ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳನ್ನು ಆಕರ್ಷಿಸುವ ಸರ್ಕಾರಿ ಶಾಲೆ ನಿರ್ಮಾಣ : ಜಿಟಿ ದೇವೇಗೌಡ

By Mahesh
|
Google Oneindia Kannada News

ಬೆಂಗಳೂರು, ಜುಲೈ 06: ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಂತಹ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸರಕಾರಿ ಶಾಲೆಗಳ ನಿರ್ಮಾಣಕ್ಕೆ ಚಿಂತನೆ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಹೇಳಿದರು.

ನಗರದ ಎಚ್ ಬಿ ಆರ್ ಲೇಔಟನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಆರ್‍ಫಾ ಟೈನಿ ಟಾಟ್ಸ್ ಮಾಂಟೆಸ್ಸರಿ ಶಾಲೆಯನ್ನು ಚಿಕ್ಕಮಕ್ಕಳೊಂದಿಗೆ ಜೊತೆಗೂಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಆರ್‍ಫಾ ಟೈನಿ ಟಾಟ್ಸ್ ನಲ್ಲಿ ಚಿಕ್ಕ ಮಕ್ಕಳಿಗೆ ಪರಿಸರ, ಸಂಸ್ಕೃತಿ ಹಾಗೂ ಓಳ್ಳೆಯ ನಡವಳಿಕೆಗಳನ್ನು ಕಲಿಸುವ ಮೂಲಕ ಮಕ್ಕಳ ಶ್ರೇಯೋಭಿವೃದ್ದಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ.

ಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿ

ತಾವು ಕಲಿಯುವ ಪರಿಸರದಲ್ಲಿ, ಪರಿಸರವನ್ನು ರಕ್ಷಿಸುವ ಹಾಗೂ ಪ್ರೀತಿಸುವ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆಯನ್ನು ಮೂಡಿಸುತ್ತಿರುವುದು ಅನುಕರಣೀಯ ಅಂಶ.

Higher Education Minister G T Devegowda Inaugurated Arafah Tinytots school at H.B.R layout.

ಈ ಶಾಲೆಯಲ್ಲಿ ಮಕ್ಕಳು ಆತ್ಮವಿಶ್ವಾಸದಿಂದ ಲವಲವಿಕೆಯಿಂದ ಇರುವುದನ್ನ ನೋಡಿದಲ್ಲಿ ಬಹಳ ಸಂತಸವಾಗುತ್ತದೆ. ಇದೇ ಮಾದರಿಯ ಮಕ್ಕಳನ್ನು ಆಕರ್ಷಿಸುವಂತಹ ಮಟ್ಟಕ್ಕೆ ಸರಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಬೇಕಾಗಿದೆ.
ಅಲ್ಲದೆ, ಈಗಾಗಲೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ನಲ್ಲಿ ನೀಡಿರುವ ಭರವಸೆಯಂತೆ, ಸರಕಾರಿ ಶಾಲೆಗಳಲ್ಲಿ ಶಿಶು ವಿಹಾರ ಮತ್ತು ಎಲ್ ಕೆ ಜಿ ಶಿಕ್ಷಣ ಪ್ರಾರಂಭಕ್ಕೆ ಮುಂದಾಗಿದ್ದೇವೆ.

ಕರ್ನಾಟಕ ಬಜೆಟ್‌: ಶಿಕ್ಷಣ ಕ್ಷೇತ್ರಕ್ಕೆ ಏನು ದೊರೆತಿದೆಕರ್ನಾಟಕ ಬಜೆಟ್‌: ಶಿಕ್ಷಣ ಕ್ಷೇತ್ರಕ್ಕೆ ಏನು ದೊರೆತಿದೆ

ಆಯಾ ಶಾಲೆಗಳಲ್ಲಿ ಇಲ್ಲಿರುವಂತಹ ಮೂಲಭೂತ ಸೌಕರ್ಯಗಳನ್ನು ಆಳವಡಿಸುವ ಬಗ್ಗೆ ಸಿಎಂ ಗಮನ ಸೆಳೆಯುವುದಾಗಿ ಹೇಳಿದರು.

Higher Education Minister G T Devegowda Inaugurated Arafah Tinytots school at H.B.R layout.

ಮಕ್ಕಳಲ್ಲಿ ಬಾಲ್ಯದಲ್ಲಿಯೇ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿದಲ್ಲಿ, ಮುಂದಿನ ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಾರೆ. ಆ ಮೂಲಕ ಪರಿಸರ ಉಳಿಸಲು ಕೊಡುಗೆಯನ್ನು ನೀಡುತ್ತಾರೆ ಎಂದರು.

ಆರ್‍ಫಾ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಟೈನಿ ಟಾಟ್ಸ್ ನ ಸಿಇಓ ಯಾಸಿನ್ ಪಾಷಾ ಮಾತನಾಡಿ, ಮೋರ್ಗೆನಲ್ ಹೋಲ್ಡಿಂಗ್ಸ್ ನ ಅಡಿಯಲ್ಲಿ ಐಟಿ, ವೈದ್ಯಕೀಯ ಕ್ಷೇತ್ರ, ಮಾನವ ಸಂಪನ್ಮೂಲ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದೇವೆ.

ಆರ್‍ಫಾ ಟೈನಿ ಟಾಟ್ಸ್ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ನಾವು ಕಾಲಿಡುತ್ತಿದ್ದು, ಬಹಳ ಸಂತಸದ ವಿಷಯ. ಇದು ನಮ್ಮ ಕನಸಿನ ಯೋಜನೆಯಾದ ಆರ್‍ಫಾ ಇಂಟರ್ ನ್ಯಾಷನಲ್ ಸ್ಕೂಲ್ ನ ಕಡೆ ಮೊದಲ ಹೆಜ್ಜೆಯಾಗಿದೆ ಎಂದರು.

Higher Education Minister G T Devegowda Inaugurated Arafah Tinytots school at H.B.R layout.

ನಗರದ ಮಾಂಟೆಸ್ಸರಿ ಶಿಕ್ಷಣ ಪದ್ದತಿಯಲ್ಲಿ ಆರ್‍ಫಾ ಟೈನಿ ಟಾಟ್ಸ್ ಬಹಳ ಕಡಿಮೆ ಸಮಯದಲ್ಲಿಯೇ ಪ್ರಮಖ ಸ್ಥಾನಕ್ಕೇರಲಿದೆ. ನಾವು ನಮ್ಮ ಶಿಕ್ಷಣ ಪದ್ದತಿಯಲ್ಲಿ ಸಂಸ್ಕೃತಿ, ಸ್ವಚ್ಚತೆ, ಆರೋಗ್ಯ ಮತ್ತು ನೈತಿಕ ಅಂಶಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಮಕ್ಕಳ ವೈಯಕ್ತಿಕ ಕಲಿಕಾ ಮಟ್ಟದ ಬಗ್ಗೆ ವಿಶೇಷ ಗಮನ ನೀಡಲಿರುವ ನಮ್ಮ ಶಿಕ್ಷಣ ಪದ್ದತಿ, ಉರು ಹೊಡೆಯುವುದನ್ನು ಬಿಟ್ಟು ಮಕ್ಕಳಲ್ಲಿ ಅರ್ಥಮಾಡಿಕೊಳ್ಳುವ, ಆಲೋಚಿಸುವ ಹಾಗೂ ರಚಿಸುವ ಅಂಶಗಳಿಗೆ ಒತ್ತು ನೀಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯ ಎ.ಆರ್ ಝಾಕಿರ್, ಸದಸ್ಯೆ ರಾಧಮ್ಮ ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಸಿ ನೆಡುವ ಸಮಯದಲ್ಲಿ ಚಿಕ್ಕಮಕ್ಕಳಲ್ಲಿ ಮಂದಹಾಸ ಎಲ್ಲರ ಗಮನ ಸೆಳೆಯಿತು.

English summary
Higher Education Minister G T Devegowda Inaugurated Arafah Tinytots school at H.B.R layout. He interacted with kids and asked questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X