ಟ್ಯಾಕ್ಸಿ ದರ ಕೊನೆಗೂ ಪ್ರಕಟಿಸಿದ ಸರ್ಕಾರ!

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 08 : ಬೆಂಗಳೂರಿನಲ್ಲಿ ಸಂಚರಿಸುವ ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಊಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿ ಗಳಿಗೆ ಸಾರಿಗೆ ಇಲಾಖೆಯು ಕನಿಷ್ಠ ಪ್ರಯಾಣ ದರ ನಿಗದಿ ಮಾಡಿದೆ.

ಸಣ್ಣ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀಗೆ ಕನಿಷ್ಠ ದರ 44 ರೂ ಹಾಗೂ ಐಷಾರಾಮಿ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ ಗೆ 80 ರೂ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ದರಪಟ್ಟಿ ಪ್ರಕಾರ ಕಾರುಗಳ ಮಾರುಕಟ್ಟೆ ಬೆಲೆ ಆಧರಿಸಿ, ಪ್ರಯಾಣ ದರವನ್ನು ಎ,ಬಿ,ಸಿ ಮತ್ತು ಡಿ ನಾಲ್ಕು ಮಾದರಿಯ ದರಗಳನ್ನು ನಿಗದಿಪಡಿಸಲಾಗಿದೆ.

ಓಲಾ-ಊಬರ್ ಟ್ಯಾಕ್ಸಿಗಳಿಗೆ ಸರ್ಕಾರದಿಂದಲೇ ರೇಟ್ ಫಿಕ್ಸ್!

ಸಣ್ಣ ಕಾರುಗಳು ಡಿ ದರ್ಜೆಯಲ್ಲಿ ಬರುತ್ತಿದ್ದು, ಅವುಗಳಿಗೆ ಕನಿಷ್ಠ 44 ರೂ ಹಾಗೂ 16 ಲಕ್ಷ ರೂ. ಹೆಚ್ಚಿನ ಬೆಲೆಯ ಕಾರುಗಳಿಗೆ ಎ ದರ್ಜೆ ನೀಡಲಾಗಿದ್ದು, ಅದಕ್ಕೆ ಕನಿಷ್ಠ 80 ರೂ. ನಿಗದಿಪಡಿಸಲಾಗಿದೆ. ಈ ಹಿಂದೆ 2013ರ ಜೂನ್ ನಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು.

Government fixes minumum taxi fare Rs 14

ಸಣ್ಣ ಕಾರುಗಳ ಗರಿಷ್ಠ ದರವು 14.50 ಮತ್ತು ಮಧ್ಯಮ ಕಾರುಗಳಿಗೆ 19.20 ರೂ ಪ್ರಯಾಣ ದರವಿತ್ತು. ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಪ್ರಯಾಣ ದರ ಪರಿಷ್ಕರಣೆಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ದರ ಪರಿಷ್ಕರಣೆ ಮಾಡಿ, ಕನಿಷ್ಠ ದರ ನಿಗದಿಪಡಿಸಿದೆ.

ಸಂಕ್ರಾಂತಿ ವಿಶೇಷ ಪುಟ

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಟ್ಯಾಕ್ಸಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಟ್ಯಾಕ್ಸಿ ಸೇವಾ ಕಂಪನಿಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು. ಅಂತೆಯೇ ಕಂಪನಿಗಳು ಕಡಿಮೆ ಕಮಿಷನ್ ನೀಡುತ್ತಿವೆ ಎಂದು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಆರೋಪಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಇಲಾಖೆ ಸಚಿವರು ಟ್ಯಾಕ್ಸಿಗಳಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಗೆ ಸಾರಿಗೆ ಆಯುಕ್ತರಿಗೆ ಸೂಚಿಸಿದ್ದರು. ಇದೀಗ ಸಾರಿಗೆ ಇಲಾಖೆಯು ದರ ನಿಗದಿ ಮಾಡಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೂ ಮೊದಲು ದರ ನಿಗದಿ ಸಂಬಂಧ ಸಾರಿಗೆ ಇಲಾಖೆಯು ಎಸಿ ಟ್ಯಾಕ್ಸಿಗೆ ಪ್ರತಿ ಕಿ.ಮೀ ಕನಿಷ್ಠ 12 ರೂ. ಹಾಗೂ ನಾನ್ ಎಸಿ ಗೆ ಪ್ರತಿ ಕಿ.ಮೀ ಗೆ ಕನಿಷ್ಠ 10 ರೂ ನಿಗದಿಗೊಳಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Government has been announced taxi fare in Bengaluru on Wednesday. The tariff has mentioned that for the first 4km Rs44 is minimum fare for small cars while Rs.80 for laxury category vehicles.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ