ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಿದ್ದ ಭೂಮಿ ವಾಪಸ್?

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 02 : ರಾಷ್ಟ್ರೋತ್ಥಾನ ಪರಿಷತ್ ಮತ್ತು ಮಿಥಿಕ್ ಸೊಸೈಟಿಗೆ ನೀಡಿರುವ ಭೂಮಿ ವಾಪಸ್ ಪಡೆಯುವ ಸರ್ಕಾರದ ನಿರ್ಧಾರ ವಿರೋಧಕ್ಕೆ ಕಾರಣವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಭೂಮಿಯನ್ನು ನೀಡಿತ್ತು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, 'ಸಂಸ್ಥೆಗಳು ನೀಡಿದ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಸಲು ವಿಫಲವಾಗಿವೆ. ಆದ್ದರಿಂದ, ಅದನ್ನು ವಾಪಸ್ ಪಡೆಯುತ್ತೇವೆ' ಎಂದು ಹೇಳಿದ್ದಾರೆ.

ಸಿಎಂ ವಿರುದ್ಧ ಅಕ್ರಮ ಡಿನೋಟಿಫಿಕೇಶನ್ ಆರೋಪ, ರಾಜ್ಯಪಾಲರಿಗೆ ದೂರು

'ಬೆಂಗಳೂರಿನ ಥಣಿಸಂದ್ರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಿದ 10 ಎಕರೆ ಭೂಮಿಯನ್ನು ವಾಪಸ್ ನೀಡುವಂತೆ ನೋಟಿಸ್ ನೀಡಲಾಗಿದೆ. ಮಿಥಿಕ್ ಸೊಸೈಟಿಗೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯಲಾಗಿದೆ' ಎಂದು ಸಚಿವರು ಹೇಳಿದ್ದಾರೆ.

Govt to withdraw land given to organizations

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ರಾಷ್ಟ್ರೋತ್ಥಾನ ಪರಿಷತ್‌ಗೆ ಥಣಿಸಂದ್ರದಲ್ಲಿ 10 ಎಕರೆ ಭೂಮಿಯನ್ನು ವರ್ಷಕ್ಕೆ 1 ಲಕ್ಷ ರೂ. ಆಧಾರದ ಮೇಲೆ 30 ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು.

ದಕ್ಷಿಣ ಕನ್ನಡ: ಮಸೀದಿ ಕಟ್ಟಲು ಭೂಮಿ ನೀಡಿದ ದೇವಸ್ಥಾನ ಮಂಡಳಿ ಅಧ್ಯಕ್ಷ

ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಯಲಹಂಕದಲ್ಲಿ 10 ಎಕರೆ ಭೂಮಿಯನ್ನು ಮಿಥಿಕ್ ಸೊಸೈಟಿಗೆ ನೀಡಲಾಗಿತ್ತು. ಈ ಭೂಮಿ ಗೋಮಾಳದ ಜಾಗ ಎಂಬುದು ವಿವಾದಕ್ಕೆ ಕಾರಣವಾಗಿತ್ತು.

ಸರ್ಕಾರ ನೀಡಿದ ಜಾಗವನ್ನು ನಿಗದಿತ ಉದ್ದೇಶಕ್ಕೆ ಬಳಸುತ್ತಿಲ್ಲ ಎಂದು ಹೇಳಿರುವ ಸರ್ಕಾರ ಅದನ್ನು ವಾಪಸ್ ಪಡೆಯಲು ಹೊರಟಿದೆ. ಆದರೆ, ಇದು ದ್ವೇಷದ ರಾಜಕಾರಣ ಎಂದು ಆರೋಪಿಸಲಾಗುತ್ತಿದೆ.

ರಾಷ್ಟ್ರೋತ್ಥಾನ ಪರಿಷತ್ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದೆ.

Govt to withdraw land given to organizations

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Revenue Minister Kagodu Thimmappa said, government has decided to withdraw lands granted to Rashtrotthana Parishat and Mythic Society in Bengaluru. Land allotted on lease during the time of BJP government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ