ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯೋತ್ಸವ: ವಿಶಿಷ್ಟ ಸೇವಾ ಮತ್ತು ಶ್ಲಾಘನೀಯ ಪದಕ ಪ್ರದಾನ

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 14 : ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಅಗ್ನಿಶಾಮಕ ಸೇವಾ ಪದಕ ನೀಡಲು ಸರ್ಕಾರ ತೀರ್ಮಾನಿಸಿದೆ.

ಸೇವಾ ಪದಕವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪ್ರಧಾನ ಮಾಡಲಿದ್ದು, ಅಧಿಕಾರಿಗಳ ವಿಶೇಷ, ಶ್ಲಾಘನೀಯ ಸೇವೆಗಾಗಿ 2015 ರ ಸ್ವಾತಂತ್ರ್ಯೋತ್ಸವ ಪ್ರಶಸ್ತಿಯನ್ನು ಮಾಣೆಕ್ ಷಾ ಕ್ರೀಡಾಂಗಣದಲ್ಲಿ ನೀಡಲಾಗುತ್ತಿದೆ.[ಸ್ವಾತಂತ್ರ್ಯ ದಿನಾಚರಣೆ : ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್]

Government takes decision issued a servicing medals to police in Maaneksha playground

ಸ್ವಾತಂತ್ರ್ಯೋತ್ಸವ ಪ್ರಶಸ್ತಿಯಲ್ಲಿ ಈ ಬಾರಿ ವಿಶಿಷ್ಟ ಪದಕಕ್ಕೆ ಒಬ್ಬರನ್ನು, ಶ್ಲಾಘನೀಯ ಪದಕಕ್ಕೆ ನಾಲ್ವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ನಗರದ ಹೆಚ್ಚುವರಿ ಪೊಲೀಸ್ ಕಮೀಷನರ್ ಬಿ.ಎನ್.ಎಸ್ ರೆಡ್ಡಿ (IPS), ಡಿಸಿಪಿ ಕೆ.ಈಶ್ವರ್ ಪ್ರಸಾದ್, ವಿಜಯನಗರ ಉಪವಿಭಾಗ ಪೊಲೀಸ್ ಅಧಿಕಾರಿ ಉಮೇಶ್ ಎಸ್.ಕೆ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Government takes decision issued a servicing medals to police in Maaneksha playground

ವಿಶಿಷ್ಟ ಸೇವಾ ಪದಕ :-

* ಮಾರ್ಕಂಡೇಯ ಎನ್.ಆರ್, ಉಪ ನಿರ್ದೇಶಕರು(ಅಗ್ನಿ ನಿಯಂತ್ರಣ), ಅಗ್ನಿಶಾಮಕ ಸೇವಾ ಪ್ರಧಾನ ಕಚೇರಿ, ಬೆಂಗಳೂರು

ಶ್ಲಾಘನೀಯ ಸೇವಾ ಪದಕ :-

* ಗುರುಲಿಂಗಯ್ಯ. ಸಿ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಬೆಂಗಳೂರು ದಕ್ಷಿಣ ವಲಯ.

* ಒಬಯ್ಯ ಮೂಲ್ಯ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಬನ್ನಿಮಂಟಪ ಅಗ್ನಿಶಾಮಕ ಠಾಣೆ, ಮೈಸೂರು.

* ಚನ್ನಪ್ಪ, ಅಗ್ನಿಶಾಮಕ ಠಾಣಾಧಿಕಾರಿ, ಅಗ್ನಿಶಾಮಕ ಸೇವೆಗಳ ಅಕಾಡೆಮಿ, ಬೆಂಗಳೂರು.

* ಬಾಷ ಸಾಹೇಬ್, ಪೇಂಟರ್, ಅಗ್ನಿಶಾಮಕ ಸೇವಾ ಕಾರ್ಯಗಾರ, ಬೆಂಗಳೂರು.

English summary
Government takes decision issued a servicing medals in Maanekshaw playground, President Pranab Mukherjee issue a medals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X