ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್ ವೈ ವೈಶಂಪಾಯನ ಸರೋವರದ ದುರ್ಯೋಧನ: ವಿಶ್ವನಾಥ್ ಲೇವಡಿ

By Nayana
|
Google Oneindia Kannada News

Recommended Video

ಬಿ ಎಸ್. ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ ಹೆಚ್ ವಿಶ್ವನಾಥ್ | Oneindia Kannada

ಬೆಂಗಳೂರು, ಸೆಪ್ಟೆಂಬರ್ 8: ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿರುವ ದುರ್ಯೋದನನಂತೆ ಹೋರಾಟದಿಂದ ಹಿಂದೆ ಸರಿಯುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜನಪರ ಕಾಳಜಿ ಇದ್ದರೆ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಹೋರಾಟಕ್ಕಿಳಿಯಬೇಕು ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್‌ ವಿಶ್ವನಾಥ್ ಸವಾಲು ಹಾಕಿದ್ದಾರೆ.

ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌ ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಶನಿವಾರ ಮಾತಾನಾಡಿದ ಅವರು, ಇತಿಹಾಸದಲ್ಲೇ ಗರಿಷ್ಠ ದರ ತಲುಪಿರುವ ಪಟ್ರೋಲ್ ಮತ್ತು ಡೀಸೆಲ್ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅಡುಗೆ ಅನಿಲ ಇಂಧನದ ದರ ಒಂದು ತಿಂಗಳಿಗೆ ಸಾವಿರ ರೂ.ವನ್ನು ತಲುಪುತ್ತಿದೆ. ಇಂತಹ ಪರಿಸ್ಥಿಯಲ್ಲಿ ಜನಸಾಮಾನ್ಯರು ಬದುಕಲು ಸಾಧ್ಯವೇ ಎಂದು ಕಳವಳ ವ್ಯಕ್ತಪಡಿಸಿದರು.

ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ? ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?

ಸೆಪ್ಟೆಂಬರ್ 10ರಂದು ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ, ಕಾಂಗ್ರೆಸ್ ಕರೆ ನೀಡಿರುವ ಬಂದ್‌ಗೆ ಜನಪರ ಕಾಳಜಿ ಇರುವುದರಿಂದ ನಮ್ಮ ಪಕ್ಷ ಕೂಡ ಬೆಂಬಲಿಸಲಿದೆ. ಜೆಡಿಎಸ್ ನಿಂದ ಟೌನ್‌ಹಾಲ್‌ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇಂಧನ ಮೇಲಿನ ತೆರಿಗೆ ಕಡಿತಕ್ಕೆ ಕೇಂದ್ರ ಸರ್ಕಾರ ನಿರಾಕರಣೆ ಇಂಧನ ಮೇಲಿನ ತೆರಿಗೆ ಕಡಿತಕ್ಕೆ ಕೇಂದ್ರ ಸರ್ಕಾರ ನಿರಾಕರಣೆ

H.Vishwanath challenges BSY to protest against fuel price

ಇದೇ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರಾಗಿರುವ ಡಿಕೆ ಶಿವಕುಮಾರ್ ವಿರುದ್ಧ ಐಟಿ, ಸಿಐಡಿ ಮತ್ತು ಇಡಿಗಳು ದಾಳಿ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸರ್ಕಾರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾವು ಡಿಕೆ ಶಿವಕುಮಾರ್ ಅವರನ್ನು ವಯಕ್ತಿಕವಾಗಿ ಬೆಂಬಲಿಸುತ್ತಿಲ್ಲ ಆದರೆ ಅವರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸುತ್ತೇವೆ ಎಂದು ಹೇಳಿದರು.

English summary
JDS state president H.Vishwanath has challenged state Bjp president B.S.Yeddyurappa to join hands with him in protesting against raise of fuel price if latter has concerned about the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X