ಬೆಂಗಳೂರಲ್ಲಿ ಗ್ರೇಟ್ ಬ್ರಿಟನ್ 15 ಕೋಟಿ ಮೌಲ್ಯದ ಸ್ಕಾಲರ್ ಶಿಪ್ ಅಭಿಯಾನ

Posted By:
Subscribe to Oneindia Kannada

ಬೆಂಗಳೂರು, ಫೆ.02: ಸುಮಾರು 150 ದಶಲಕ್ಷ ರೂಪಾಯಿ ಮೌಲ್ಯದ ಗ್ರೇಟ್ ಬ್ರಿಟನ್ ಸ್ಕಾಲರ್ ಶಿಪ್ ಗಳನ್ನು- ಭಾರತ 2016 ಅನ್ನು ಗ್ರೇಟ್ ಬ್ರಿಟನ್ ಅಭಿಯಾನದ (ಗ್ರೇಟ್) ಭಾಗವಾಗಿ ಚಾಲನೆ ನೀಡಿರುವುದಾಗಿ ಬ್ರಿಟಿಷ್ ಕೌನ್ಸಿಲ್ ಘೋಷಿಸಿದೆ.

ಯುಕೆಯಲ್ಲಿನ ಶಿಕ್ಷಣ ಅವಕಾಶಗಳ ಕುರಿತು ಹೆಚ್ಚು ತಿಳಿಯಲು ಬಯಸುವ ಅಪೇಕ್ಷಿತರನ್ನು ಗುರಿಯಾಗಿಸಿರುವ ಬ್ರಿಟಿಷ್ ಕೌನ್ಸಿಲ್ ಎಜುಕೇಶನ್ ಯುಕೆ ವಸ್ತುಪ್ರದರ್ಶನವನ್ನು ಬೆಂಗಳೂರಿನಲ್ಲಿ ಭಾನುವಾರ, 9 ಫೆಬ್ರವರಿ 2016ರಂದು ವಿವಾಂತ ಬೈ ತಾಜ್ ನಲ್ಲಿ ಆಯೋಜಿಸಲಿದೆ.

ವಿವಿಧ ಕೋರ್ಸ್ ಗಳು: ಬೆಂಗಳೂರಿನ ಈ ಒಂದು ದಿನದ ವಸ್ತುಪ್ರದರ್ಶನದಲ್ಲಿ 55 ಕ್ಕೂ ಹೆಚ್ಚು ಯುಕೆ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ಮಾತನಾಡುವ ಮತ್ತು ಕೋರ್ಸ್ ನ ಆಯ್ಕೆಗಳು, ವೀಸಾಗಳು, ಅರ್ಜಿಗಳು, ಸ್ಕಾಲರ್ ಶಿಪ್ ಗಳು ಮತ್ತು ಇನ್ನಷ್ಟು ತಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ವಿಶಿಷ್ಟ ಅವಕಾಶ ಪಡೆಯಲಿದ್ದಾರೆ.

ಅಲ್ಲದೆ, ಈ ವಸ್ತುಪ್ರದರ್ಶನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ವಿಶೇಷ ಥೀಮ್ ಗಳಂಥಯುಕೆ ಡಿಗ್ರಿಯೊಂದಿಗೆ ಐಟಿ ಮತ್ತು ಎಂಜಿನಿಯರಿಂಗ್, ಫ್ಯಾಶನ್ ಮ್ಯಾನೇಜ್‍ಮೆಂಟ್ ನಲ್ಲಿ ವೃತ್ತಿಗಳು, ನಾಯಕತ್ವಗಳ ಕುರಿತ ಸ್ಪಾಟ್ ಸೈಕೋಮೆಟ್ರಿಕ್ ಪರೀಕ್ಷೆಗಳು ಮತ್ತು ವೃತ್ತಿಯ ಸೆಮಿನಾರ್ ಗಳ ಅನುಕೂಲಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಇದರ ಜತೆಗೆ ವಿದ್ಯಾರ್ಥಿ ವೀಸಾಗಳು ಮತ್ತು ಐಇಎಲ್ ಟಿಎಸ್ ಕುರಿತ ತಜ್ಞರಿಂದ ಒಳನೋಟದ ಸೆಶನ್ ಗಳನ್ನೂ ಒಳಗೊಂಡಿರಲಿದೆ.

Great Britain Scholarships-India 2016

ಗ್ರೇಟ್ ಬ್ರಿಟನ್ ಸ್ಕಾಲರ್ ಶಿಪ್ ಗಳು- ಭಾರತ 2016: ಸಾಂಸ್ಕೃತಿಕ ಸಂಬಂಧಗಳು ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ವಿದ್ಯಾರ್ಥಿ ಚಲನಶೀಲತೆಯು ಮುಖ್ಯವಾಗುತ್ತದೆ. ಬ್ರಿಟಿಷ್ ಕೌನ್ಸಿಲ್ ಸರ್ಕಾರ ಹಾಗೂ ಸಹಭಾಗಿಗಳೊಂದಿಗೆ ಗ್ರೇಟ್ ಅಭಿಯಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯುಕೆಯನ್ನು ಅಧ್ಯಯನಕ್ಕೆ ಆಯ್ಕೆಯ ತಾಣವನ್ನಾಗಿ ಪ್ರಚುರಪಡಿಸುತ್ತಿದೆ. ಗ್ರೇಟ್ ಸ್ಕಾಲರ್‍ಶಿಪ್‍ಗಳು ಇವುಗಳನ್ನು ಒಳಗೊಂಡಿರಲಿದೆ:

* ಅಂದಾಜು 150 ದಶಲಕ್ಷ ರೂಪಾಯಿ ಮೌಲ್ಯದ 291 ಸ್ಕಾಲರ್ ಶಿಪ್ ಗಳನ್ನು ನೀಡಲಾಗುತ್ತದೆ

* ಇಂಗ್ಲೆಂಡ್, ಸ್ಕಾಟ್ಲೆಂಡ್ ವೇಲ್ಸ್ ಮತ್ತು ನಾರ್ಥನ್ ಐರ್ಲೆಂಡ್ ನಾದ್ಯಂತದ 45 ಯುಕೆ ಶಿಕ್ಷಣ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ.

* ಒಟ್ಟಾರೆ 59 ಪದವಿ ಮತ್ತು 232 ಸ್ನಾತಕೋತ್ತರ ಪದವಿ ಸ್ಕಾಲರ್ ಶಿಪ್ ಗಳನ್ನು ಎಂಜಿನಿಯರಿಂಗ್, ಕಾನೂನು, ಉದ್ಯಮ, ಕಲೆ ಮತ್ತು ವಿನ್ಯಾಸ, ಜೀವವಿಜ್ಞಾನ ಮತ್ತು ಐಟಿ ವಲಯದ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮ್ತತು ನಾರ್ತನ್ ಐರ್ಲೆಂಋ ನಾದ್ಯಂತದಿಂದ ನೀಡಲಾಗುತ್ತಿದೆ

British Council:
Sonu Hemanii | sonu.hemanii@britishcouncil.org
Senior Project Manager- South India l Services for International Education Marketing, British Council

ಲೈಟನ್ ಎರ್ನ್ಸ್ ಬರ್ಗರ್, ಸಹಾಯಕ ನಿರ್ದೇಶಕರು, ಬೆಂಗಳೂರು ಮತ್ತು ಕೌಶಲ್ಯಗಳು, ಬ್ರಿಟಿಷ್ ಕೌನ್ಸಿಲ್ ಇಂಡಿಯಾ ಮಾತನಾಡಿ: ಅಗ್ರಗಣ್ಯ ಅಂತಾರಾಷ್ಟ್ರೀಯ ಸಂಶೋಧನೆ, ನಾವೀನ್ಯತೆ ಮತ್ತು ಕ್ರಿಯಾಶೀಲತೆಗಾಗಿನ ಗೌರವದೊಂದಿಗೆ ಯುಕೆ ವಿಶ್ವವಿದ್ಯಾಲಯಗಳು ವಿಶ್ವದ ಮುಂಚೂಣಿ ಶಿಕ್ಷಣ ತಜ್ಞರು ಮತ್ತು ಉದ್ಯಮ ವೃತ್ತಿಪರರನ್ನು ಆಕರ್ಷಿಸುತ್ತವೆ.

ಇದು ವಿಶ್ವದ ಟಾಪ್ ಹತ್ತು ವಿಶ್ವವಿದ್ಯಾಲಯಗಳ ಸಹಿತ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳ ತವರಾಗಿದೆ ಮತ್ತು ವಿಶ್ವದ ಟಾಪ್ 200 ವಿಶ್ವವಿದ್ಯಾಲಯಗಳಲ್ಲಿ 30 ಅನ್ನು ಹೊಂದಿದೆ. ಖಂಡಿತವಾಗಿಯೂ ಬದುಕಲು ಮತ್ತು ಅಧ್ಯಯನಕ್ಕೆ ಇದೊಂದು ಅತ್ಯಂತ ಅದ್ಭುತವಾದ, ಹಣಕ್ಕೆ ಮೌಲ್ಯ ನೀಡುವ ಸ್ಥಳವಾಗಿದೆ. 200 ದೇಶಗಳ 4,90,000ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ನಿಜವಾದ ಅಂತಾರಾಷ್ಟ್ರೀಯ ಅನುಭವ ಒದಗಿಸುತ್ತದೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಯುಕೆ ವಿಶ್ವವಿದ್ಯಾಲಯಗಳನ್ನು ಭೇಟಿಯಾಗಲು ಒಂದು ದಿನದ ವಸ್ತುಪ್ರದರ್ಶನವನ್ನು ಉಪಯೋಗಿಸಿಕೊಳ್ಳಲಿದ್ದಾರೆ ಮತ್ತು ತಮಗೆ ಸೂಕ್ತವಾಗುವ ಅವಕಾಶಗಳನ್ನು ಕಂಡುಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ನನಗಿದೆ'' ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The British Council has announced the launch of the Great Britain Scholarships-India 2016 worth approximately `15 crore, as a part of the ‘Great Britain’ campaign.
Please Wait while comments are loading...