ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಜಮೀನು ಅತಿಕ್ರಮಣ: 65 ಮನೆಗಳ ತೆರವುಗೊಳಿಸಿದ ಡಿಸಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಸರ್ಕಾರಿ ಭೂಮಿಯನ್ನು ಕಬಳಿಸಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿದದ 65 ಮನೆಯನ್ನು ಜಿಲ್ಲಾಧಿಕಾರಿ ವಿಜಯ್ ಶಂಕರ್ ತೆರವುಗೊಳಿಸಿದ್ದಾರೆ. ಪರಪ್ಪನ ಅಗ್ರಹಾರ ಬಳಿಕ ದೊಡ್ಡ ನಾಗಮಂಗಲ ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಲಾಗುತ್ತಿತ್ತು.

ಕಾರ್ಪೊರೇಟರ್ ಪತಿಯಿಂದ ಅಕ್ರಮ ಒತ್ತುವರಿ: ತೆರವುಗೊಳಿಸಿದ ಅಧಿಕಾರಿಗಳು ಕಾರ್ಪೊರೇಟರ್ ಪತಿಯಿಂದ ಅಕ್ರಮ ಒತ್ತುವರಿ: ತೆರವುಗೊಳಿಸಿದ ಅಧಿಕಾರಿಗಳು

ಸುಮಾರು 10 ಕುಟುಂಬಗಳು ನಾಲ್ಕೈದು ತಿಂಗಳುಗಳ ಹಿಂದೆಯೇ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿವೆ. ಮನೆಗಳನ್ನು ಖಾಲಿ ಮಾಡಲು ಅವಕಾಶ ನೀಡಲಾಗಿತ್ತು. ನಿರ್ಮಾಣ ಹಂತದಲ್ಲಿದ್ದ ತಾತ್ಕಾಲಿಕ ಶೆಡ್ ಗಳು, ಮನೆಗಳನ್ನು ಕೆಡವಿ ಹಾಕಲಾಯಿತು.

ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು

ತಮಿಳುನಾಡು, ಆಂಧ್ರಪ್ರದೇಶ ಮೂಲದ ಕುಟುಂಬಗಳಿಗೆ ಕೇವಲ 10-15 ಲಕ್ಷ ರೂ ಗಳಿಗೆ ನಿವೇಶನಗಳನ್ನು ಮಾರಾಟ ಮಾಡಿ ವಂಚಿಸಿದ್ದಾರೆ, ಅಮಾಯಕರಿಗೆ ಮಾರಾಟ ಮಾಡಿರುವ ಶಂಕರನಾರಾಯಣ, ರವಿಕುಮಾರ್ ಮತ್ತು ವಸಂತ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Govt land encroachment: 65 houses are evicted

ದೊಡ್ಡ ನಾಗಮಂಗಲದ ಸರ್ವೆ ನಂಬರ್ 6ರಲ್ಲಿನ ಐದು ಎಕರೆ ಮುಫತ್ ಕಾವಲ್ ಜಮೀನನ್ನು 2008ರಲ್ಲಿಯೇ ಸಾರಿಗೆ ಇಲಾಖೆಗೆ ಮಂಜೂರು ಮಾಡಲಾಗಿತ್ತು. ಆದರೆ ಅವರು ಸ್ವಾಧೀನಕ್ಕೆ ಪಡೆದುಕೊಂಡಿರಲಿಲಲ್. ಈ ಮಧ್ಯೆ ಶಂಕರನಾರಾಯಣ, ರವಿಕುಮಾರ್ ಮತ್ತು ವಸಂತ್ ಎಂಬುವವರು ಕರಗಪ್ಪ ಎಂಬುವರಿಗೆ 5 ಎಕರೆ ಮಂಜೂರಾಗಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು.

English summary
District Administration of Bngaluru evicted nearly 65 houses related government land encroachment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X