ಜಿಕೆವಿಕೆ ಆವರಣದಲ್ಲಿ ಇನ್ನುಮುಂದೆ ಬಾಡಿಗೆ ಸೈಕಲ್

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 28 : ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಮೊದಲ ಬಾರಿಗೆ ಜಿಪಿಎಸ್ ಅಳವಡಿಸಲಾದ ಸೈಕಲ್ ನ್ನು ಬಾಡಿಗೆ ಆಧಾರದ ಮೇಲೆ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ.

ಕಾರ್ಬನ್ ಮುಕ್ತ ಕ್ಯಾಂಪಸ್ ಮಾಡುವ ಉದ್ದೇಶದಿಂದ ವಿವಿಯ ಆಡಳಿತ ಮಂಡಲಿಯು ಈ ನಿರ್ಧಾರಕ್ಕೆ ಬಂದಿದ್ದು 30 ಸೈಕಲ್ ಗಳನ್ನು ಬಾಡಿಗೆ ಆಧಾರದ ಮೇಳೆ ನೀಡಲಿದೆ. ಪೇಟಿ ಎಂನಂತಹ ಇ-ವ್ಯಾಲೆಟ್ ಬಳಸಿ ಪ್ರತಿ ಗಂಟೆಗೆ 5ರೂ.ಗಳ ಬಾಡಿಗೆಯನ್ನು ಪಾವತಿಸಲು ಅವಕಾಶ ನೀಡಲಾಗಿದೆ.

ಬೆಂಗಳೂರಲ್ಲಿ ಟ್ರಿಣ್ ಟ್ರಿಣ್ ಯೋಜನೆ, 345 ನಿಲ್ದಾಣ ಗುರುತು

ಆದರೆ ಸೈಕಲ್ ಬಳಸುವವರು "ಯಾನ" ಎಂಬ ಆಪ್ ನ್ನು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಂದ ಹಾಗೆ, ಯಾನ ಆಪ್ ಬಳಸಬೇಕಾದರೆ ನಿಮ್ಮ ಆಧಾರ್ ಸಂಖ್ಯೆ ನೋಂದಾಯಿಸುವುದು ಕೂಡ ಕಡ್ಡಾಯವಾಗಿದೆ.

GPS-enabled smart Bicycles that will be available in GKVK Campus

ಜಿಕೆವಿಕೆ ಆವರಣದಲ್ಲಿ ಈಗಾಗಲೇ ಗುಟಕಾ, ಸಿಗರೇಟ್, ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಇನ್ನು ಮುಂದೆ ಕಾರುಗಳು ಮತ್ತು ಬೈಕ್ ಗಳ ಓಡಾಟಕ್ಕೂ ಬೈಸಿಕಲ್ ಸೇವೆಯಿಂದ ನಿಯಂತ್ರಣ ಬರಲಿದೆ. ಹೀಗಾಗಿ ಇಡೀ ಕ್ಯಾಂಪಸ್ ಪರಿಸರ ಸ್ನೇಹಿ ಆಗುವತ್ತ ದಾಪುಗಾಲಿಟ್ಟಿದೆ.

ಕ್ಯಾಂಪಸ್ ಸುಮಾರು 1380 ಎಕರೆ ಪ್ರದೇಶದಲ್ಲಿ ಹರಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪುವುದು ಕಷ್ಟಕರ. ಹೀಗಾಗಿ ಈ ಸೈಕಲ್ ಸೌಲಭ್ಯ ನೆರವಾಗಲಿದೆ. ಅದಕ್ಕಾಗಿ ನಾವು ಕೇವಲ ಸ್ಥಳಾವಕಾಶ ನೀಡಿದ್ದು, ಯಾನ ಸಂಸ್ಥೆ ಬಂಡವಾಳ ಹೂಡಿ ಯೋಜನೆ ಆರಂಭಿಸಿದೆ ಎನ್ನುತ್ತಾರೆ ಡೀನ್ ಡಾ. ರಾಜೇಂದ್ರ ಪ್ರಸಾದ್.

ಬೆಂಗಳೂರಿನಲ್ಲೂ ಬಾಡಿಗೆ ಸೈಕಲ್ ಪ್ರತಿ ಗಂಟೆಗೆ 5 ರೂ.

ನಾನು ವೈಟ್ ಫೀಲ್ಡ್ ನ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಮನೆ ಹಾಗೂ ಕಚೇರಿ ನಡುವೆ ಕೇವಲ ಒಂದು ಕಿ.ಮೀ. ಅಂತರವಿತ್ತು. ಬೈಕ್ ನಲ್ಲಿ ಹೋಗಲು ಸುಮಾರು ಅರ್ಧಗಂಟೆ ಬೇಕಾಗಿತ್ತು. ಹೀಗಾಗಿ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಾಗಿ ಇಂತಹ ಯೋಚನೆ ಬಂತು. ಪಾಲುದಾರರಾದ ಎಂ.ಸಿ. ಬೃಜೇಶ್ ಹಾಗೂ ಸಂತೋಷ್ ಜತೆ ಸೇರಿ ಯಾನ ಆರಂಭಿಸಿದ್ದೇವೆ ಎನ್ನುತ್ತಾರೆ ಯಾನ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಅಭಿಷೇಕ್ ಡಂಬಳ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
GPS-enabled smart bicycles that will be available for hire have been introduced at GKVK Campus for students and staff of University. The initiative is part of the effort to make the campus carbon neutral by reducing the use og motorised Vehicles.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ