ಉಕ್ಕಿನ ಸೇತುವೆ: ತಡೆಯಾಜ್ಞೆಗೆ ಸರ್ಕಾರದ ಮೇಲ್ಮನವಿ

Posted By: Ananthanag
Subscribe to Oneindia Kannada

ಬೆಂಗಳೂರು, ನವೆಂಬರ್ 2- ಬಿಡಿಎ ವತಿಯಿಂದ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ಧ ಸರ್ಕಾರ ಹಸಿರು ಪೀಠದ ತಡೆಯಾಜ್ಞೆಯಿಂದ ಅಮಾಧಾನಗೊಂಡಿದ್ದು ಈಗ ವಿಶೇಷ ಮೇಲ್ಮನವಿಯನ್ನು ಸಲ್ಲಿಸಲು ಮುಂದಾಗಿದೆ.

ರಾಜ್ಯ ಸರ್ಕಾರ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯದ ಪೀಠವು ನಾಲ್ಕು ವಾರಗಳ ಮಧ್ಯಂತರ ತಡೆಯಾಜ್ಞೆ ನೀಡಿರುವುದನ್ನು ತೆರವು ಕೋರಿ ಇಂದು ಅಥವಾ ನಾಳೆ ಅರ್ಜಿ ಸಲ್ಲಿಸಲಿದೆ.

ಪರಿಸರ ನಾಶದ ಕಾರಣ ನೀಡಿ ಯೋಜನೆಯನ್ನು ನಿಲ್ಲಿಸುವ ಸಿಟಿಜನ್ ಫೋರಂನ ನೀಲಯ್ಯ ಹಾಗೂ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಸುಬ್ರಮಣಿಯನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎಸ್.ನಂಬಿಯಾರ್ ಹಾಗೂ ತಜ್ಞ ಸದಸ್ಯ ಪಿ.ಎಸ್.ರಾವ್ ಅವರನ್ನೊಳಗೊಂಡ ಪೀಠವು ತಡೆಯಾಜ್ಞೆಯ ಆದೇಶ ನೀಡಿತ್ತು. ಪರಿಸರದ ಮೇಲಾಗುವ ಪರಿಣಾಮಗಳ ಬಗೆಗಿನ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿ ಅರ್ಜಿ ವಿಚಾರಣೆಯನ್ನು ನ.25ಕ್ಕೆ ಮುಂದೂಡಲಾಗಿತ್ತು.[ಬೆಂಗಳೂರು: ಉಕ್ಕಿನ ಸೇತುವೆ ನಿರ್ಮಾಣಕ್ಕೆ ತಾತ್ಕಾಲಿಕ ತಡೆ!]

Government plans to submit Appeals for The National Green Tribunal

ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗೆ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 1,900 ಕೋಟಿ ವೆಚ್ಚದಲ್ಲಿ 6.72 ಕಿ.ಮೀ. ಉದ್ದದ ಷಟ್ಪಥದ ಉಕ್ಕಿನ ಸೇತುವೆ ನಿರ್ಮಿಸಲು ಬಿಡಿಎ ಕಾರ್ಯ ರೂಪಿಸಿತ್ತು. ಸೇತುವೆಯಿಂದ 800ಕ್ಕೂ ಹೆಚ್ಚು ಮರಗಳು ಬಲಿಯಾಗಲಿವೆ ಎಂದು ಅರಿತ ಪರಿಸರವಾದಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರ ಯೋಜನೆಯಿಂದ ಸಾರ್ವಜನಿಕರಿಗೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ಮತ್ತು ಮಾಲಿನ್ಯ ನಿಯಂತ್ರಕ್ಕೆ ಕ್ರಮ ಕೈಗೊಂಡಿರುವ ಕ್ರಮಗಳ ಬಗ್ಗೆ ಹಸಿರು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

ಸೇತುವೆಗಾಗಿ ಎಲ್ ಅಂಡ್ ಟಿ ಸಂಸ್ಥೆಗೆ ಯೋಜನೆಗೆ ಗುತ್ತಿಗೆ ಸಹ ನೀಡಿತ್ತು. ಮೊದಲಿಗೆ ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ 6.7 ಕಿ.ಮೀ.,ನಂತರ ಅದನ್ನು ಯಲಹಂಕ ಕಡೆ ಸಾಗುವ ಮಾರ್ಗದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆವರೆಗೂ ವಿಸ್ತರಿಸಲು ಯೋಜನೆ ರೂಪಿಸಲಾಗಿತ್ತು. ಅದಕ್ಕೆ ಇದೇ ನವೆಂಬರ್ ೧ ರಂದು ಗುದ್ದಲಿ ಪೂಜೆ ನೆರವೇರಿಸಲು ಮುಂದಾಗಿದ್ದರು. ಈ ಕಾರ್ಯಕ್ಕೆ ತಜೆಯಾಜ್ಞೆಯು ತಣ್ಣಿರೆಚಿದಂತಾಗಿದೆ.

ಒಟ್ಟು ಸೇತುವೆ ನಿರ್ಮಾಣಕ್ಕೆ 2500 ಕೋಟಿ ವರೆಗೆ ಆಯವ್ಯಯ ಅಂದಾಜಿಸಲಾಗಿತ್ತು. ಆದರೆ ಪರಿಸರ ನಾಶ ಮತ್ತು ಉಕ್ಕಿನ ಯೋಜನೆಗೆ ತಗುಲುವ ಭಾರಿ ಪ್ರಮಾಣದ ನಷ್ಟವನ್ನು ಅರಿತ ನಾಗರೀಕರು ಇದನ್ನು ವಿರೋಧಿಸುತ್ತಿದ್ದು, ಇದುವರೆಗೂ ಜನರ ವಿರುದ್ಧವಾಗಿಯೇ ನಡೆದಿರುವ ಸರ್ಕಾರ ಮುಂದೆಯೂ ಯಾವ ದಾರಿ ಸಾಗಲಿದೆ ನೋಡಬೇಕು.
ಪರಿಸರ ಮಾರ್ಗವಾದರೆ ಎಲ್ಲರಿಗೂ ಹಿತ ಎಂಬುದು ಚಿಂತಕರ ಮಾತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The steel bridge decide to built by BDA, government plans to submit an appeal to The National Green Tribunal on today or tommower.
Please Wait while comments are loading...