ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೇರ್‍ ಅಲರ್ಜಿಗೆ ಹೇರ್ ಲೈನ್ ಇಂಟರ್ ನ್ಯಾಷನಲ್ ನೀಡುತ್ತಿದೆ ಪರಿಹಾರ

ಮಹಿಳೆ ಮತ್ತು ಪುರುಷರ ಕೂದಲು ಉದುರುವುವಿಕೆ, ಚರ್ಮ, ಸೌಂದರ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿಗೆ ಹೇರ್ ಲೈನ್ ಇಂಟರ್ ನ್ಯಾಷನಲ್‌ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ನಿವಾರಣೆ ನೀಡುತ್ತಿದೆ.

By Ramesh
|
Google Oneindia Kannada News

ಬೆಂಗಳೂರು, ಅಕ್ಟೋಬರ್. 19: ಹೇರ್‍ಡೈನಿಂದ ಅಲರ್ಜಿ ಅನುಭವಿಸುತ್ತಿರುವವರು, ಹೇರ್ ಡೈ ಬಳಕೆ ಆರಂಭಿಸಲು ಚಿಂತಿಸುತ್ತಿರುವವರು ಅಥವಾ ಈಗಾಗಲೇ ಹೇರ್ ಡೈ ಬಳಸುತ್ತಿರುವವರಿಗೆ ಹೇರ್‍ಲೈ ನ್ ಇಂಟರ್ ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್ ಸೂಕ್ತ ಪರಿಹಾರವನ್ನು ಒದಗಿಸಲಿದೆ.

ಈ ಅಲರ್ಜಿ ಪರೀಕ್ಷೆಯನ್ನು ಪರಿಚಯಿಸಿ ಮಾತನಾಡಿದ ಹೇರ್‍ಲೈ ನ್ ಇಂಟರ್ ನ್ಯಾಷನಲ್‍ ನ ಡರ್ಮೆಟೋಸರ್ಜನ್ ಡಾ.ಪ್ರೇಮಲತಾ ಅವರು, "ಹೇರ್ ಡೈ ಬಳಸುವ ಬಹತೇಕ ಜನರು ಕೂದಲು ಉದುರುವ ಬಗ್ಗೆ ಸಮಸ್ಯೆ ಹೇಳಿಕೊಳ್ಳುತ್ತಾರೆ. ದೀರ್ಘಕಾಲದ ಅಲರ್ಜಿಯಿಂದಾಗಿ ನೆತ್ತಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವುದು, ಮೊಡವೆ ಮೂಡುವುದು ಸೇರಿದಂತೆ ಹಲವು ರೀತಿಯಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಾರೆ. ರೆಪ್ಪೆಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ ಅಥವಾ ಉಸಿರುಗಟ್ಟುವಂತಹ ಸ್ಥಿತಿ ಬರಬಹುದು" ಎಂದು ಎಚ್ಚರಿಕೆ ನೀಡಿದರು. [ಬೆಂಗಳೂರಿನ ಇಂಟರ್ ನ್ಯಾಷನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ನಂ.1]

Hair Line

ಪರೀಕ್ಷೆ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ ಹೇರ್‍ಲೈ ನ್ ಇಂಟರ್ ನ್ಯಾಷನಲ್‍ ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಬನಿ ಆನಂದ್ ಅವರು, ಈಗಿನ ದಿನಗಳಲ್ಲಿ ಜನರು ತಮ್ಮ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. [ಕಾಡುವ ಬೋಳುತಲೆಗೆ ಬೆಸ್ಟ್ ಪರಿಹಾರ ಇಲ್ಲಿದೆ!]

ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಉತ್ಪನ್ನಗಳಿಂದ ತಮಗೆ ಯಾವುದೇ ಅನಾನುಕೂಲ ಅಥವಾ ತೊಂದರೆ ಆಗಬಾರದು ಎಂದು ಬಯಸುತ್ತಾರೆ. ಇದರಿಂದ ಅಲರ್ಜಿಮುಕ್ತ ಉತ್ಪನ್ನಗಳ ಬಳಕೆ ಮತ್ತು ಆರೋಗ್ಯದ ಸುರಕ್ಷತೆಗೆ ಈ ಅಲರ್ಜಿ ಪರೀಕ್ಷಾ ವಿಧಾನ ಸಹಕಾರಿಯಾಗುತ್ತದೆ'' ಎಂದು ಭರವಸೆ ನೀಡಿದರು.

ಹೇರ್‍ಲೈ ನ್ ಹೊರತಂದಿರುವ ಈ ಪರೀಕ್ಷಾ ಕಿಟ್‍ ನಲ್ಲಿ ಅಲರ್ಜಿ ನಿರೋಧಕ ಇಂಜಕ್ಷನ್ ಸಿರಿಂಜ್ ಇರುತ್ತದೆ. ಇದರ ಜತೆಗೆ ಅಮೋನಿಯಾ ಮತ್ತು ಪಿಪಿಟಿ ಸೇರಿದಂತೆ ಮತ್ತಿತರೆ ಔಷಧಗಳು ಇರುತ್ತವೆ.

ಒಬ್ಬ ವ್ಯಕ್ತಿಗೆ ಇಂಜಕ್ಷನ್ ನೀಡಲಾಗುತ್ತದೆ. ಈ ಜಾಗದಲ್ಲಿ ಪೆಟ್ರೋಲಿಯಂ ಜೆಲ್ಲಿಯೊಂದಿಗೆ ಸಿಲ್ವರ್ ಫಾಯಲ್ ಅನ್ನು ಅಂಟಿಸಲಾಗುತ್ತದೆ. 48 ಗಂಟೆಗಳ ನಂತರ ಈ ಸಿಲ್ವರ್ ಫಾಯಲ್ ಅನ್ನು ತೆಗೆಯಲಾಗುತ್ತದೆ. ಆಗ ಆ ಜಾಗದಲ್ಲಿ ಕೆಂಪು ಬಣ್ಣ ಇದೆಯೇ ಅಥವಾ ಇನ್ನಿತರೆ ಲಕ್ಷಣಗಳು ಕಾಣುತ್ತವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.

ಇದರ ಆಧಾರದಲ್ಲಿ ಹೇರ್‍ಲೈ ನ್ ಇಂಟರ್ ನ್ಯಾಷನಲ್‍ ನ ವೃತ್ತಿಪರರು ಪರೀಕ್ಷಿಸುತ್ತಾರೆ. ಈ ಪರೀಕ್ಷೆಯನ್ನು ಲಿಪ್ ಸ್ಟಿಕ್ಸ್, ಐ ಶಾಡೋಸ್, ಕ್ರೀಂಗಳಿಗೂ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ- ವೇದ: 080 48874972, 9739943112 ಅಥವಾ ವೆಬ್ ಸೈಟ್ www.hairline.in ಇಲ್ಲಿಗೆ ಸಂಪರ್ಕಿಸಬಹುದು.

English summary
Dr. Premalatha, Dermatologist, Hairline International Hair and Skin Clinic says, “Treatments such as Prostaglandin are what are known as maintenance therapies which inhibit loss of hair and encourage hair growth to a certain extent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X