ಲಗ್ಗೆರೆ ಚಿನ್ನದ ಅಂಗಡಿಗೆ ಕಳ್ಳರ ಲಗ್ಗೆ, ಚಿನ್ನ ಬೆಳ್ಳಿ ಲೂಟಿ

Posted By:
Subscribe to Oneindia Kannada

ಬೆಂಗಳೂರು, ಮೇ 10 : ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಒಳನುಗ್ಗಿದ ಕಳ್ಳರು, 1 ಕೆಜಿ ಚಿನ್ನ ಮತ್ತು 2 ಕೆಜಿ ಬೆಳ್ಳಿ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಲಗ್ಗೆರೆಯ ಮಹಾಲಕ್ಷ್ಮೀ ಜ್ಯುವೆಲರಿ ಶಾಪ್‌ಗೆ ಮಂಗಳವಾರ ಮುಂಜಾನೆ ನುಗ್ಗಿದ ಮೂವರು ದುರ್ಷರ್ಮಿಗಳು, ಅಂಗಡಿಯಲ್ಲಿ ಮಲಗಿದ್ದ ಮಾಲೀಕ ಚೆನ್ನಾರಾಂ ಅವರನ್ನು ಬೆದರಿಸಿ ಚಿನ್ನ ಮತ್ತು ಬೆಳ್ಳಿ ದೋಚಿದ್ದಾರೆ. [ಇಂದಿನ ಚಿನ್ನದ ದರ ಎಷ್ಟಿದೆ?]

 jewellery

ಜ್ಯುವೆಲ್ಲರಿ ಶಾಪ್ ಹಿಂಬದಿಯ ಗೋಡೆ ಕೊರೆದು ಒಳ ನುಗ್ಗಿರುವ ಕಳ್ಳರು, ಅಂಗಡಿಯಲ್ಲಿರುವ ಸಿಸಿಟಿವಿಗಳಿಗೂ ಹಾನಿ ಮಾಡಿದ್ದಾರೆ. ಬಂದವರೆಲ್ಲ 25 ರಿಂದ 30 ವರ್ಷ ವಯಸ್ಸಿನ ಯುವಕರಾಗಿದ್ದು, ಎಲ್ಲರೂ ಹಿಂದಿ ಮಾತನಾಡುತ್ತಿದ್ದರು ಎಂದು ಮಾಲೀಕ ಚೆನ್ನಾರಾಂ ಪೊಲೀಸರಿಗೆ ತಿಳಿಸಿದ್ದಾರೆ. [ಅಕ್ಷಯ ತೃತೀಯಾ: ಚಿನ್ನ ಖರೀದಿ ಮಾಡಿದವರು ಏನು ಹೇಳಿದರು?]

ಸುಮಾರು 1 ಕೆಜಿ ಚಿನ್ನ ಮತ್ತು 1 ಕೆಜಿ ಬೆಳ್ಳಿ ದೋಚಿರುವ ದುಷ್ಕರ್ಮಿಗಳು, ಬೆರಳಚ್ಚು ಸಿಗಬಾರದು ಎಂದು ಶಾಪ್‌ನ ಗಾಜಿನ ಮೇಳೆ ಖಾರದ ಪುಡಿ ಹಾಕಿದ್ದಾರೆ. ಕೈಗೆ ಸಿಕ್ಕ ಆಭರಣಗಳನ್ನು ಮಾತ್ರ ದೋಚಿರುವ ಕಳ್ಳರು ಲಾಕರ್‌ನಲ್ಲಿದ್ದ ಚಿನ್ನವನ್ನು ಮುಟ್ಟಿಲ್ಲ. [ಚಿನ್ನದ ದರ 30 ಸಾವಿರ ತಲುಪಲು ಕಾರಣವೇನು?]

ರಾಜಸ್ಥಾನ ಮೂಲದವರಾದ ಚೆನ್ನಾರಾಂ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸುಮಾರು ಎರಡು ವರ್ಷದಿಂದ ಲಗ್ಗೆರೆಯಲ್ಲಿ ಮಹಾಲಕ್ಷ್ಮೀ ಜ್ಯುವೆಲರ್ಸ್ ನಡೆಸುತ್ತಿದ್ದಾರೆ. ರಾಜಗೋಪಾಲನಗರ ಪೊಲೀಸರು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rajgopalnagar police have registered a case of theft at the Mahalakshmi jewellery shop at Laggere, Bengaluru on Tuesday early morning. The theft was carried out by the thieves by drilling through the back wall of the shop. 1 kilogram of gold and silver stolen from jewellery.
Please Wait while comments are loading...