ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಯಂಡಹಳ್ಳಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಭಾರಿ ಅಗ್ನಿ ಅವಗಢ

|
Google Oneindia Kannada News

ಬೆಂಗಳೂರು, ಜನವರಿ 21: ನಾಯಂಡಹಳ್ಳಿ ಸಮೀಪದ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಗಢ ಸಂಭವಿಸಿದ್ದು, ಆಸುಪಾಸಿನಲ್ಲಿರುವ ಸುಮಾರು 20ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿದೆ.

ಭಾನುವಾರ ರಾತ್ರಿ ಸುಮಾರು 8.30ರ ವೇಳೆಗೆ ಅವಗಢ ಸಂಭವಿಸಿದೆ ಎಂದು ತಿಳಿದುಬಂದಿದೆ. ತಕ್ಷಣ ಅಗನಿಶಾಮಕ ದಳ ಸಿಬ್ಬಂದಿಗಳು ತೆರಳಿದ್ದು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಆದರೆ, ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿರುವ ಕಾರಣ ಬೆಂಕಿ ನಂದಿಸುವ ಕೆಲಸ ಕಷ್ಟಸಾಧ್ಯವಾಗಿದೆ. ಪ್ಲಾಸ್ಟಿಕ್​ನಿಂದಾಗಿ ಎಷ್ಟು ನೀರು ಹರಿಸಿದರೂ ಬೆಂಕಿ ನಂದುತ್ತಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕೂಡ ಗೊಂದಲಕ್ಕೊಳಗಾಗಿದ್ದಾರೆ.

Godown of plastic items gutted in fire

ಬೆಂಕಿ ತಗುಲಿದ ಸುತ್ತಮುತ್ತಲ ಪ್ರದೇಶದ ಗುಡಿಸಲಿನಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ, ಬೆಂಕಿ ತಗುಲಲು ಕಾರಣ ಏನೆಂಬುದು ಇದುವರೆಗೂ ತಿಳಿದುಬಂದಿಲ್ಲ, ಬೆಂಕಿ ತಗುಲಿದ ಪ್ಲಾಸ್ಟಿಕ್ ಗೋದಾಮಿನ ಮಾಲೀಕರು ಕೂಡ ಯಾರೆಂಬುದು ಗೊತ್ತಾಗಿಲ್ಲ, ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

English summary
A warehouse of plastic items in western Bengaluru was gutted in a major fire on Sunday night. Firefighters believe there was no loss of life or limb as the warehouse was locked from the outside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X