ರೈತರ ಶ್ರಮವನ್ನು ಹಾಡಿ ಹೊಗಳಿದ ವಜುಭಾಯಿ ವಾಲಾ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16 : ನಾಲ್ಕು ದಿನಗಳ 'ಕೃಷಿ ಮೇಳ-2017'ವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಇಂದು (ನವೆಂಬರ್ 16) ಜಿ.ಕೆ.ವಿ.ಕೆಯಲ್ಲಿ ಉದ್ಘಾಟನೆ ಮಾಡಿದರು.

In Pics: ಜಿಕೆವಿಕೆಯಲ್ಲಿ ಕೃಷಿ ಮೇಳದಲ್ಲಿ ಹಳ್ಳಿ ಸೊಗಡು, ಸೊಬಗು

ನಿಗದಿಯಾದ ಸಮಯಕ್ಕೆ ಸರಿಯಾಗಿ ಜಿ.ಕೆ.ವಿ.ಕೆ ಗೆ ಆಗಮಿಸಿದ ರಾಜ್ಯಪಾಲರನ್ನು ಡೊಳ್ಳುಕುಣಿತ, ಮೇಳಗಳ ವಾದನ ಮತ್ತು ಪೂರ್ಣ ಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆತರಲಾಯಿತು.

ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ, ಸಾವಯವ ಊಟ ಸೇವಿಸಿ

ರಾಷ್ಟ್ರಗೀತೆ, ನಾಡಗೀತೆಗಳನ್ನು ಹಾಡುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು, ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಗಳಾದ ಎಚ್.ಶಿವಣ್ಣ ಅವರ ಪ್ರಾಸ್ಥಾವಿಕ ಭಾಷಣದ ನಂತರ ದೀಪ ಬೆಳಗಿಸುವ ಮೂಲಕ ರಾಜ್ಯಪಾಲರು ನಾಲ್ಕು ದಿನಗಳ ಕೃಷಿ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಕೃಷಿ ಮೇಳದಲ್ಲಿ ಮುದ್ದೆ, ಕಾಳು ಸಾರಿಗೆ ಮುಗಿಬಿದ್ದ ಜನ

ಉದ್ಘಾಟನೆ ನಂತರ ಕೃಷಿ ಕೈಪಿಡಿ ಬಿಡುಗಡೆ ಮಾಡಲಾಯಿತು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿರುವ ರೋಗನಿರೋಧಕ ಶಕ್ತಿಯ ಭತ್ತದ ತಳಿ, ವರ್ಷದ ಎಲ್ಲ ಕಾಲವೂ ಫಸಲು ಕೊಡುವ ಮೆಕ್ಕೆಜೋಳದ ತಳಿಗಳನ್ನು ರಾಜ್ಯಪಾಲರು ಲೋಕಾರ್ಪಣೆ ಮಾಡಿದರು.

ಕೈ ತುಂಬ ಬರುತ್ತಿದ್ದ ಸಂಬಳ ಬಿಟ್ಟು ಕಾಡಿನಲ್ಲೇ ನೆಲೆ ನಿಂತ ಶಿವಕುಮಾರ್

ರಾಜ್ಯಪಾಲರು ತಮ್ಮ ಭಾಷಣದ ಸರದಿ ಬಂದಾಗ ರೈತರ ಶ್ರಮಜೀವನವನ್ನು ಗುಣಗಾನ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ರೈತ ಪರವಾಗಿರುವಂತೆ ಸೂಚನೆ ನೀಡಿದರು. ರಾಜ್ಯಪಾಲರ ಭಾಷಣದ ವರದಿಗಾಗಿ ಮುಂದೆ ಓದಿರಿ...

ದೇಹದಂಡನೆ ಮಾಡುವ ಶ್ರಮಜೀವಿಗಳು

ದೇಹದಂಡನೆ ಮಾಡುವ ಶ್ರಮಜೀವಿಗಳು

ಕ್ಲರ್ಕ್ ಗಳಿಂದ ಹಿಡಿದು ಐಎಎಸ್, ಐಪಿಎಸ್ ಅಧಿಕಾರಿಗಳವರೆಗೆ ಯಾವುದೇ ರೀತಿಯ ಅಧಿಕಾರಿಗಳಾಗಿರಲಿ ಅವರಿಗಿಂತ ಮೂರು ಪಟ್ಟು ಹೆಚ್ಚು ರೈತರು ದುಡಿಯುತ್ತಾರೆ. ಆದರೆ ಅವರಿನ್ನೂ ಬಡತನದಲ್ಲಿಯೇ ಇದ್ದಾರೆ. ರೈತರಿಗೆ ಚಳಿಗಾಲ, ಬೇಸಿಗೆಕಾಲ, ಮಳೆಗಾಲಗಳು ಎಲ್ಲವೂ ಒಂದೇ, ಎಂತಹಾ ವಿಷಮ ಪರಿಸ್ಥಿತಿಯಲ್ಲೂ ಅವರು ದುಡಿಯುವುದು ಬಿಡುವುದಿಲ್ಲ, ಎಂದು ರೈತರ ಶ್ರಮದ ಗುಣಗಾನ ಮಾಡಿದ ರಾಜ್ಯಪಾಲರು ರೈತ ದೇಶದ ಬೆನ್ನೆಲುಬು ಎಂದು ಪುನರ್ ಉಚ್ಚರಿಸಿದರು.

ನದಿ ನೀರು ಯಾವ ಸರ್ಕಾರದ ಸ್ವತ್ತೂ ಅಲ್ಲ : ರಾಜ್ಯಪಾಲ ವಜುಭಾಯಿ ವಾಲಾ

ರೈತನ ಆದಾಯ ಹೆಚ್ಚಿದರೆ ಜಿಡಿಪಿ ಹೆಚ್ಚುತ್ತದೆ

ರೈತನ ಆದಾಯ ಹೆಚ್ಚಿದರೆ ಜಿಡಿಪಿ ಹೆಚ್ಚುತ್ತದೆ

ರೈತನ ಆದಾಯ ಹೆಚ್ಚಳ ಮಾಡುವುದು ಅತ್ಯವಶ್ಯಕ ಎಂದ ರಾಜ್ಯಪಾಲರು ಮಾರುಕಟ್ಟೆ ಚೇತರಿಕೆ ಕಾಣಬೇಕು ಜಿಡಿಪಿ ಹೆಚ್ಚಬೇಕೆಂದರೆ ರೈತನ ಆದಾಯ ಹೆಚ್ಚಲೇ ಬೇಕು ಎಂದರು. "ರೈತನ ಆದಾಯ ಹೆಚ್ಚಿ ಆತ ಕೊಳ್ಳುವ ಸಾಮರ್ಥ್ಯ ಸಂಪಾದಿಸಿದರೆ ಮಾರುಕಟ್ಟೆ ಚಿಗುರುತ್ತದೆ. ದೇಶದ ಬಹುಸಂಖ್ಯ ರೈತರಿಗೆ ಕೊಳ್ಳುವ ಸಾಮರ್ಥ್ಯ ಇಲ್ಲದ ಕಾರಣ ದೇಶದ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಇದು ಪರೋಕ್ಷವಾಗಿ ಜಿಡಿಪಿ ಮೇಲೆ ಪರಿಣಾಮ ಬೀರುತ್ತಿದೆ' ಎಂದು ತಮ್ಮ ಆರ್ಥಿಕ ಜ್ಞಾನದ ಪ್ರದರ್ಶನ ಮಾಡಿದರು.

ನಿಮ್ಮ ಮಣ್ಣಿನ ಗುಣ ನಿಮಗೆ ತಿಳಿದಿರಲಿ

ನಿಮ್ಮ ಮಣ್ಣಿನ ಗುಣ ನಿಮಗೆ ತಿಳಿದಿರಲಿ

ಭಾಷಣದಲ್ಲಿ ರೈತರಿಗೂ ಸಲಹೆ ಸೂಚನೆ ನೀಡಿದ ರಾಜ್ಯಪಾಲರು ಪ್ರತಿಯೊಬ್ಬ ರೈತನೂ ಮಣ್ಣಿನ ಪರೀಕ್ಷೆ ಮಾಡಿಸುವುದು ಅತ್ಯವಶ್ಯ ಎಂದರು. ಹಲವು ರಾಸಾಯನಿಕಗಳ ಬಳಕೆಯಿಂದ ಮಣ್ಣಿನಲ್ಲಿನ ಸಾರಗಳು ಏರುಪೇರಾಗಿರುತ್ತವೆ. ನಿಮ್ಮ ಹೊಲದ ಮಣ್ಣಿನಲ್ಲಿ ಯಾವ ಸಾರಗಳು ಕಡಿಮೆ ಇದೆಯೊ ಅದನ್ನು ಮಣ್ಣಿಗೆ ನೀಡಿ, ಅದರ ಫಲವತ್ತತೆ ಕಾಪಾಡಿಕೊಳ್ಳಲು ಮಣ್ಣು ಅತ್ಯವಶ್ಯ ಎಂದರು.

ರೈತರಿಗೆ ಅವರ ಜಮೀನಿನ ವರದಿ ಕೊಡಿ

ರೈತರಿಗೆ ಅವರ ಜಮೀನಿನ ವರದಿ ಕೊಡಿ

ರಾಜ್ಯದ ಎಲ್ಲ ರೈತರ ಜಮೀನಿನ ಮಣ್ಣಿನ ಪರೀಕ್ಷೆಯನ್ನು ಸರ್ಕಾರವೇ ಮಾಡಿ, ದತ್ತಾಂಶ ಸಂಗ್ರಹಿಸಿದರೆ ಬಹಳಾ ಅನುಕೂಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸಲಹೆ ನೀಡಿದರು. ಮಣ್ಣಿನ ಪರೀಕ್ಷೆ ಮಾಡಿ ಅದರ ಸಂಪೂರ್ಣ ವಿವರವನ್ನು ರೈತನಿಗೆ ಮುದ್ರಿಸಿ ನೀಡಿ, ಸರ್ಕಾರದ ಬಳಿಯೂ ಮಾಹಿತಿ ಇರಲಿ ಇದರಿಂದ ರೈತರಿಗೆ ಸಲಹೆ ಸೂಚನೆ ಕೊಡಲು ನೆರವಾಗುತ್ತದೆ, ಕೃಷಿ ಬಜೆಟ್ ಮಂಡಿಸಲು ಇದು ಸಹಕಾರಿ' ಎಂದು ಅವರು ಹೇಳಿದರು.

ವಿಜ್ಞಾನಿಗಳು ಹಳ್ಳಿಗಳನ್ನು ದತ್ತು ಪಡೆಯಿರಿ

ವಿಜ್ಞಾನಿಗಳು ಹಳ್ಳಿಗಳನ್ನು ದತ್ತು ಪಡೆಯಿರಿ

ಕೃಷಿ ಸಂಶೋಧಕರಿಗೆ ಸಲಹೆ ನೀಡಿದ ರಾಜ್ಯಪಾಲರು, ರಾಜ್ಯದಲ್ಲಿನ ಪ್ರತಿಯೊಬ್ಬ ಕೃಷಿ ಸಂಶೋಧಕರು ಇಂತಿಷ್ಟು ಗ್ರಾಮಗಳನ್ನು ದತ್ತು ಪಡೆದುಕೊಳ್ಳಿ, ಅಲ್ಲಿನ ರೈತರಿಗೆ ಕೃಷಿ ಮಾಹಿತಿ ನೀಡುವ,ಮಣ್ಣಿನ ಸಾರ ಹೆಚ್ಚಿಸುವ, ಹೊಸ ತಂತ್ರಜ್ಞಾನ ಅಳವಡಿಸುವ ಕಾರ್ಯಗಳನ್ನು ಮಾಡಿ' ಎಂದರು. ಗುಜರಾತ್ ನಲ್ಲಿ ಈ ಮಾದರಿ ಜಾರಿಯಲ್ಲಿದ್ದು ಸಾಕಷ್ಟು ಯಶಸ್ಸು ಕಂಡಿದೆ ಎಂದು ಅವರು ಹೇಳಿದರು. ಅದೇ ಮಾದರಿ ಕರ್ನಾಟಕದಲ್ಲಿಯೂ ಜಾರಿಯಾಗಲಿ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka governor Vajubhai Vala inaugurated 'Agri fest-2017' at GKVK on November 16. Agri fest-2017 is organised by Bengaluru Agriculture University, and it will end on 19th November.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ