೆ ದಕ್ಕಿದ ಭೂಮಿ

By Nayana
|
Google Oneindia Kannada News

ಬೆಂಗಳೂರು, ಜು.9: ಬೆಂಗಳೂರಿನ ಎಚ್‌ಎಎಲ್ ರಸ್ತೆಯಲ್ಲಿ ಜನದಟ್ಟಣೆ ತಪ್ಪಿಸಲು ಅಂಡರ್ ಪಾಸ್ ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಎಚ್‌ಎಎಲ್ ಗೆ ಸೇರಿದ 31 ಸಾವಿರ ಚದರ ಅಡಿ ಭೂಮಿಯನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಸೋಮವಾರ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಎಚ್‌ಎಎಲ್ ರಸ್ತೆಯ ಸುರಂಜನ್ ದಾಸ್ ರಸ್ತೆ ಜಂಕ್ಷನ್‌ನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಿಸುವುದು ಹಾಗೂ ಇದೇ ಮಾರ್ಗದ ಮೂಲಕ 55 ಕೋಟಿ ರೂ. ವೆಚ್ಚದಲ್ಲಿ ವಿಂಡ್ ಟನೆಲ್ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ಎಚ್‌ಎಎಲ್ ರಸ್ತೆಯಲ್ಲಿ ದಿನವಿಡೀ ಉದ್ಭವಿಸುವ ಟ್ರಾಫಿಕ್ ಜಾಮ್ ತಪ್ಪಿಸಬಹುದಾಗಿದೆ ಎಂಬುದು ಬಿಬಿಎಂಪಿ ಉದ್ದೇಶ. ಎಚ್‌ಎಎಲ್ ಅಧ್ಯಕ್ಷ ಸುವರ್ಣರಾಜು ಸೋಮವಾರ ಒಡಂಬಡಿಕೆಗೆ ಸಹಿ ಹಾಕಿದರು.

HAL finally transfers land to BBMP for underpass in HAL road

ಬಿಬಿಎಂಪಿಯಿಂದ 2 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ಸ್ವಚ್ಛತಾ ಕಾರ್ಯಬಿಬಿಎಂಪಿಯಿಂದ 2 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ಸ್ವಚ್ಛತಾ ಕಾರ್ಯ

ಎಚ್‌ಎಎಲ್‌ನಲ್ಲಿನ ಜನದಟ್ಟಣೆ ತಪ್ಪಿಸಲು ಅಂಡರ್‌ಪಾಸ್‌ ನಿರ್ಮಿಸಲು ಬಿಬಿಎಂಪಿ ಮುಂದಾಗಿತ್ತು ಆದರೆ ಸ್ಥಳಾವಕಾಶದ ಕೊರತೆ ಇದ್ದಿದ್ದರಿಂದ ಆ ಯೋಜನೆ ನೆನಗುದಿಗೆ ಬಿದ್ದಿತ್ತು, ಇದೀಗ ಮತ್ತೆ ಮರುಜೀವ ಬಂದಿದ್ದು, 31 ಸಾವಿರ ಚದರಡಿ ಭೂಮಿ ಬಿಬಿಎಂಪಿ ದೊರೆತಿದೆ, ಶೀಘ್ರ ಅಂಡರ್‌ಪಾಸ್‌ ನಿ೮ರ್ಮಾಣ ಕಾರ್ಯ ಆರಂಭವಾಗಲಿದೆ.

English summary
HAL has signed memorandum of understanding of land transfer to BBMP for construction of underpass near Suranjan Das road junction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X