ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರೇ ಹುಷಾರ್, ಬೆಂಗಳೂರಲ್ಲಿ ಮತ್ತೆ ಸರಗಳ್ಳತನ

|
Google Oneindia Kannada News

ಬೆಂಗಳೂರು, ಫೆಬ್ರವರಿ, 17: ಮಹಿಳೆಯರೇ ಹುಷಾರ್...! ಕೆಲ ದಿನಗಳಿಂದ ಮರೆಯಾಗಿದ್ದ ಸರಗಳ್ಳರು ಬೆಂಗಳೂರಿನಲ್ಲಿ ಮತ್ತೇ ತಮ್ಮ ಕೈಚಳಕ ತೋರಿಸಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ಮಹಿಳೆಯ ಸರ ಅಪಹರಣ ಮಾಡಿ ಪರಾರಿಯಾಗಿದ್ದಾರೆ.

ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 55 ವರ್ಷದ ಯಶೋಧಮ್ಮ ಸರ ಕಳೆದುಕೊಂಡವರು. ಬುಧವಾರ ಬೆಳಗ್ಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ಕುತ್ತಿಗೆಯಲ್ಲಿದ್ದ ಸರ ಎಳೆದುಕೊಂಡು ಪರಾರಿಯಾಗಿದ್ದಾರೆ[ಫೆಬ್ರವರಿ 7 ರಂದು ಸರ ಕಳೆದುಕೊಂಡವರ ಪಟ್ಟಿ]

Gold chain snatching incident continues in Bengaluru, Feb 17,2016

ಘಟನೆ ನಡೆದದ್ದು ಹೇಗೆ?

ಯಶೋಧಮ್ಮ ಬೆಳಗ್ಗೆ 9.30 ರ ಸುಮಾರಿಗೆ ರಸಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಿಂದಿನಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆ ಕುತ್ತಿಗೆಗೆ ಕೈ ಹಾಕಿ ಸರ ಎಳೆದುಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ.[ಭಾನುವಾರವನ್ನೇ ಟಾರ್ಗೆಟ್ ಮಾಡಿಕೊಂಡ ಸರಗಳ್ಳರು]

ಇಷ್ಟು ದಿನ ಮುಂಜಾನೆ ವೇಳೆ ಸರಗಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಆದರೆ ಇದೀಗ ಜನರ ಓಡಾಡ ಹೆಚ್ಚಿರುವ ವೇಳೆಯೇ ಅಂದರೆ ಬೆಳಗ್ಗೆ 9.30 ರ ವೇಳೆ ಪ್ರಕರಣ ನಡೆದಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಹೆಲ್ಮೆಟ್ ಕಡ್ಡಾಯಕ್ಕೂ ನಂಟೆ?

ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದರೆ ಸರಗಳ್ಳತನ ಪ್ರಕರಣ ಹೆಚ್ಚುತ್ತದೆ ಎಂದು ನಾಗರಿಕರು ಆರೋಪಿಸಿದ್ದರು. ಇದೀಗ ಎರಗಳ್ಳತನ ಮಾಡಿರುವ ಆರೋಪಿಗಳು ಸಹ ಹೆಲ್ಮೆಟ್ ಧರಿಸಿಕೊಂಡೇ ಬಂದಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಏನೆನ್ನುತ್ತದೆಯೋ!

English summary
Bengaluru: One more chain snatching incident reported in Nandini Layout Police station limits on February 17, 2016. Case registered at Nandini Layout police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X