ಏರ್‌ಪೋರ್ಟ್‌ನಲ್ಲಿ ಚಿನ್ನ ಕಳ್ಳಸಾಗಣೆ ಶೇ.200ರಷ್ಟು ಏರಿಕೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ವಿದೇಶಗಳಿಂದ ವಿಮಾನದ ಮೂಲಕ ಬೆಂಗಳೂರಿಗೆ ಚಿನ್ನ ಕಳ್ಳ ಸಾಗಣೆ ಮಾಡುವ ಪ್ರಮಾಣ ಈ ಸಾಲಿನಲ್ಲಿ ಶೇ.200ರಷ್ಟು ಹೆಚ್ಚಳವಾಗಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ಸಾಗಾಟಗಾರನ ಬಂಧನ

ಕೆಐಎ ಕಸ್ಟಮ್ಸ್ ಅಧಿಕಾರಿಗಳು 2017-18ನೇ ಸಾಲಿನಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ 34 ಪ್ರಯಾಣಿಕರನ್ನು ಬಂಧಿಸಿ, 30.48ಕೋಟಿ ರೂ. ಮೌಲ್ಯದ 100ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. 2016-17ರಲ್ಲಿ 9.97ಕೋಟಿ ರೂ. ಮೌಲ್ಯದ 34.49ಕೆಜಿ ಚಿನ್ನ ಜಪ್ತಿ ಮಾಡಲಾಗಿತ್ತು ಎಂದು ಕಸ್ಟಮ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಚಿನ್ನ ಕಳ್ಳ ಸಾಗಣೆದಾರರು ಹೊಸ ಮಾದರಿಯಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನಿಸುತ್ತಿದ್ದಾರೆ. ಮಹಿಳೆಯರ ಹೇರ್ ಕ್ಲಿಪ್, ಗ್ಯಾಸ್ ಸ್ಟೌ, ಲಗೇಜ್ ಗಳು, ಸೀರೆ ಡಿಸೈನ್, ಮಣ್ಣು ಮತ್ತು ರಾಸಾಯನಿಕ ಪದಾರ್ಥದಲ್ಲಿ ಚಿನ್ನದ ಪುಡಿ ಬೆರಕೆ, ಸಿಹಿ ತಿನಿಸುಬಾಕ್ಸ್ ನಲ್ಲಿ ಗೊಂಬೆಗಳು ಸೇರಿದಂತೆ ನಾನಾ ವಸ್ತುಗಳಲ್ಲಿ ಹಳದಿ ಲೋಹವನ್ನು ಬಚ್ಚಿಟ್ಟುಕೊಂಡು ನಗರಕ್ಕೆ ತರುತ್ತಿದ್ದಾರೆ.

ಮಂಗಳೂರು: ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಚಿನ್ನ ವಶ, 4 ಬಂಧನ

Gold smuggling increased 200percent in Bengaluru Airport

ದುಬೈನಿಂದ ಆಟೋ ಮೊಬೈಲ್ ಕೊರಿಯರ್ ಕಳುಹಿಸುವ ಸೋಗಿನಲ್ಲಿ ಇಂಧನ ಪಂಪ್ ಮತ್ತು ಏರ್ ಫಿಲ್ಟರ್ ಒಳಗೆ 33.5ಕೆಜಿ ಚಿನ್ನವನ್ನು ಬಚ್ಚಿಟ್ಟು, ಬಣ್ಣದ ಲೇಪನ ಮಾಡಿರುವುದು ಕಸ್ಟಮ್ ಅಧಿಕಾರಿಗಳ ದೊಡ್ಡ ಕಾರ್ಯಾಚರಣೆಯಾಗಿದೆ. ಗಲ್ಫ್ ರಾಷ್ಟ್ರಗಳು, ಶ್ರೀಲಂಕಾ, ಮಲೇಷಿಯಾದಿಂದ ಹೆಚ್ಚಾಗಿ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is 200 percent increase in gold smuggling at Kempegowda international Airport Bengaluru. KIA customs Department officers released the last economic year data.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ