ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಉದ್ಘಾಟನೆಗೆ ಸಜ್ಜಾದ ಹಜ್ ಘರ್ : ಸಚಿವ ಬೇಗ್

By Mahesh
|
Google Oneindia Kannada News

ಬೆಂಗಳೂರು, ಜುಲೈ 31: ರಾಜ್ಯ ಸರ್ಕಾರದಿಂದ ನಿರ್ಮಿಸುತ್ತಿರುವ ಹಜ್ ಘರ್ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಆಗಸ್ಟ್ 27 ರಂದು ಉದ್ಘಾಟಿಸಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ತಿಳಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿರುವ ಟೆನ್ನಿಸ್ ಪೆವಿಲಿಯನ್ ನಲ್ಲಿ ಭಾನುವಾರದಂದು ರಾಜ್ಯ ಹಜ್ ಸಮಿತಿ ಹಾಗೂ ಇಂಡಿಯನ್ ಹಜ್ ಟ್ರೈನಿಂಗ್ ಫೋರಂ ವತಿಯಿಂದ ಹಜ್ ಯಾತ್ರಿಗಳಿಗಾಗಿ ಆಯೋಜಿಸಲಾಗಿದ್ದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಚಿವ ಬೇಗ್ ಮಾತನಾಡಿದರು. [ಹಜ್ ಯಾತ್ರಿಗಳಿಗೆ ಫ್ರೆಶ್ ಚಿಕನ್, ಮಟನ್ : ಬೇಗ್]

ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ತೆರಳುವ ಯಾತ್ರಿಗಳ ವಿಮಾನಗಳು ಆಗಸ್ಟ್ 28 ರಿಂದ ಸೆಪ್ಟೆಂಬರ್ 2ರವರೆಗೆ ಸಂಚರಿಸಲಿವೆ. ಆಗಸ್ಟ್ .27ರಂದು ಸಂಜೆ ವಿಮಾನಯಾನದ ಚಾಲನೆ ಹಾಗೂ ಹಜ್ ಘರ್ ಉದ್ಘಾಟನಾ ಸಮಾರಂಭ ನೆರವೇರಲಿದೆ ಎಂದು ಅವರು ಹೇಳಿದರು.

ವಿಮಾನಗಳ ಸಮಯವು ಬೆಳಗ್ಗೆ 9 ಮಧ್ಯಾಹ್ನ 2ಗಂಟೆಗೆ ನಿಗದಿ ಪಡಿಸಲಾಗಿತ್ತು. ಯಾತ್ರಿಗಳಿಗೆ ಈ ಅವಧಿಯಲ್ಲಿ ಕರೆದುಕೊಂಡು ಹೋಗುವುದು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದವು. ಈ ಸಂಬಂಧ ಹೊಸದಿಲ್ಲಿಗೆ ತೆರಳಿ ಸಂಬಂಧಪಟ್ಟ ಕೇಂದ್ರ ಸಚಿವರು ಹಾಗೂ ಏರ್ ಇಂಡಿಯಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವಿಮಾನಗಳ ಸಮಯವನ್ನು ರಾತ್ರಿ ನಿಗದಿಗೊಳಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಅತ್ಯುತ್ತಮ ಹಜ್ ಘರ್ ಇದಾಗಿದೆ

ದೇಶದಲ್ಲಿ ಅತ್ಯುತ್ತಮ ಹಜ್ ಘರ್ ಇದಾಗಿದೆ

ಹಜ್ ಘರ್ ನಲ್ಲಿ 100 ಕೊಠಡಿಗಳು ಇರುತ್ತವೆ. 600 ಮಂದಿ ಉಳಿದುಕೊಳ್ಳಬಹುದು. ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಕೈಗೊಳ್ಳಲು ಬೆಂಗಳೂರಿಗೆ ಬರುವ ಇತರ ಜಿಲ್ಲೆ ಹಾಗೂ ರಾಜ್ಯದ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಉಚಿತ ಅವಕಾಶ ನೀಡಲಾಗುವುದು. ವಲಸೆ ಮತ್ತು ಕಸ್ಟಂ ತಪಾಸಣೆಗಳು ಹಜ್ ಶಿಬಿರದಲ್ಲಿಯೆ ನಡೆಯುವ ನಿದರ್ಶನ ಎಲ್ಲಿಯೂ ಇಲ್ಲ ಎಂದು ಸಚಿವ ಬೇಗ್ ಹೇಳಿದರು.

ಹಜ್ ಯಾತ್ರೆಗೆ ರಾಜ್ಯದಿಂದ 5 ಸಾವಿರ ಯಾತ್ರಾರ್ಥಿ

ಹಜ್ ಯಾತ್ರೆಗೆ ರಾಜ್ಯದಿಂದ 5 ಸಾವಿರ ಯಾತ್ರಾರ್ಥಿ

ಇಸ್ಲಾಂ ಧರ್ಮದ 5 ಕಡ್ಡಾಯ ತತ್ವಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವು ಅತಿ ಹೆಚ್ಚಿನ ಹಜ್ ಯಾತ್ರಾರ್ಥಿಗಳನ್ನು ಕಳುಹಿಸುವಲ್ಲಿ 2ನೇ ಸ್ಥಾನದಲ್ಲಿದೆ. 20 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗುವುದು ಲೈನ್ ಲಾಟರಿ ಮೂಲಕ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

 ರಾಜ್ಯದಾದ್ಯಂತ ತರಬೇತಿಗಳು ನಡೆಯುತ್ತವೆ.

ರಾಜ್ಯದಾದ್ಯಂತ ತರಬೇತಿಗಳು ನಡೆಯುತ್ತವೆ.

ಭಾರತ ಸರ್ಕಾರದ ವಿದೇಶಾಂಗ ಶಾಖೆ, ರಾಷ್ಟ್ರದ ಎಲ್ಲಾ ರಾಜ್ಯ ಹಜ್ ಸಮಿತಿಗಳಿಗೆ, ಹಜ್ ಯಾತ್ರಾರ್ಥಿಗಳಿಗೆ ತರಬೇತಿ ನೀಡಬೇಕೆಂದು ನಿರ್ದೇಶಿಸಿರುವುದರಿಂದ ರಾಜ್ಯದಾದ್ಯಂತ ತರಬೇತಿಗಳು ನಡೆಯುತ್ತವೆ ಎಂದು ಇಂಡಿಯನ್ ಹಜ್ ಟ್ರೈನಿಂಗ್ ಫೋರಂ ಸದಸ್ಯರು ವಿವರಿಸಿದರು.

ಹಜರತ್ ಲೂತ್‍ಫುಲ್ಲಾ ಮಜಹರ್ ರಷಾದಿ

ಹಜರತ್ ಲೂತ್‍ಫುಲ್ಲಾ ಮಜಹರ್ ರಷಾದಿ

ಈ ತರಬೇತಿಯಲ್ಲಿ ಯಾತ್ರಾರ್ಥಿಗಳಿಗೆ ಅವರ ಅಂತಾರಾಷ್ಟ್ರೀಯ ಪ್ರಯಾಣ, ಮೆಕ್ಕಾ ನಗರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಯ ಪರಿಚಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 30 ದಿವಸ ಸೌದಿ ಅರೇಬಿಯಾದಲ್ಲಿ ಆರೋಗ್ಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಪರಿಚಯ ಸೇರಿದಂತೆ ಇದರೊಂದಿಗೆ ಧಾರ್ಮಿಕವಾಗಿ ಬೋಧನೆ ನೀಡಲಾಗುವುದು. ಇಂಡಿಯನ್ ಹಜ್ ಟ್ರೈನಿಂಗ್ ಫೋರಂ ಪರವಾಗಿ ಹಜರತ್ ಲೂತ್‍ಫುಲ್ಲಾ ಮಜಹರ್ ರಷಾದಿ ವಿವರಿಸಿದರು.

ಭಾರತೀಯ ಆಹಾರವನ್ನೇ ಒದಗಿಸುವ ಭರವಸೆ

ಭಾರತೀಯ ಆಹಾರವನ್ನೇ ಒದಗಿಸುವ ಭರವಸೆ

ಮದೀನಾದಲ್ಲಿ ಯಾತ್ರಿಗಳು ತಮ್ಮ ವಸತಿ ಗೃಹಗಳಲ್ಲಿ ಅಡುಗೆ ಮಾಡುವುದನ್ನು ಸೌದಿ ಅರೇಬಿಯಾದ ಸರ್ಕಾರ ನಿಷೇಧಿಸಿರುವ ಹಿನ್ನಲೆಯಲ್ಲಿ ಭಾರತೀಯ ಹಜ್ ಯಾತ್ರಿಗಳಿಗೆ ಭಾರತೀಯ ಆಹಾರವನ್ನೇ ಒದಗಿಸುವ ಬಗ್ಗೆ ವಸತಿ ಸೌಲಭ್ಯ ಒದಗಿಸುವ 6 ಸಂಸ್ಥೆಗಳೊಂದಿಗೆ ಭಾರತದ ಕೇಂದ್ರ ಹಜ್ ಸಮಿತಿಯ ನಿಯೋಗವು ಒಪ್ಪಂದ ಮಾಡಿಕೊಂಡಿದೆ


English summary
The construction of the Haj Ghar is nearly complete and it will be inaugurated on August 27, 2016 said Haj Minister R Roshan Baig. With the Haj Ghar pilgrims can get their emigration, Visa and customs clearance under one roof.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X