ಅಮರ ಗಾಯಕ ಮುಖೇಶ್ ಗೆ ಗೂಗಲ್ ಡೂಡ್ಲ್ ನಮನ

Posted By:
Subscribe to Oneindia Kannada

ಬೆಂಗಳೂರು, ಜುಲೈ 22: ಹಿಂದಿ ಚಿತ್ರರಂಗ ಅಮರ ಹಿನ್ನೆಲೆ ಗಾಯಕ ಮುಖೇಶ್ ಅವರ 93ನೇ ಹುಟ್ಟುಹಬ್ಬದ ವಾರ್ಷಿಕೋತ್ಸವಕ್ಕೆ ಗೌರವ ಸಲ್ಲಿಸಲು ಗೂಗಲ್ ಡೂಡಲ್ ಮಾಡಿದೆ.

ಗೂಗಲ್ ಇಂಡಿಯಾದ ಡೂಡ್ಲ್ ಮುಖಪುಟದಲ್ಲಿ ಮುಖೇಶ್ ಅವರು ಮೈಕ್ ಜತೆಗಿರುವ ರೇಖಾ ಚಿತ್ರವನ್ನು ಚಿತ್ರಿಸಲಾಗಿದೆ.['ಮದರ್ ಇಂಡಿಯಾ' ನರ್ಗಿಸ್ ದತ್ ಗೆ ಗೂಗಲ್ ನಮನ]

Google celebrates Mukesh's 93rd birth anniversary

ಈ ರೇಖಾ ಚಿತ್ರದ ಹಿಂದೆ ಕಭಿ ಕಭಿ ಮೇರೆ ದಿಲ್ ಮೇ ಹಾಡಿನಲ್ಲಿರುವ ಅಮಿತಾಬ್ ಹಾಗೂ ರಾಖಿ ಅವರ ಅವರ ರೇಖಾ ಚಿತ್ರವಿದೆ.

ಬಾಲಿವುಡ್ ನ ಶೋ ಮ್ಯಾನ್ ರಾಜ್ ಕಪೂರ್ ಅವರ ಶಾರೀರವಾಗಿದ್ದ ಮುಖೇಶ್ ಅವರು ನಂತರ ಇತರೆ ಸ್ಟಾರ್ ನಟರಿಗೂ ಕಂಠ ದಾನ ಮಾಡಿದರು. [ಆರ್.ಕೆ.ನಾರಾಯಣ್ ಗೆ ನಮನ ಸಲ್ಲಿಸಿದ ಗೂಗಲ್]


ಕಿಸಿ ಕಿ ಮುಸ್ಕುರಾಹಟೊ ಪೆ ಹೋ ನಿಸಾರ್, ದೋಸ್ತ್ ದೋಸ್ತ್ ನಾ ರಹಾ, ಮೇರೆ ಟೂಟ್ ಹುಯೆ ದಿಲ್ ಸೇ, ಆವಾರಾ ಹೂ, ಜಾನೆ ಕಹಾ ಗಯೇ ವೊ ದಿನ್ ಸೇರಿದಂತೆ ಹಲವು ಗೀತೆಗಳು ಮುಖೇಶ್ ಅವರ ಮಧುರ ಕಂಠದಲ್ಲಿ ಬಂದಿದೆ.[ಸರ್ಚ್ ಇಂಜಿನ್ ಗೂಗಲ್ ಗೆ 17ರ ಹರೆಯ]

ಸುಮಾರು 1,300 ಹಾಡುಗಳಲ್ಲಿ ಕಭಿ ಕಭಿ ಮೇರೆ ದಿಲ್ ಮೇ, ಸಬ್ಸೆ ಬಡಾ ನಾದಾನ್, ಜೈ ಬೋಲೊ ಬೈಮಾನ್ ಕಿ, ಸಬ್ ಕುಚ್ ಸೀಖಾ ಹುಮ್ನೆ, ಕಹೀನ್ ದೂರ್ ಜಬ್ ದಿನ್ ಜಲ್ ಜಾಯೇ ಮುಂತಾದ ಸುಮಧುರ ಗೀತೆಗಳ ಜೊತೆಗೆ ಕಾಡುವಂಥ ವಿರಹ ಗೀತೆಗಳ ವಿಶಿಷ್ಟ ಗಾಯಕರಾಗಿದ್ದರು.

1923ರಲ್ಲಿ ದೆಹಲಿಯಲ್ಲಿ ಜನಿಸಿದ ಮುಖೇಶ್ ಅವರು 1941ರಲ್ಲಿ ದಿಲ್ ಹಿ ಬುಜಾ ಹುವಾ ಹೋ ಗೀತೆಯನ್ನು ಹಾಡುವ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದರು.ಮುಖೇಶ್ 1976 ಅಗಸ್ಟ್ 27ರಂದು ಹೃದಯಾಘಾತದಿಂದ ಅಮೆರಿಕದಲ್ಲಿ ಮೃತಪಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mukesh, the legendary playback singer, is being celebrated by Google India today with a doodle to mark his 93rd birth anniversary.
Please Wait while comments are loading...