ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿದ್ವಾಯಿ ಮಹಿಳಾ ಕ್ಯಾನ್ಸರ್ ರೋಗಿಗಳಿಗೆ ಉಚಿತ ವಿಗ್

By Rajendra
|
Google Oneindia Kannada News

ಬೆಂಗಳೂರು, ಮಾರ್ಚ್ 10: ಮಹಿಳಾ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಆದರೆ ಈ ಸಂಭ್ರಮದ ನಡುವೆ ಸಂಭ್ರಮಿಸಲು ಕಾರಣಗಳೇ ಇಲ್ಲದ ಕೆಲವು ಮಹಿಳೆಯರೂ ಇರುತ್ತಾರೆ. ಕೆಲವು ರೋಗಗಳು ಮನುಷ್ಯನ ಆತ್ಮಸ್ಥೆರ್ಯವನ್ನೇ ಉಡುಗಿಸುತ್ತವೆ. ಇಂತಹ ರೋಗಗಳಲ್ಲಿ ಕ್ಯಾನ್ಸರ್ ಕೂಡಾ ಒಂದು. ಕ್ಯಾನ್ಸರ್ ಮನುಷ್ಯನ ದೇಹ ಮತ್ತು ಮನಸ್ಸು ಮಾತ್ರವಲ್ಲ, ಆತ್ಮಸ್ಥೈರ್ಯವನ್ನೂ ಅಳಿಸಿ ಬಿಡುತ್ತದೆ.

ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆ ವೇಳೆ ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಮತ್ತು ಕಿದ್ವಾಯಿ ಮೆಮೋರಿಯಲ್ ಇನ್ಸ್ ಟಿಟ್ಯೂಟ್ ಆಫ್ ಆನ್ಕಾಲಜಿ ಜಂಟಿಯಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳಾ ರೋಗಿಗಳಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ವಿಗ್ ಹಾಗೂ ಕೂಲಿಂಗ್ ಕ್ಯಾಪ್ ವಿತರಿಸಲಾಯಿತು. ವಿಗ್ ಗಳು ನೈಸರ್ಗಿಕ ಕೂದಲಿನಂತೆಯೇ ಕಾಣಿಸುತ್ತದೆ ಎನ್ನುವುದೂ ಇದರ ವಿಶೇಷ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹೇರ್ ಲೈನ್ ಇಂಟರ್ ನ್ಯಾಷನಲ್ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಬಾನಿ ಆನಂದ್, ಕೀಮೋಥೆರಪಿಯಿಂದಾಗಿ ಕ್ಯಾನ್ಸರ್ ರೋಗಿಯ ಕೂದಲು ಉದುರಲು ಆರಂಭವಾಗುತ್ತದೆ. ಮಹಿಳೆಯರಿಗೆ ಕೂದಲು ಉದುರುವುದೆಂದರೆ ಅವರ ಸ್ವಾಭಿಮಾನಕ್ಕೆ ಧಕ್ಕೆಯಾದಂತೆ. ಈ ಹಿನ್ನೆಲೆಯಲ್ಲಿ ನಾವು ಅವರಿಗೆ ಉತ್ಸಾಹ ತುಂಬಲು ವಿಗ್ ನೀಡುತ್ತಿದ್ದೇವೆ ಎಂದರು.

ಕ್ಯಾನ್ಸರ್ ನಿಂದ ಕೂದಲು ಉದುರುವ ಆರಂಭಿಕ ಹಂತದಲ್ಲಿರುವವರಿಗೆ ಆಮದು ಮಾಡಿಕೊಂಡ ಕೂಲಿಂಗ್ ಕ್ಯಾಪ್ ದಾನ ನೀಡುತ್ತೇವೆ. ಕೂಲಿಂಗ್ ಕ್ಯಾಪ್ ಕೂದಲು ಉದುರುವುದನ್ನು ತಡೆಯುತ್ತದೆ. ಕೀಮೋಥೆರಪಿ ಮಾಡುವ ವೇಳೆ ಈ ಕ್ಯಾಪ್ ಬಳಸುತ್ತಾರೆ. ಈ ವಿಧಾನವನ್ನು ಅನುಸರಿಸುವಾಗ ಪ್ರತಿ 2 ಗಂಟೆಗೊಮ್ಮೆ ಕೂಲಿಂಗ್ ಕ್ಯಾಪ್ ಬದಲಾಯಿಸಬೇಕಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕಿದ್ವಾಯಿ ಮೆಮೋರಿಯಲ್ ಇನ್ಸ್ ಟಿಟ್ಯೂಟ್ ಆಫ್ ಆನ್ಕಾಲಜಿ ನಿರ್ದೇಶಕ ಡಾ.ಎಂ. ವಿಜಯ್ ಕುಮಾರ್, ಕ್ಯಾನ್ಸರ್ ಮನುಷ್ಯನನ್ನು ವ್ಯವಸ್ಥಿತವಾಗಿ ನಾಶ ಮಾಡುವ ರೋಗ. ಸ್ತ್ರೀಯರಿಗೆ ಕೂದಲು ಎನ್ನುವುದೇ ಮಹಿಳೆ ಎಂಬುದರ ಸಂಕೇವಾಗಿದ್ದು, ಕೂದಲು ಉದುರಲು ಆರಂಭವಾದಾಗ ಭಾವನಾತ್ಮಕವಾಗಿ ತುಂಬಾ ನೋವನುಭವಿಸುತ್ತಾರೆ. ಈ ವಿಗ್ ಗಳು ಇಂತಹ ಮಹಿಳೆಯರಿಗೆ ತುಂಬಾ ಸಹಾಯಕ ಎಂದರು.

Hairline donates wigs, cooling caps to women cancer patients at Kidwai hospital

ಕಿದ್ವಾಯಿ ಮೆಮೋರಿಯಲ್ ಇನ್ಸ್ ಟಿಟ್ಯೂಟ್ ಆಫ್ ಆನ್ಕಾಲಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿದ್ವಾಯಿ ನಿರ್ದೇಶಕ ಡಾ.ಎಂ.ವಿಜಯ್ ಕುಮಾರ್ ಅವರಿಗೆ ವಿಗ್ ಗಳನ್ನು ಹಸ್ತಾಂತರಿಸಲಾಯಿತು. ಶೇ.50 ರಿಯಾಯಿತಿ: ಹೇರ್ ಲೈನ್ ನಲ್ಲಿ ಚಿಕಿತ್ಸೆ ಪಡೆಯುವ ಎಲ್ಲಾ ಮಹಿಳಾ ಕ್ಯಾನ್ಸರ್ ರೋಗಿಗಳಿಗೆ ಕೂದಲಿನ ಚಿಕಿತ್ಸೆಯಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಲಾಗಿದೆ.

ಬೆಂಗಳೂರಿನ ಇಂದಿರಾನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಬಾನಿ ಆನಂದ್ ನೇತೃತ್ವದಲ್ಲಿ ನಡೆಯುತ್ತಿದೆ. ಕೂದಲು, ಚರ್ಮ ಹಾಗೂ ಸೌಂದರ್ಯವರ್ಧನೆಗಾಗಿ ಹೇರ್ ಲೈನ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
On March 8, when the world celebrates womanhood – Hairline International Hair and Skin Clinic and Kidwai Memorial Institute of Oncology have come together for a meaningful purpose. Hairline International is providing high-quality wigs to the cancer institute for distribution among their female patients. These wigs are imported, and made of treated human hair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X