ಕಾಂಗ್ರೆಸ್ ರೆಸಾರ್ಟ್ ರಾಜಕಾರಣ: ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು!

Posted By:
Subscribe to Oneindia Kannada

ಬೆಂಗಳೂರು, ಜುಲೈ 31: ಆಪರೇಶನ್ ಕಮಲಕ್ಕೆ ಹೆದರಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ರೆಸಾರ್ಟ್ ಗೆ ಬಂದು ತಂಗಿರುವ, ಗುಜರಾತಿನ 44 ಶಾಸಕರನ್ನು ಟ್ವಿಟ್ಟಿಗರು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ! ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತಮ್ಮ ಶಾಸಕರನ್ನು ಸೆಳೆಯಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಅರಿತ ಕಾಂಗ್ರೆಸ್ಸು ತನ್ನ ಶಾಸಕರನ್ನು ಉಳಿಸಿಕೊಳ್ಳಲು ಬೇರೆ ದಾರಿ ಕಾಣದೆ ರೆಸಾರ್ಟ್ ರಾಜಕಾರಣಕ್ಕೆ ಮೊರೆಹೋದಂತಿದೆ. ಗುಜರಾತಿನಲ್ಲಿ ಈಗಾಗಲೇ ಕಾಂಗ್ರೆಸ್ ನ 6 ಶಾಸಕರು ರಾಜೀನಾಮೆ ನೀಡಿದ್ದು ಈ ಭಯಕ್ಕೆ ಕಾರಣವಾಗಿದೆ.

'ಆಪರೇಷನ್ ಕಮಲ' ಭಯ, 44 ಗುಜರಾತ್ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ

ಬೆಂಗಳೂರು ಹೊರ ವಲಯದ ಬಿಡದಿಯ ಈಗಲ್ಟನ್ ದಿ ಗಾಲ್ಫ್ ಎಂಬ ಐಷಾರಾಮಿ ರೆಸಾರ್ಟಿನಲ್ಲಿ ಸೆಲ್ಫಿ ತೆಗೆದುಕೊಂಡು, ಬಗೆ ಬಗೆ ಖಾದ್ಯ ತಿನ್ನುತ್ತ, ಸ್ಪಾನಲ್ಲಿ ಉಚಿತ ಸೇವೆ ಮಾಡಿಸಿಕೊಂಡು ಹಾಯಾಗಿದ್ದಾರೆ. ಅತ್ತ ಗುಜರಾತು ಪ್ರವಾಹದಿಂದ ತತ್ತರಿಸಿ ಹೊಗಿರುವಾಗ ಶಾಸಕರ ಈ ಪರಿ ಬೇಜವಾಬ್ದಾರಿ ವರ್ತನೆಗೆ ಹಲವು ಛೀಮಾರಿ ಹಾಕುತ್ತಿದ್ದಾರೆ.

'ನಮಗೂ ನಮ್ಮ ರಾಜ್ಯದ ಬಗ್ಗೆ ಕಾಳಜಿ ಇದೆ. ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳುವ ಮನಸ್ಸಿದೆ. ಆದರೆ ಏನು ಮಾಡೋದು? ಬಿಜೆಪಿಯ ಕುತಂತ್ರಕ್ಕೆ ನಮ್ಮ ಶಾಸಕರು ಮಣಿದಾರೆಂಬ ಭಯಕ್ಕೆ ಇಲ್ಲಿಗೆ ಓಡಿಬಂದಿದ್ದೇವೆ' ಎಂಬುದು ಕಾಂಗ್ರೆಸ್ ಮುಖಂಡರೊಬ್ಬರ ಮಾತು!

ಬಿಜೆಪಿ ಬೆದರಿಕೆಯಿಂದ ಬೆಂಗಳೂರಿಗೆ ಬಂದಿದ್ದೇವೆ : ಗುಜರಾತ್ ಶಾಸಕರ ಅಳಲು

ಒಟ್ಟಿನಲ್ಲಿ ಕಾಂಗ್ರೆಸ್ ನ ರೆಸಾರ್ಟ್ ರಾಜಕೀಯ ಮಾತ್ರ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿರೋದು ಸುಳ್ಳಲ್ಲ.

ಇತ್ತ ಪ್ರವಾಹದ ಸಂಕಟ, ಅತ್ತ ರೆಸಾರ್ಟ್ ನಲ್ಲಿ ಮೋಜು!

ಗುಜರಾತಿನ ದೀಸಾ ಎಂಬ ಪ್ರದೇಶ ಪ್ರವಾಹದಿಂದ ಅತೀ ಹೆಚ್ಚು ಹಾನಿಗೊಳಗಾಗಿದೆ. ಆದರೆ ಅದರ ಎಂಎಲ್ ಎ ಗೋವಾಬಾಯ್ ಕರ್ನಾಟಕದ ಐಷಾರಾಮಿ ಹೊಟೇಲ್ ವೊಂದರಲ್ಲಿ ಮಜಾಮಾಡುತ್ತಿದ್ದಾರೆ ಎಂದು ಹರಿತಾ ವಾರಾಣಸಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಲಜ್ಜೆಗೇಡಿ ಶಾಸಕರು!

ಎನ್ ಡಿಆರ್ ಎಫ್, ಬಿಜೆಪಿ ಶಾಸಕರು ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಅವಿರತ ಶ್ರಮಿಸುತ್ತಿದ್ದರೆ, ಲಜ್ಜೆಗೇಡಿ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ನಲ್ಲಿಮಜಮಾಡುತ್ತಿದ್ದಾರೆ ಎಂದು ಸಂಜಿಬ್ ಘೋಷ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಭುತ್ವದ ಕೊಲೆಗಾರ ಕಾಂಗ್ರೆಸ್!

ನಿಜವಾಗಿಯೂ ಪ್ರಜಾಪ್ರಭುತ್ವವನ್ನು ಸಾಯಿಸುತ್ತಿರುವುದು ಕಾಂಗ್ರೆಸ್! ತನ್ನದೇ ಚುನಾಯಿತ ಪ್ರತಿನಿಧಿಗಳನ್ನು ಅಪಹರಿಸಿ ಅದು ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ ಎಂದು ಸೀಮಾ ಚೌಧರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಶಶಿಕಲಾ ನೆನಪಾಗುತ್ತಿದ್ದಾರೆ..!

ಗುಜರಾತ್ ಕಾಂಗ್ರೆಸ್ಸಿನ ಪ್ರಸ್ತುತ ಸ್ಥಿತಿಯನ್ನು ನೋಡಿದರೆ ಶಶಿಕಲಾ ನಟರಾಜನ್ ನೆನಪಾಗುತ್ತಿದ್ದಾರೆ. ಆಕೆ ಕೇವಲ ಶಾಸಕರನ್ನು ಮಾತ್ರವಲ್ಲ, ಅಧಿಕಾರ ಮತ್ತು ವಿಶ್ವಾಸಾರ್ಹತೆ ಎರಡನ್ನೂ ಕಳೆದುಕೊಂಡಂತೇ ಗುಜರಾತ್ ಶಾಸಕರೂ ಕಳೆದುಕೊಂಡಿದ್ದಾರೆ ಎಂದು ಗೀತಿಕಾ ಸ್ವಾಮಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ಸಿಗರು ಲಂಚಕ್ಕೆ ಕೈವೊಡ್ಡುವವರೇ?

ರೆಸಾರ್ಟ್ ರಾಜಕಾರಣದ ಮೂಲಕ ಕಾಂಗ್ರೆಸ್ ಏನನ್ನು ಒಪ್ಪಿಕೊಂಡಂತಾಯ್ತು? ಕಾಂಗ್ರೆಸ್ ಶಾಸಕರು ಲಂಚಕ್ಕೆ ಕೈವೊಡ್ಡಿ ಪಕ್ಷ ಬದಲಾಯಿಸಬಲ್ಲವರು ಎಂಬುದನ್ನೇ? ಎಂದು ಕಲ್ಪನಾ ಎಂಬುವವರು ಟ್ವೀಟ್ ಮಾಡಿದ್ದಾರೆ.

Till Rajya Sabha Election Gujarat Congress Mla stay In Bengaluru | Oneindia Kannada

ತನ್ನ ಶಾಸಕರನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಬ್ಯುಸಿ

ಗುಜರಾತ್ ರಾಜ್ಯ ಮಳೆ ಮತ್ತು ಪ್ರವಾಹದಿಂದ ಬಳಲುತ್ತಿದ್ದರೆ, ಕಾಂಗ್ರೆಸ್ ತನ್ನ ಶಾಸಕರನ್ನು ಮಾತ್ರ ರಕ್ಷಿಸುವಲ್ಲಿ ಉತ್ಸುಕತೆ ತೋರಿ, ಅವರನ್ನು ಬೆಂಗಳೂರಿಗೆ ಕಳಿಸಿಬಿಟ್ಟಿದೆ ಎಂದು ಪ್ರಕಾಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
"Gujarat is suffering due to heavy rain & flood but congress MLAs are enjoying in a resort in Bengaluru" twitterians are blaming Gujarat MLAs like this. Worrying of BJPs 'Operation BJP', the Congress MLAs moved to Bengaluru for few days. Here are the twitter reactions for the Resort Politics of Congress.
Please Wait while comments are loading...