ಕೂದಲು ಆರೈಕೆಗೆ ಸಮಗ್ರ ಮಾರ್ಗದರ್ಶನ ನೀಡುವ ಪುಸ್ತಕ

Subscribe to Oneindia Kannada

ಬೆಂಗಳೂರು, ಆಗಸ್ಟ್, 25: ಕೂದಲು ಆರೈಕೆ ಬಗ್ಗೆ ಸದಾ ಜಾಗೃತಿ ಸಾರುತ್ತಿರುವ ಹೇರ್ ಲೈನ್ ಇಂಟರ್ ನ್ಯಾಶನಲ್ ಇದೀಗ ಪುಸ್ತಕವೊಂದನ್ನು ಬಿಡುಗಡೆ ಮಾಡಿದೆ.

ಹೇರ್ ಲೈನ್ ಇಂಟರ್ ನ್ಯಾಶನಲ್ ಅಂಡ್ ಸ್ಕಿನ್ ಕ್ಲಿನಿಕ್ 'ಪ್ರಿವೆನ್ಷನ್ ಅಂಡ್ ಮ್ಯಾನೇಜ್ ಮೆಂಟ್ ಆಫ್ ಹೇರ್ ಲಾಸ್, ಎ ಗೈಡ್ ಟು ನ್ಯೂಟ್ರೀಶಿನಲ್ ಅಂಡ್ ಲೈಫ್ ಸ್ಟ್ಐಲ್ ಫ್ಯಾಕ್ಟರ್ಸ್' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.[ಕಾಡುವ ಬೋಳುತಲೆಗೆ ಬೆಸ್ಟ್ ಪರಿಹಾರ ಇಲ್ಲಿದೆ!]

ಹೇರ್ ಲೈನ್ ಇಂಟರ್ ನ್ಯಾಶನಲ್ ನ ಡರ್ಮಟೋಸರ್ಜನ್ ಡಾ.ಪ್ರೇಮಲತ ಮತ್ತು ಡಾ.ಇಮ್ತಿಯಾಜ್ ಈ ಪುಸ್ತಕದ ಸಹ ಲೇಖಕರು. ಪೌಷ್ಠಿಕಾಂಶದ ಕೊರತೆ ಮತ್ತು ಜೀವನಶೈಲಿಯ ಏರುಪೇರಿನಿಂದಾಗಿ ಯಾವ ರೀತಿ ಕೂದಲು ಉದುರುತ್ತದೆ ಮತ್ತು ಅದಕ್ಕೆ ಪರಿಹಾರಗಳೇನು? ಕೂದಲು ರಕ್ಷಣೆ ಹೇಗಿರಬೇಕು? ಎಂಬುದರ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ.

Hairline International Launches Book Advice on Hair Loss Prevention

ಕೂದಲು ರಕ್ಷಣೆ ಯಾವ ರೀತಿ ಮಾಡಬೇಕು, ರಕ್ಷಣೆಗೆ ವೈದ್ಯೋಪಚಾರ ಯಾವ ರೀತಿ ಇರಬೇಕು, ಕೂದಲು ರಕ್ಷಣೆಗೆ ಯಾವ ರೀತಿಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು, ಆರೋಗ್ಯವಂತ ಕೂದಲಿನ ಪೋಷಣೆ ಯಾವ ರೀತಿ ಇರಬೇಕು ಎಂಬುದು ಸೇರಿದಂತೆ ಹತ್ತು ಹಲವಾರು ಸಲಹೆ ಸೂಚನೆಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.[ನಿಮ್ಮ ಕೇಶ ವಿನ್ಯಾಸ ಹೇಗಿರಬೇಕು]

ಯಾವ ರೀತಿ ಪೌಷ್ಟಿಕಾಂಶ ಮತ್ತು ಜೀವನಶೈಲಿಯ ಕೊರತೆ ಕೂದಲು ಹಾನಿಗೆ ಕಾರಣವಾಗಬಲ್ಲದು ಮತ್ತು ಇದಕ್ಕೆ ಪರಿಹಾರಗಳೇನು ಎಂಬುದನ್ನು ಈ ಪುಸ್ತಕದಲ್ಲಿ ಓದುಗರಿಗೆ ನೀಡಲಾಗಿದೆ.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹೇರ್ ಲೈನ್ ಇಂಟರ್ ನ್ಯಾಶನಲ್ ಅಂಡ್ ಸ್ಕಿನ್ ಕ್ಲಿನಿಕ್ ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬನಿ ಆನಂದ್ , ಕೂದಲು ಸಮಸ್ಯೆಯನ್ನು ತಡೆಗಟ್ಟುವುದೇ ಉತ್ತಮ ಮಾರ್ಗ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅದೇ ರೀತಿ ಜನರೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಆರೋಗ್ಯಕಾರಿ ಜೀವನಶೈಲಿಯನ್ನು ರೂಢಿಸಿಕೊಂಡರೆ ಹಲವು ರೋಗಗಳನ್ನು ದೂರವಿಡಬಹುದು. ಅಂಥ ಮಾರ್ಗದರ್ಶನಗಳು ಪುಸ್ತಕದಲ್ಲಿದೆ ಎಂದು ತಿಳಿಸಿದರು.

ಈ ಪುಸ್ತಕ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ : ವೇದ-09148874972 ಅವರನ್ನು ಸಂಪರ್ಕಿಸಬಹುದು, ವೆಬ್ ತಾಣಕ್ಕೆ ಭೇಟಿ ನೀಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hairline International Hair and Skin Clinic unveiled a book titled Prevention and Management of Hair Loss, a Guide to Nutritional and Lifestyle Factors, recently. This book has been co-authored by Dr. Premalatha, Dermatosurgeon, Hairline International and Dr. Imtiaz, Dermatologist, Hairline International.
Please Wait while comments are loading...