ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಗಾಂಧಿ ಜೊತೆ ಎಚ್ಎಎಲ್ ಉದ್ಯೋಗಿಗಳ ಸಂವಾದವಿಲ್ಲ

|
Google Oneindia Kannada News

Recommended Video

ರಾಹುಲ್ ಗಾಂಧಿ ಜೊತೆ ಎಚ್ಎಎಲ್ ಉದ್ಯೋಗಿಗಳ ಸಂವಾದವಿಲ್ಲ | Oneindia Kannada

ಬೆಂಗಳೂರು, ಅಕ್ಟೋಬರ್ 13 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎಚ್‌ಎಎಲ್‌ಗೆ ಭೇಟಿ ನೀಡುವ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಯಾವುದೇ ನೇತಾರರ ಜೊತೆ ಸಂವಾದ ನಡೆಸಬಾರದು ಎಂದು ಎಚ್‌ಎಎಲ್ ಉದ್ಯೋಗಿಗಳಿಗೆ ಸೂಚನೆ ನೀಡಿದೆ.

ಶನಿವಾರ ರಾಹುಲ್ ಗಾಂಧಿ ಅವರು ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಅವರು ಎಚ್‌ಎಎಲ್ ಉದ್ಯೋಗಿಗಳ ಜೊತೆ ಸಂವಾದ ನಡೆಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ, ಈಗ ಉದ್ಯೋಗಿಗಳು ಸಂವಾದ ನಡೆಸದಂತೆ ಸೂಚಿಸಲಾಗಿದೆ.

ಎಚ್ ಎಎಲ್ ನೌಕರರ ಸಂಘ ರಾಹುಲ್ ಭೇಟಿಗೆ ಸಿದ್ಧವಿಲ್ಲ: ಸಂಸದ ಮೋಹನ್ಎಚ್ ಎಎಲ್ ನೌಕರರ ಸಂಘ ರಾಹುಲ್ ಭೇಟಿಗೆ ಸಿದ್ಧವಿಲ್ಲ: ಸಂಸದ ಮೋಹನ್

Rahul Gandhi

ರಾಹುಲ್ ಗಾಂಧಿ ಅವರು ಕಬ್ಬನ್ ಪಾರ್ಕ್‌ನಲ್ಲಿ ಎಚ್‌ಎಎಲ್‌ನ ನಿವೃತ್ತ ಉದ್ಯೋಗಿಗಳು ಮತ್ತು ಈಗ ಕಾರ್ಯ ನಿರ್ವಹಿಸುತ್ತಿರುವ ಕೆಲವು ನೌಕರರ ಜೊತೆ ಸಂವಾದ ನಡೆಸುವ ನಿರೀಕ್ಷೆ ಇದೆ. ಎಚ್‌ಎಎಲ್ ಉದ್ಯೋಗಿಗಳ ಜೊತೆ ಸಂವಾದ ನಡೆಸುವ ಕಾರ್ಯಕ್ರಮ ರಾಜಕೀಯ ತಿರುವು ಪಡೆದಿದೆ.

ರಫೇಲ್ ಡೀಲ್ ಕುರಿತು ಕಬ್ಬನ್‌ಪಾರ್ಕ್‌ನಲ್ಲಿ ರಾಹುಲ್ ಸಂವಾದರಫೇಲ್ ಡೀಲ್ ಕುರಿತು ಕಬ್ಬನ್‌ಪಾರ್ಕ್‌ನಲ್ಲಿ ರಾಹುಲ್ ಸಂವಾದ

ಕಾಂಗ್ರೆಸ್ ಭವನದಿಂದ ಎಚ್‌ಎಎಲ್ ತನಕ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆ ಪಾದಯಾತ್ರೆ ನಡೆಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಇದರ ಬಗ್ಗೆ ಉದ್ಯೋಗಿಗಳು ಚರ್ಚೆ ನಡೆಸಬಹುದು' ಎಂದು ಕಾಂಗ್ರೆಸ್ ನಾಯಕ ಬಿ.ಎಲ್.ಶಂಕರ್ ಹೇಳಿದ್ದಾರೆ.

ರಫೇಲ್ ಡೀಲ್: ರಿಲಯನ್ಸ್ ಜತೆ ನಡೆದಿರುವುದು ಸಣ್ಣ ಒಪ್ಪಂದವಷ್ಟೇರಫೇಲ್ ಡೀಲ್: ರಿಲಯನ್ಸ್ ಜತೆ ನಡೆದಿರುವುದು ಸಣ್ಣ ಒಪ್ಪಂದವಷ್ಟೇ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಹಗರಣದ ಕುರಿತು ಶನಿವಾರ ಮಧ್ಯಾಹ್ನ 3.30ಕ್ಕೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಕಬ್ಬನ್ ರಸ್ತೆಯಲ್ಲಿರುವ ಮಿನ್ಸ್‌ ಸ್ಕ್ವೇರ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

English summary
Hindustan Aeronautics Ltd (HAL) issued a veiled threat to it's employees not to meet AICC president Rahul Gandhi on October 13, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X