ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲಾ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಶೀಘ್ರ ಟೈಮರ್ ಅಳವಡಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 05: ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಟ್ರಾಫಿಕ್ ಸಿಗ್ನಲ್ ಗಳ ಟೈಮರ್ ಗಳು ಕೆಟ್ಟು ಹೋಗಿದ್ದರಿಂದ ಬೈಕ್ ಸವಾರರು ಹಾಗೂ ವಾಹನಗಳ ಚಾಲಕರು ರೋಸಿ ಹೋಗಿದ್ದಾರೆ.

ಸಿಗ್ನಲ್ ನಲ್ಲಿ ನಿಂತುಕೊಳ್ಳುವ ಚಾಲಕರು ಹಾಗೂ ಬೈಕ್ ಸವಾರರು ಸಿಗ್ನಲ್ ಟೈಮರ್ ಗಳು ತೋರಿಸುವ ವೇಟಿಂಗ್ ಸಮಯವನ್ನು ನೋಡಿಕೊಂಡು ಕನಿಷ್ಟ ಪಕ್ಷ ರಿಲ್ಯಾಕ್ಸ್ ಮಾಡಬಹುದು. ಆದರೆ ನಗರದ ಬಹುತೇಕ ಟ್ರಾಫಿಕ್ ಟೈಮರ್ ಗಳು ಕೆಟ್ಟು ಹೋಗಿದ್ದು, ಟ್ರಾಫಿಕ್ ಸಿಗ್ನಲ್ ನಲ್ಲಿ ಎಷ್ಟು ನಿಮಿಷಗಳ ಕಾಲ ಕಾಯಬೇಕೆಂಬ ಗೊಂದಲಕ್ಕೆ ಸವಾರರು ಹಾಗೂ ಚಾಲಕರು ತತ್ತರಿಸಿ ಹೋಗಿದ್ದಾರೆ.

ಬೆಂಗಳೂರು ನಗರದ ಕೆಟ್ಟು ಹೋಗಿರುವ ಸಿಗ್ನಲ್ ಗಳನ್ನು ಸರಿಪಡಿಸುವುದನ್ನು ಬಿಟ್ಟು ನಿಯಮ ಉಲ್ಲಂಘನೆ ಇನ್ನಿತರ ದಂಡಗಳನ್ನು ವಸೂಲಿ ಮಾಡುವಲ್ಲಿ ಟ್ರಾಫಿಕ್ ಪೊಲೀಸರು ತಮ್ಮ ಸಮಯವನ್ನು ವ್ಯಯಿಸುತ್ತಿದ್ದಾರೆ.

Govt has alloted funds to install timers at traffic signals

ಈಗಾಗಲೇ ಬೆಂಗಳೂರು ನಗರದಲ್ಲಿ ಬೇಸಿಗೆ ದಗೆ ಹೆಚ್ಚುತ್ತಿದ್ದು ಟ್ರಾಫಿಕ್ ಸಿಗ್ನಲ್ ನಲ್ಲಿ ವಾಹನಗಳು ಎಷ್ಟು ನಿಮಿಷ ಕಾಯಬೇಕು ಎಂಬ ಮಾಹಿತಿ ಇಲ್ಲದೆ ಗೋಳಾಡುವಂತಾಗಿದೆ. ಒಂದು ವೇಳೆ ಟ್ರಾಫಿಕ್ ಸಿಗ್ನಲ್ ನಲ್ಲಿ ಟೈಮರ್ ಗಳಿದ್ದರೆ ಕನಿಷ್ಟ ಪಕ್ಷ ಕಾರ್ ಮತ್ತು ಬೈಕ್ ಗಳನ್ನು ಇಂತಿಷ್ಟು ನಿಮಿಷಗಳ ಕಾಲ ಬಂದ್ ಮಾಡಬೇಕೆಂಬುದು ತಿಳಿಯುತ್ತದೆ.

ರಾಮಮೂರ್ತಿ ನಗರದ ಮುಖ್ಯ ಸರ್ಕಲ್ ನಲ್ಲಿರುವ ಟ್ರಾಫಿಕ್ ಸಿಗನ್ಲ್ ಕಳೆದ ಹಲವಾರು ದಿನಗಳಿಂದ ಟ್ರಾಫಿಕ್ ಲೈಟ್ ಹಾಗೂ ಟೈಮರ್ ಎರಡನ್ನೂ ತೋರಿಸುತ್ತಿಲ್ಲ.ಟ್ರಾಫಿಕ್ ಸಿಗ್ನಲ್ ಗಳಲ್ಲಿ ಟೈಮರ್ ಗಳು ಮಾತ್ರವಲ್ಲ ಕೆಂಪು, ಹಳದಿ, ಹಸಿರು ಲೈಟ್ ಗಳು ಸಹ ಅಧಿಕ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವುದಿಲ್ಲ ಇದರಿಂದ ಜನರು ಮನಸಿಗೆ ಬಂದಂತೆ ಟ್ರಾಫಿಕ್ ನಲ್ಲಿ ನುಗ್ಗುತ್ತಿದ್ದಾರೆ. ಹಾಗಾಗಿ ಜನರು ಪ್ರತಿಯೊಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಟೈಮರ್ ಇರಲೇ ಬೇಕು ಎಂದು ಒತ್ತಾಯಿಸಿದ್ದರು.

ಸಾಕಷ್ಟು ಸಿಗ್ನಲ್ ಗಳಲ್ಲಿ ಟೈಮರ್ ಗಳಿದ್ದರೂ ಕೂಡ ಉದ್ದೇಶಿತವಾಗಿ ಬಂದ್ ಮಾಡಲಾಗಿರುತ್ತದೆ ಅಥವಾ ಟೈಮರ್ ಗಳು ಕೆಟ್ಟು ವರ್ಷವಾದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ.
ಅಡಾಪ್ಟೀವ್ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಅದ್ಯದಲ್ಲೇ ಟೈಮರ್ ಗಳನ್ನು ಅಳವಡಿಸಲಾಗುವುದು ಅದಕ್ಕಾಗಿ ಸರ್ಕಾರದಿಂದ 86 ಕೋಟಿ ರೂ ಅನುದಾನ ದೊರೆಯಲಿದೆ ಎಂದು ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

English summary
With the density of traffic increasing in the city with each passing day, every driver needs a calming device while on road. These calming device not only keep a check on the anxiety of the drivers during long traffic jams but also helps save fuel and keep pollution in check.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X