ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#GOIStopHindiImposition: 'ಹಿಂದಿ ದಿವಸ'ದಂದು ಟ್ವಿಟ್ಟಿಗರ ಆಕ್ರೋಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: 'ಹಿಂದಿ ಹೇರಿಕೆ ನಿಲ್ಲಿಸಿ...' ಎಂಬ ಕೂಗು ಮತ್ತೊಮ್ಮೆ ಟ್ವಿಟ್ಟರ್ ನಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಇಂದು ದೇಶದೆಲ್ಲೆಡೆ ಆಚರಿಸಲಾಗುತ್ತಿರುವ 'ಹಿಂದಿ ದಿವಸ್!'

1949 ರ ಸೆ.14 ರಂದು ಹಿಂದಿಯನ್ನು ಭಾರತದ ಅಧಿಕೃತ ಭಾಷೆ ಎಂದು ಘೋಷಿಸಿದ್ದರಿಂದ ಪ್ರತಿವರ್ಷ ಆ ದಿನವನ್ನು 'ಹಿಂದಿ ದಿವಸ್' ಎಂದು ಆಚರಿಸಲಾಗುತ್ತಿದೆ.

ವೈರಲ್ ಆಯ್ತು 'ನಿಜವಾದ ಕನ್ನಡಿಗ' ಭಾಗ -2 ವಿಡಿಯೋವೈರಲ್ ಆಯ್ತು 'ನಿಜವಾದ ಕನ್ನಡಿಗ' ಭಾಗ -2 ವಿಡಿಯೋ

ಆದರೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಗುರುತಿಸಿ, ಉಳಿದೆಲ್ಲ ಪ್ರಾದೇಶಿಕ ಭಾಷೆಗಳನ್ನೂ ಕೇಂದ್ರ ಸರ್ಕಾರ ನಿರ್ಲಕ್ಷ್ಯಿಸುತ್ತಿದೆ ಎಂಬ ಮಾತು ಎಂದಿನಿಂದಲೋ ಕೇಳಿಬರುತ್ತಿದೆ. ಭಾರತದಲ್ಲಿರುವ ಎಲ್ಲಾ 22 ಪ್ರಮುಖ ಪ್ರಾದೇಶಿಕ ಭಾಷೆಗಳೂ ರಾಷ್ಟ್ರ ಭಾಷೆಗಳೇ. ಆದರೂ ಹಿಂದಿಗ್ಯಾಕೆ ಇಂಥ ಉನ್ನತ ಸ್ಥಾನ ಎಂಬುದು ಹಲವರ ಪ್ರಶ್ನೆ.

ಹಿಂದಿ ಹೇರಿಕೆ ಮೆಟ್ಟಿ ನಿಲ್ಲಲು ನಾಲಕ್ಕು ಸೂತ್ರಗಳು!ಹಿಂದಿ ಹೇರಿಕೆ ಮೆಟ್ಟಿ ನಿಲ್ಲಲು ನಾಲಕ್ಕು ಸೂತ್ರಗಳು!

ಆದ್ದರಿಂದಲೇ, ಅತ್ತ ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆಗೆ ಸಿದ್ಧವಾಗಿದ್ದರೆ, ಇತ್ತ ಟ್ವಿಟ್ಟಿಗರು #GOIStopHindiImposition ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟ್ಟರ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಇಂದು (ಸೆ.14) ಬೆಳಿಗ್ಗೆ 9 ರಿಂದ ಅಭಿಯಾನ ಆರಂಭವಾಗಿದ್ದು, ಹಿಂದಿ ಹೇರಿಕೆಯನ್ನು ವಿರೋಧಿಸುವವರು, ಪ್ರಾದೇಶಿಕ ಭಾಷೆಗಳಿಗೂ ಮಹತ್ವ ಸಿಗಬೇಕು ಎಂಬುದನ್ನು ಒಪ್ಪುವವರು ಈ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡಿ ಎಂದು ಬನವಾಸಿ ಬಳಗ ಕೋರಿದೆ.

ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?

ಭಾಷಾ ಅಸಮಾನತೆ ಮತ್ತು ಹಿಂದಿ ಹೇರಿಕೆ ವಿರುದ್ಧ ದನಿ ಎತ್ತುವುದು ಈ ಟ್ವಿಟ್ಟರ್ ಚಳವಳಿಯ ಉದ್ದೇಶ.

ಕನ್ನಡ ನೆಲದಲ್ಲೇ ಕನ್ನಡದ ಬಗ್ಗೆ ತಾತ್ಸಾರ

ಭಾರತದ ಎಲ್ಲ ಕಡೆಯಲ್ಲಿಯೂ ಹಿಂದಿಯಲ್ಲಿ ಸೇವೆ ಸಿಗುತ್ತದೆ. ಆದರೆ ನಾವು ಕನ್ನಡಿಗರು ನಮ್ಮ ಕನ್ನಡ ನಾಡಲ್ಲೇ ಕನ್ನಡದಲ್ಲಿ ಸೇವೆ ಪಡೆಯುತ್ತಿಲ್ಲ ಎಂದು ಚೇತನ್ ಜೀರಲ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಭಾರತ ಭಾಷಾ ದಿವಸ ಆರಂಭಿಸಿ

ಹಿಂದಿ ದಿವಸನ್ನು ನಿಲ್ಲಿಸಿ, ಭಾರತೀಯ ಭಾಷಾ ದಿವಸನ್ನು ಪ್ರತಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲೂ ಆಚರಿಸುವಂತೆ ಮಾಡಬೇಕು ಎಂದು ವಸಂತ ಶೆಟ್ಟಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಯಾಕಾಗಿ ಆಚರಿಸಬೇಕು?

ಭಾರತ ಸರ್ಕಾರದ ಹಿಂದಿಯೇತರ ರಾಜ್ಯಗಳು ಯಾಕಾಗಿ ಹಿಂದಿ ದಿವಸವನ್ನು ಆಚರಿಸಬೇಕೆಂಬ ಬಗ್ಗೆ ಯಾವುದಾದರೂ ಒಂದು ಸಮರ್ಥನೀಯ ಕಾರಣವಿದೆಯೇ ಎಂದು ಮಲ್ಲಿಕಾರ್ಜುನ್ ಬಿ ಎನ್ನುವವರು ಪ್ರಶ್ನಿಸಿದ್ದಾರೆ.

ಭಾಷಾ ಹಕ್ಕಿಗೆ ವಿರುದ್ಧವಾದುದು

ಭಾರತೀಯರ ಮೇಲೆ ಏಕರೂಪದ ಭಾಷಾ ಬಳಕೆಯನ್ನು ಒತ್ತಾಯಪೂರ್ವಕವಾಗಿ ಹೇರುವುದು ನಮ್ಮ ಭಾಷಾ ಹಕ್ಕಿಗೆ ವಿರುದ್ಧವಾದುದು ಎಂದು ಹರಿಪ್ರಸಾದ್ ಹೊಳ್ಳ ಎನ್ನುವವರು ಟ್ವೀಟ್ ಮಾಡಿದ್ದಾರೆ.

ನಾವು ತೆರಿಗೆ ಕಟ್ಟೋದು ಹಿಂದಿ ಬೆಳೆಸುವುದಕ್ಕಲ್ಲ!

ನಾವು ನಮ್ಮ ಮಾತೃಭಾಷೆಯನ್ನು ಮೂಲೆಗುಂಪು ಮಾಡಿ, ಹಿಂದಿಯನ್ನು ಬೆಳೆಸುವುದಕ್ಕಲ್ಲ ತೆರಿಗೆ ಕಟ್ಟುತ್ತಿರುವುದು. ಈ ಭಾಷಾ ತಾರತಮ್ಯವನ್ನು ಮೊದಲು ನಿಲ್ಲಿಸಿ. ನಮ್ಮ ಮಾತೃಭಾಷೆಯನ್ನು ಬೆಳೆಸಿ ಎಂದು ಸೃಜನ್ ದೇವ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
Hindi Divas is celebrated on 14 September because on this day in 1949, the Constituent Assembly of India had adopted Hindi written in Devanagari script as the official language of the Republic of India. But many Kannadigas in twitter are protesting against imposition of Hindi language on regional linguistic community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X