ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಗೃಹ ಕಚೇರಿ ಎದುರು ಹೆಚ್ಚುವರಿ ಪೊಲೀಸ್‌ ಆಯುಕ್ತರ ಕಾರ್‌ ಗ್ಲಾಸ್‌ ಜಖಂ

By Nayana
|
Google Oneindia Kannada News

ಬೆಂಗಳೂರು, ಜು.15: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಗೃಹ ಕಚೇರಿ ಕೃಷ್ಣಾ ಬಳಿ ಪಾರ್ಕ್ ಮಾಡಲಾಗಿದ್ದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್‌ ಸಿಂಗ್ ಕಾರಿನ ಗಾಜು ಪುಡಿ ಪುಡಿಯಾಗಿದೆ.

ಈ ಘಟನೆ ಮೊದಲಲ್ಲ 2006ರಲ್ಲೂ ಕೂಡ ಇಂಥದ್ದೇ ಪ್ರಕರಣ ನಡೆದಿತ್ತು, ಎಚ್‌ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಜನತಾ ದರ್ಶನ ಮಾಡುತ್ತಿದ್ದಾಗ ಗಾಲ್ಫ್‌ ಚೆಂಡು ಬಿದ್ದು ಆತಂಕ ಸೃಷ್ಟಿ ಮಾಡಿತ್ತು, ಸಾಕಷ್ಟು ಸುದ್ದಿ ಮಾಡಿತ್ತು, ಆದರೆ ಇದೀಗ ಮತ್ತದೇ ಘಟನೆ ನಡೆದಿದ್ದು ಮತ್ತೆ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರುವಾಗಲೇ ಮತ್ತೆ ಚೆಂಡು ಆವರಣದಿಂದ ಹೊರ ಬಿದ್ದು ಸುದ್ದಿಯಾಗಿದೆ.

ಗಾಲ್ಫ್‌ ಮೈದಾನವನ್ನೇ ಬೇರೆಡೆಗೆ ಸ್ಥಳಾಂತರಿಸಿವುದಾಗಿ ಡಿಸಿಎಂ ಪರಮೇಶ್ವರ್‌ ತಿಳಿಸಿದ್ದಾರೆ. ಶನಿವಾರ ಸಂಜೆ ಕಾರ್ಯ ನಿಮಿತ್ತ ಕೃಷ್ಣಾಗೆ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಇನ್ನೋವಾ ಕಾರಿನಲ್ಲಿ ಆಗಮಿಸಿದ್ದರು. ಈ ವೇಳೆ ಪಾರ್ಕಿಂಗ್‌ ಮಾಡಲಾಗಿದ್ದ ಕಾರಿನ ಮೇಲೆ ಗಾಲ್ಫ್‌ ಚೆಂಡು ಬಿದ್ದಿದ್ದು ಗಾಜು ಜಖಂಗೊಂಡಿದೆ.

Golf ball broken cops vehicle glass at CMs home office

ಪೊಲೀಸರು ಹಾಗೂ ಇದರಿಂದ ಪೊಲೀಸರು ಹಾಗೂ ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಂದರ್ಶಕರು ಆತಂಕಗೊಂಡರು.ನಗರ ಕೇಂದ್ರ ಭಾಗದಲ್ಲಿರುವ ಗಾಲ್ಫ್‌ ಮೈದಾನದ ಸುತ್ತ ಬಹುತೇಕ ಸಂದರ್ಭ ಮೈದಾನದ ಸುತ್ತ ಬಹುತೇಕ ಸಂದರ್ಭಗಳಲ್ಲಿ ವಾಹನಗಳು ಸಂಚರಿಸುತ್ತಿರುತ್ತದೆ.

ಪ್ರತಿಷ್ಠಿತ ಹೋಟೆಲ್‌ಗಳು , ಶಾಲೆ, ಸರ್ಕಾರಿ ಕಚೇರಿಗಳು, ನಿವಾಸಗಳಿವೆ. ಚೆಂಡು ಹೊರ ಬೀಳಬಾರದು ಎಂದು ಮೈದಾನದಲ್ಲಿ ಸುತ್ತಲೂ ಸಾಕಷ್ಟು ಜಾಲರಿ, ನೆಟ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ.

English summary
Additional Commissioner of Police Seemanth Kumar Singh's official vehicle's front glass was broken after a ball thrown out from Golf ground at chief minister's home office Krishna on Saturday. It was second incident that ball was came out to CM's house office from golf ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X