ರೆಸಾರ್ಟ್ ನಲ್ಲಿ ಗುಜರಾತಿನ ಶಾಸಕರಿಗೆ ವಾಂತಿ ಬೇಧಿ

Subscribe to Oneindia Kannada

ಬೆಂಗಳೂರು, ಆಗಸ್ಟ್ 2: ನಗರದ ಬಿಡದಿಯ 'ಈಗಲ್ಟನ್‌ - ದಿ ಗಾಲ್ಫ್ ವಿಲೇಜ್' ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್‌ ಕಾಂಗ್ರೆಸ್ ನ ಕೆಲ ಶಾಸಕರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆಹಾರ ವ್ಯತ್ಯಾಸದಿಂದ ಕೆಲ ಶಾಸಕರು ವಾಂತಿ ಬೇಧಿಗೆ ತುತ್ತಾಗಿದ್ದಾರೆ.

ರೆಸಾರ್ಟ್ ರಾಜಕೀಯದ ಕೇಂದ್ರಬಿಂದು ಕರ್ನಾಟಕ

'ಬಂಗಾರದ ಪಂಜರ'ದಂಥ ರೆಸಾರ್ಟ್‌ನಲ್ಲಿರುವ ಶಾಸಕರಿಗೆ ಮೊದಲ ಕೆಲವು ದಿನ ಸ್ಥಳೀಯ ಆಹಾರಗಳನ್ನು ನೀಡಲಾಗಿತ್ತು. ಗುಜರಾತ್ ಶೈಲಿಯ ತಿನಿಸು ತಿನ್ನುತ್ತಿದ್ದ ಶಾಸಕರಿಗೆ ಈ ಆಹಾರ ಒಗ್ಗದ ಕಾರಣ ವಾಂತಿ ಬೇಧಿಗೆ ಗುರಿಯಾಗಿದ್ದಾರೆ.

ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ

 Gujarat MLA’s facing helath problem at Bengaluru resort

ಸುಮಾರು 4-5 ಶಾಸಕರು ವಾಂತಿ ಬೇಧಿಗೆ ತುತ್ತಾಗಿದ್ದು, ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.

ಕಾಂಗ್ರೆಸ್ ರೆಸಾರ್ಟ್ ರಾಜಕಾರಣ: ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು!

Gujarat Floods Claims More Than 83 People Life

ಆದರೆ ಸುದ್ದಿಯನ್ನು ತಳ್ಳಿ ಹಾಕಿರುವ ಆತಿಥ್ಯದ ಉಸ್ತುವಾರಿ ಹೊತ್ತಿರುವ ವಿಧಾನ ಪರಿಷತ್‌ ಸದಸ್ಯರಾದ ಸಿ.ಎಂ. ಲಿಂಗಪ್ಪ ಹಾಗೂ ಎಸ್‌. ರವಿ, "ಶಾಸಕರಿಗೆ ಗುಜರಾತಿ ಶೈಲಿಯ ಖಾದ್ಯಗಳನ್ನೇ ನೀಡಲಾಗುತ್ತಿದೆ. ಹೀಗಾಗಿ ಯಾರಿಗೂ ಆರೋಗ್ಯ ಸಮಸ್ಯೆ ಆಗಿಲ್ಲ," ಎಂದು ಪ್ರಜಾವಾಣಿಗೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some of the Gujarat legislators at the Eagleton Resort are undergoing a dietary disorder on Tuesday.
Please Wait while comments are loading...