ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಗೋ ಏರ್ ವಿಮಾನ ತುರ್ತು ಲ್ಯಾಂಡಿಂಗ್

By Gururaj
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02 : ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಗೋ ಏರ್ ವಿಮಾನ ತುರ್ತು ಲ್ಯಾಂಡ್ ಆಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಶನಿವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಗೋ ಏರ್ ವಿಮಾನ ಜಿ8-283 ಬಿಎಲ್‌ಆರ್-ಪಿಎನ್‌ಕ್ಯೂ ಟೇಕ್ ಆಫ್‌ ಆದ ಕೆಲವೇ ಕ್ಷಣದಲ್ಲಿ ತುರ್ತು ಲ್ಯಾಂಡ್ ಆಗಿದೆ.

ಮೋಜಿಗಾಗಿ ಹುಸಿ ಬಾಂಬ್ ಕರೆ ಮಾಡುತ್ತಿದ್ದವನ ಬಂಧನಮೋಜಿಗಾಗಿ ಹುಸಿ ಬಾಂಬ್ ಕರೆ ಮಾಡುತ್ತಿದ್ದವನ ಬಂಧನ

ವಿಮಾನ ಹಾರಾಟ ನಡೆಸುವಾಗ ಇಂಜಿನ್‌ -1ರಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇಂಜಿನ್‌ನ ಆಯಿಲ್ ಚಿಪ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಅಲರಾಂ ಬಡಿದುಕೊಂಡಿದೆ. ತಕ್ಷಣದ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿದ ಪೈಲೆಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ: ಸಂದರ್ಶನಕ್ಕೆ ಹಾಜರಾಗಿಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ: ಸಂದರ್ಶನಕ್ಕೆ ಹಾಜರಾಗಿ

GoAir plane emergency landing at the Bengaluru airport

ವಿಮಾನ ಹಾರಾಟ ನಡೆಸುವಾಗಲೇ 1 ಇಂಜಿನ್‌ನನ್ನು ಆಫ್ ಮಾಡಲಾಗಿದ್ದು ಬಳಿಕ ಲ್ಯಾಂಡ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆಯನ್ನು ಮಾಡಿಕೊಡಲಾಯಿತು.

ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ

ಗೋ ಏರ್ ಸಂಸ್ಥೆ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. 'ಜಿ8-283 ಬಿಎಲ್‌ಆರ್-ಪಿಎನ್‌ಕ್ಯೂ ವಿಮಾನವನ್ನು ತುರ್ತು ಕಾರಣಗಳಿಂದಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಪ್ರಯಾಣಿಕರಿಗೆ ಬೇರೆ ವಿಮಾನವನ್ನು ಒದಗಿಸಲಾಯಿತು. ಪ್ರಯಾಣಿಕರ ಸುರಕ್ಷತೆ ನಮ್ಮಆದ್ಯತೆಯಾಗಿದೆ' ಎಂದು ಹೇಳಿದೆ.

English summary
A GoAir plane Flight G8-283 BLR - PNQ suffered a technical glitch flying from Bengaluru to Pune on Saturday had to make an emergency landing at the Bengaluru airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X