ಎಸ್ಪಿಬಿ, ಹರಿಹರನ್ ಸಮ್ಮುಖದಲ್ಲಿ ಗಾನ ಕೋಗಿಲೆಗಳ ಕಲರವ

Posted By:
Subscribe to Oneindia Kannada

ಬೆಂಗಳೂರು, ಮೇ 31: ವಿದ್ವಾಂಸ ಎಚ್.ಎಸ್.ವೇಣುಗೋಪಾಲ್ ಅವರ ನೇತೃತ್ವದ ಸಂಗೀತ ವಿದ್ಯಾಲಯ ಗೋಕುಲಂ ಜೂನ್ 4 ಹಾಗೂ 5ರಂದು "ಕಲಾರ್ಣವ 2016" ಸಂಗೀತ ಹಬ್ಬವನ್ನು ಪ್ರಸ್ತುತಪಡಿಸುತ್ತಿದೆ.

ಗೋಕುಲಂ 2007ರಿಂದ ಕಲಾರ್ಣವ ಎಂಬ ಒಂದು ದಿನ ಸಂಗೀತ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ಆಯೋಜಿಸುತ್ತಾ ಬಂದಿದೆ. ಗೋಕುಲಂ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕೊಳಲು ವಾದನ, ಲಯತರಂಗ, ಸುಶಿರ ಸಮ್ಮೇಳನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸ್ಥಳ - ದಯಾನಂದ ಸಾಗರ್ ಕಾಲೇಜು, ಬೆಂಗಳೂರು.
ದಿನಾಂಕ : ಜೂನ್ 4 ಹಾಗೂ 5, 2016
ಗೌರವ ಅತಿಥಿ: ಎಸ್ ಪಿ ಬಾಲಸುಬ್ರಮಣ್ಯಂ
ಮುಖ್ಯ ಅತಿಥಿ: ಹರಿಹರನ್

Gokulam ‘Kalaarnava 2016 DSCE Auditorium SPB, Hariharan

"ಗೋಕುಲಮ್ " ಸಂಗೀತ ಶಾಲೆಯು ಕೊಳಲು ವಿದ್ವಾನ್ ಹೆಚ್.ಎಸ್. ವೇಣುಗೋಪಾಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಒಂದು ಸಂಸ್ಥೆಯಾಗಿದ್ದು, ಶಾಸ್ತ್ರೀಯ ಸಂಗೀತವನ್ನು ವಿಶ್ರುತಗೊಳಿಸುವುದಕ್ಕಾಗಿ ಶ್ರಮಿಸುತ್ತಿದೆ. ಇಪ್ಪತ್ತು ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಸಂಸ್ಥೆಯು ನಿರಂತರವಾಗಿ ಶ್ರೇಷ್ಥ ಸಂಗೀತಗಾರರನ್ನು, ಅಂತೆಯೇ ಉದಯೋನ್ಮುಖ ಕಲಾವಿದರನ್ನೂ ಜಗತ್ತಿಗೆ ಪರಿಚಯಿಸುತ್ತ ಬಂದಿದೆ.

ಗೋಕುಲಮ್ ನ ಇತಿಹಾಸದಲ್ಲಿ ಒಂದು ಪ್ರಮುಖ ಹೆಜ್ಜೆ "ಕಲಾರ್ಣವ". 2007ರಲ್ಲಿ ಪ್ರಥಮಬಾರಿಗೆ ಆಯೋಜಿಸಲಾದ ಲಲಿತಕಲೆಗಳ ಒಂದು ದಿನದ ಈ ಹಬ್ಬಕ್ಕೆ ಅಪಾರ ಜನ ಮನ್ನಣೆ ದೊರೆಯಿತು. ಸಹೃದಯರ ಆಶಯದಂತೆ ಪ್ರತಿ ವರ್ಷ ಜೂನ್ ನ ಮೊದಲ ಭಾನುವಾರ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

-
-
-
-
-
ಎಸ್ಪಿಬಿ, ಹರಿಹರನ್ ಸಮ್ಮುಖದಲ್ಲಿ ಗಾನ ಕೋಗಿಲೆಗಳ ಕಲರವ

ಎಸ್ಪಿಬಿ, ಹರಿಹರನ್ ಸಮ್ಮುಖದಲ್ಲಿ ಗಾನ ಕೋಗಿಲೆಗಳ ಕಲರವ

ಈ ಸಂದರ್ಭದಲ್ಲಿ 'ವಿದ್ಯಾರ್ಣವ' ಮತ್ತು 'ಕಲಾರ್ಣವ' ಎಂಬ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಶ್ರೇಷ್ಠ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಇದರ ಉದ್ದೇಶ.

"ವಿದ್ಯಾರ್ಣವ" ತಮ್ಮ ತಮ್ಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವುದರ ಮೂಲಕ ಯುವಜನತೆಯನ್ನು ಪ್ರೇರೇಪಿಸಿದ ಹಿರಿಯ ವ್ಯಕ್ತಿತ್ವಗಳಿಗೆ ಧನ್ಯವಾದ ರೂಪದಲ್ಲಿ ಕೊಡಮಾಡುವ ಪ್ರಶಸ್ತಿ ಇದು. 250ಕ್ಕೂ ಅಧಿಕ ಹೆಸರಾಂತ ಕಲಾವಿದರು, ಗಾಯಕ, ಗಾಯಕಿಯರು ಪ್ರದರ್ಶನ ನೀಡಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gokulam takes pride in presenting ‘Kalaarnava - 2015’ on the 4 and 5th of June, 2016, at Dayananda Sagar College of Engineering Auditorium, Bengaluru. Gokulam is a humble school of music, led by senior flautist Vidwan H S Venugopal, dedicated to sharing and propagating classical music
Please Wait while comments are loading...