ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ದರ ಪರಿಷ್ಕರಣೆ: ಕಂಪನಿಗಳ ಜತೆ ಮಾತುಕತೆ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 10: ಅಪ್ಲಿಕೇಷನ್ ಆಧಾರತ ಟ್ಯಾಕ್ಸಿ ಸೇವೆಗಳ ಕನಿಷ್ಠ ಮತ್ತು ಗರಿಷ್ಠ ದರವನ್ನು ಸಾರಿಗೆ ಇಲಾಖೆ ಪರಿಷ್ಕರಿಸಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಸಂಬಂಧ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಸಂಸ್ಥೆಗಳ ಜತೆ ಮುಂದಿನ ವಾರದಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ. ಬೆಂಗಳೂರಿಗೆ ಅನ್ವಯವಾಗುವಂತೆ ಜನವರಿಯಲ್ಲಿ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಸಾರಿಗೆ ಇಲಾಖೆ ಮೊದಲ ಬಾರಿಗೆ ಹೊರಡಿಸಿದ್ದ ಕನಿಷ್ಠ ದರ ಆದೇಶದಲ್ಲಿ ಕೆಲ ಲೋಪಗಳಿದ್ದವು.

ಓಲಾ, ಉಬರ್ ಟ್ಯಾಕ್ಸಿ ಪ್ರಯಾಣ ದರ ಪಟ್ಟಿ ಪ್ರಕಟ

ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಅಪ್ಲಿಕೇಷನ್ ಆಧಾರಿತ ಕಂಪನಿಗಳು ಕಳೆದೆರೆಡು ತಿಂಗಳಿನಿಂದ ಆದೇಶ ಪಾಲಿಸಲು ಹಿಂದೇಟು ಹಾಕಿದ್ದವು.

Govt revises APP base taxi service fare

ಲೆಕ್ಕದಲ್ಲಿ ಇಲಾಖೆ ಎಡವಟ್ಟು: ಟ್ಯಾಕ್ಸಿಗಳಿಗೆ ಕನಿಷ್ಠ ದರ ನಿಗದಿಪಡಿಸುವ ವಿಚಾರದಲ್ಲಿ ಇಲಾಖೆ ಎಡವಿತ್ತು. ವಾಹನ ಬೆಲೆ ಆಧರಿಸಿ ಕಾರುಗಳನ್ನು ಎಬಿಸಿಡಿ ವರ್ಗ ಎಂದು ಇಲಾಖೆ ಬೇಪಡಿಸಿತ್ತು. ಎ ವರ್ಗವು ಅತಿ ಹೆಚ್ಚು ಬೆಲೆಯುಳ್ಳ ಕಾರುಗಳಾಗಿದ್ದು, ಡಿ ವರ್ಗದಲ್ಲಿ ಕನಿಷ್ಠ ಬೆಲೆಯ ಕಾರುಗಳಿವೆ . ಪರಿಷ್ಕೃತ ದರದಲ್ಲಿ ಸಿ ಮತ್ತು ಬಿ ವರ್ಗದ ವಾಹನಗಳು ಮೊದಲ 4ಕಿ.ಮೀಗೆ ಪಡೆಯಬೇಕಾದ ದರವನ್ನು ಇಲಾಖೆ ಪರಿಷ್ಕರಿಸಿದೆ.

ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್ ಪೋರ್ಟೇಷನ್ ಟೆಕ್ನಾಲಜಿ ಅಗ್ರೆಗೇಟರ್ ರೂಲ್ಸ್ 2016ರ ಅನ್ವಯ ಬೆಂಗಳೂರು ನಗರ ಮಿತಿಯ ಬಳಿಕ 25ಕಿ.ಮೀ ವರೆಗೂ ಹವಾನಿಯಂತ್ರಿತ ಸಿಟಿ ಟ್ಯಾಕ್ಸಿಗಳಿಗೆ ಅನ್ವಯವಾಗುವಂತೆ ಕನಿಷ್ಠ-ಗರಿಷ್ಠ ದರ ಅನ್ವಯ ಎಂದು ಸಾರಿಗೆ ಇಲಾಖೆ ತಿಳಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of transport has revised APP based taxi service fare in Bengaluru city and next week it will hold a talk with app based taxi service companies like Ola and Uber to implement the revised fare.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ