ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಪಿಜಿ ಶುಲ್ಕ ಹೆಚ್ಚಳಕ್ಕೆ ಸರ್ಕಾರ ನಕಾರ

|
Google Oneindia Kannada News

ಬೆಂಗಳೂರು, ಜನವರಿ 24 : ರಾಜ್ಯದ ಖಾಸಗಿ ಕಾಲೇಜುಗಳು ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳು ವೈದ್ಯಕೀಯ ಪಿಜಿ ಕೋರ್ಸ್ ಗಳ ಶುಲ್ಕವನ್ನು ಶೇ.200 ರಿಂದ ಶೇ.300 ರಷ್ಟು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಪಿಜಿ ವೈದ್ಯಕೀಯ ಕೋರ್ಸ್ ಗಳ ಶುಲ್ಕವನ್ನು ಹೆಚ್ಚಿಸಲು ರಾಜ್ಯದ ಡೀಮ್ಡ್ ವಿವಿ ಹಾಗೂ ಖಾಸಗಿ ಕಾಲೇಜುಗಳು ಮನವಿ ಮಾಡಿದ್ದವು. ಈ ಬಗೆಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ ಖಾಸಗಿ ಸಂಸ್ಥೆಗಳ ಬೇಡಿಕೆಗೆ ಸರ್ಕಾರ ಒಪ್ಪಿಲ್ಲ ಎಂದು ಹೇಳಿದರು.

ಖಾಸಗಿ ಸಂಸ್ಥೆಗಳು ಶೇ.200 ರಿಂದ 300ರಷ್ಟು ಶುಲ್ಕ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಸರ್ಕಾರ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಪಿಜಿ ವೈದ್ಯಕೀಯ ಕೋರ್ಸ್ ಗಳಿಗೆ ಸರಾಸರಿ 6 ಲಕ್ಷ ರು.ಗಳ ಪ್ರವೇಶ ಶುಲ್ಕವಿದೆ.

Govt rejects medical PG fees hike

ಇದನ್ನು ಸರಾಸರಿ 24 ಲಕ್ಷ ರು.ಗಳಿಗೆ ಹೆಚ್ಚಿಸಬೇಕೆಂಬುದು ಆಡಳಿತ ಮಂಡಳಿಗಳ ಬೇಡಿಕೆಯಾಗಿದೆ. ಅವರು ಕೇಳಿದಾಕ್ಷಣ ಒಪ್ಪಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತೊಂದು ಸಲ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

English summary
Medical education minister Dr. Sharanaprakash Patil has said that the government has rejected demand of 200percent hike on medical PG course admission fees which was sought by the private medical colleges and deemed universities in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X