ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಶಾಲೆಯಲ್ಲಿ ಮೊಬೈಲ್ ಟವರ್: ಮುಖ್ಯಶಿಕ್ಷಕ ಅಮಾನತು

|
Google Oneindia Kannada News

ಬೆಂಗಳೂರು, ಮಾರ್ಚ್ 1: ಸರ್ಕಾರಿ ಶಾಲಾ ಆವರಣದಲ್ಲಿ ಮೊಬೈಲ್ ಟವರ್ ಅಳವಡಿಸಲು ಅವಕಾಶ ಕೊಟ್ಟು ಬಾಡಿಗೆ ಪಡೆದಿದ್ದಾರೆಂದು ಆರೋಪಿಸಿ ಶಾಲೆಯ ಮುಖ್ಯ ಶಿಕ್ಷಕ ವಿರುದ್ಧ ಜ್ಞಾನಭಾರತಿ ಠಾಣೆಗೆ ಶಿಕ್ಷಣ ಇಲಾಖೆ ದೂರು ನೀಡಿದೆ.

ನಾಗರಬಾವಿ ಬಳಿಯ ಮಮುತ್ತುರಾಯ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಪಿ. ಪ್ರಕಾಶ್ ವಿರುದ್ಧ ದಕ್ಷಿಣ ವಿಭಾಗದ ಬಿಇಒ ಎನ್. ವೆಂಕಟೇಶ್ ದೂರು ನೀಡಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ.

ಶಾಲಾ ಆವರಣದಲ್ಲಿ ಮೊಬೈಲ್ ಟವರ್ ಅಳವಡಿಸಲು ಪಿ. ಪ್ರಕಾಶ್ ಟವರ್ ವಿಷನ್ ಇಂಡಿಯಾದ ಪ್ರೈ. ಲಿ ಬ್ರಿಗೇಡ್ ಪ್ಲಾಜಾ ಸಂಸ್ಥೆ ಜತೆ ಕಾನೂನು ಬಾಹಿರವಾಗಿ ಒಡಂಬಡಿಕೆ ಮಾಡಿಕೊಂಡಿದ್ದರು. 2008 ರಲ್ಲಿ ಟವರ್ ನಿರ್ಮಿಸಿದ್ದು 48 ಸಾವಿರ ರೂ ಮುಂಗಡ ಪಡೆದು ತಿಂಗಳಿಗೆ 8 ಸಾವಿರ ರೂ ಬಾಡಿಕೆ ಪಡೆಯುತ್ತಿದ್ದರು.

Govt school headmaster suspended for giving permission to mobile tower in school

ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಹಾಗೂ ಪ್ರಕಾಶ್ ಜಂಟಿ ಬ್ಯಾಂಕ್ ಖಾತೆ ತೆರೆದು ಅದಕ್ಕೆ ಬಾಡಿಗೆ ಹಣ ಜಮಾ ಮಾಡುತ್ತಿದ್ದರು. ಅದರಲ್ಲಿ ಶೇ.೧೦ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವ ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಶಾಲಾ ಮಕ್ಕಳ ಶೈಕ್ಷಣಿಕ ಮತ್ತು ಸುರಕ್ಷತೆ ದೃಷ್ಟಿಯಿಂದ ಟವರ್ ತೆರವುಗೊಳಿಸುವಂತೆ ದೂರಿನಲ್ಲಿ ಬಿಇಒ ಮನವಿ ಮಾಡಿದ್ದಾರೆ.

English summary
Government school head master has been suspended for giving premises of school to private mibile tower. There is a allegation that head master was collected monthly rental of this tower.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X