ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಲಾರ್ಣವ 2018' : ದಿನಪೂರ್ತಿ ಸಂಗೀತ ಕಲರವಕ್ಕೆ ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 01: ಈ ಬಾರಿ 'ಕಲಾರ್ಣವ 2018' ಕಾರ್ಯಕ್ರಮವನ್ನು ಜೂನ್ 10ರಂದು ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಜೂನ್ 10ರ ಭಾನುವಾರ ಬೆಳಗ್ಗೆ 9.30ರಿಂದ ರಾತ್ರಿ 9.30ರ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಈ ಬಾರಿ ಲೂಯಿಜ್ ಬ್ಯಾಂಕ್ಸ್ ಅವರಿಗೆ 'ವಿದ್ಯಾರ್ಣವ' ಪ್ರಶಸ್ತಿ ಗೌರವ ಹಾಗೂ ಕಿರಣ್ ಸುಬ್ರಮಣ್ಯಂ ಮತ್ತು ಶ್ರೀಮತಿ ಸಂಧ್ಯಾ ಕಿರಾಣ್ ಮತ್ತು ನಂದೀಶ್ ಎಸ್ ಮರಿಯಪ್ಪ ಅವರಿಗೆ 'ಕಲಾವತಂಸ' ಗೌರವ ಮನ್ನಣೆ ನೀಡಲಾಗುತ್ತದೆ.

ಕಾರ್ಯಕ್ರಮ ವಿವರ:
ದಿನಾಂಕ : ಜೂನ್ 10 (ಭಾನುವಾರ)
ಸ್ಥಳ: ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜ್ ಆಡಿಟೋರಿಯಂ
ಮುಖ್ಯ ಅತಿಥಿ : ಆರ್ ಕುಮರೇಶ್ ಹಾಗೂ ಶತಾವಧಾನಿ ಡಾ. ಆರ್ ಗಣೇಶ್
ಸಮಯ: ಬೆಳಗ್ಗೆ 9.30 ರಿಂದ ರಾತ್ರಿ 9.30
ನಿರೂಪಣೆ: ರಾಘವೇಂದ್ರ ಹೆಗ್ಡೆ
ಪರಿಕಲ್ಪನೆ ಹಾಗೂ ನಿರ್ದೇಶನ : ವಿದ್ವಾನ್ ಎಚ್ ಎಸ್ ವೇಣುಗೋಪಾಲ್

Gokulam 2018 : Kalaarnava - 2018 DSCE Auditorium

9.30 ರಿಂದ 10.30
ಗೋಕುಲಂ ಕೊಳಲು ವಾದನ:
ಡಿ.ವಿ ಪ್ರಸನ್ನಕುಮಾರ್, ವಿನಯ್ ನಾಗರಾಜನ್ ಎಂ, ಸಾಯಿ ವಂಶಿ, ಉತ್ತಮ್ ಶಾಂತರಾಜು

10.30 ರಿಂದ 11.15
ಸಮೂಹ ಸಂಗೀತ
ಸಾತ್ವಿಕ್ ಚಕ್ರವರ್ತಿ, ವಿನ್ಯಾಸ್ ಶ್ರೀಧರ್, ಸಮೀರ್ ಹವಾಲ್ದರ್, ಪ್ರಶಾಂತ್ ರಾವ್

11.30 ರಿಂದ 12.00
ಕಾಸ್ಮಿಕ್ ಸ್ಪ್ಲಾಶ್ : ವಿನಯ್ ಹೆಗ್ಡೆ

12.15 ರಿಂದ 1.30
ಧಾಟು ಮಾತುಗಳ ಹುಟ್ಟುಹಬ್ಬ
ಶತಾವಧಾನಿ ಡಾ. ಆರ್ ಗಣೇಶ್, ಪ್ರವೀಣ್ ಡಿ ರಾ, ಸುಪ್ರೀಯಾ ರಘುನಂದನ್, ಗುರುಮೂರ್ತಿ ವೈದ್ಯ, ಅಶ್ವಿನಿ ಕೌಶಿಕ್

1.30 ರಿಂದ 2.30 -ಊಟ

2.30 ರಿಂದ 3.30
ರಸಿಕ ಡ್ಯಾನ್ಸ್ ಕಾರ್ಯಕ್ರಮ
ಕಿರಣ್ ಸುಬ್ರಮಣ್ಯಂ(ನಟುವಂಗಂ), ರಘುರಾಮ್ (ಗಾಯನ), ರಮ್ಯಾ ಜಾನಕಿರಾಮನ್ (ನಟುವಂಗಂ ನೆರವು), ವೇದಾಕೃಷ್ಣನ್ ವಿ (ಮೃದಂಗಂ), ಪ್ರದೇಶ್ ಆಚಾರ್ (ಪಿಟೀಲು), ಶುಭ ಸಂತೋಷ್ (ವೀಣಾ), ಕೃಷ್ಣ ಪ್ರಸಾದ್ (ಕೊಳಲು)

Gokulam 2018 : Kalaarnava - 2018 DSCE Auditorium

3.45 ರಿಂದ 4.15
ಬೊಂಬೆಯಾಟ, ಅನುಪಮಾ ಹೊಸಕೆರೆ ಮತ್ತು ಟೀಂ ಧಾಟು

4.30 ರಿಂದ 5.45
ಹಿಂದೂಸ್ತಾನಿ ಶಾಸ್ತ್ರೀಯ ಗಾಯನ
ಮೋಮಿನ್ ಖಾನ್ (ಸಾರಂಗಿ), ರಾಜೇಂದ್ರ ನಾಕೋಡ್ (ತಬಲಾ)

6 ರಿಂದ 7.15- ಪ್ರಶಸ್ತಿ ಪ್ರದಾನ
ವಿದ್ಯಾರ್ಣವ: ಮಿ ಲೂಯಿಜ್ ಬ್ಯಾಂಕ್ಸ್ (ಜಾಜ್ ವಾದಕರು ಹಾಗೂ ಸಂಯೋಜಕರು)

ಕಲಾವತಂಸ:
ಕಿರಣ್ ಸುಬ್ರಮಣ್ಯಂ ಹಾಗೂ ಶ್ರೀಮತಿ ಸಂಧ್ಯಾ ಕಿರಣ್(ಭರತನಾಟ್ಯ ಗುರುಗಳು ಹಾಗೂ ರಸಿಕ ಕಲಾ ಸಂಸ್ಥೆ ಸ್ಥಾಪಕರು)
ನಂದೀಶ್ ಎಸ್ ಮರಿಯಪ್ಪ(ಕಲಾ ಪ್ರೋತ್ಸಾಹಕರು, ಬೆಂಗಳೂರು ಗಣೇಶ ಉತ್ಸವದ ಪಾಲಕರು)

7.30 ರಿಂದ 7.45
ಶ್ಯಾಡೋ ಪ್ಲೇ : ಪ್ರಹ್ಲಾದ್ ಆಚಾರ್

7.45 ರಿಂದ 9.30
ಜಾಜ್ ಸಂಯೋಜನೆ
ಮಿ. ಲೂಯಿಜ್ ಬ್ಯಾಂಕ್ಸ್, ಮಿ ಗಿನೋ ಬ್ಯಾಂಕ್ಸ್, ಮಿ ಶೆಲ್ಡನ್ ಡಿ ಸಿಲ್ವಾ, ವಾರಿಜಾಶ್ರೀ

ಕಲಾರ್ಣವ : 'ಗೋಕುಲಮ್' ನ ಇತಿಹಾಸದಲ್ಲಿ ಒಂದು ಪ್ರಮುಖ ಹೆಜ್ಜೆ 'ಕಲಾರ್ಣವ'. ಸಾಗರದಂಥ ಕಲೆ ಎಂಬರ್ಥ ಇದಕ್ಕಿದೆ. 2007ರಲ್ಲಿ ಪ್ರಥಮಬಾರಿಗೆ ಆಯೋಜಿಸಲಾದ ಲಲಿತಕಲೆಗಳ ಒಂದು ದಿನದ ಈ ಹಬ್ಬಕ್ಕೆ ಅಪಾರ ಜನ ಮನ್ನಣೆ ದೊರೆಯಿತು.

ಕಳೆದ 11 ವರ್ಷಗಳಿಂದ ಕಲೆ, ಸಂಗೀತವನ್ನು ತನ್ನ ಉಸಿರಾಗಿ ಕಾಣುತ್ತಾ ಬಂದಿರುವ ವಿದ್ವಾನ್ ಎಚ್ ಎಸ್ ವೇಣುಗೋಪಾಲ್ ಅವರ ನೇತೃತ್ವದ ಗೋಕುಲಂ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ದೇಶಕ್ಕೆ ಅನೇಕ ಪ್ರತಿಭೆಗಳನ್ನು ನೀಡುತ್ತಾ ಬಂದಿದೆ.

'ಗೋಕುಲಂ' 2007 ರಿಂದ 'ಕಲಾರ್ಣವ' ಎಂಬ ಒಂದು ದಿನ ಸಂಗೀತ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ಆಯೋಜಿಸುತ್ತಾ ಬಂದಿದೆ.

English summary
Gokulam takes pride in presenting ‘Kalaarnava - 2018’ on the 10th of June, Sunday at Dayananda Sagar College of Engineering Auditorium, Bengaluru. Gokulam is a humble school of music, led by senior flautist Vidwan H S Venugopal, dedicated to sharing and propagating classical music.Guest of Honour: Shathaavadhaani Dr R Ganesh and R Kumaresh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X