ಪೋಷಕರನ್ನು ಹೆದರಿಸಲು ಹೋಗಿ ಪ್ರಾಣತೆತ್ತ ವಿದ್ಯಾರ್ಥಿನಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 12: ಬ್ಯಾಟರಾಯನಪುರ ಪೊಲೀಸ್ ಠಾಣಾವ್ಯಾಪ್ತಿ ಬಾಪೂಜಿನಗರದಲ್ಲಿ ಪೋಷಕರನ್ನು ಹೆದರಿಸಲು ನೇಣು ಬಿಗಿದುಕೊಳ್ಳುವ ನಾಟಕವಾಡಿದ ವಿದ್ಯಾರ್ಥಿನಿ ಪ್ರಾಣವನ್ನು ಕಳೆಕೊಂಡ ಘಟನೆ ಜರುಗಿದೆ.

ಬ್ಯಾಟರಾಯನಪುರದ ಬಾಪೂಜಿನಗರದ ಕೀರ್ತನಾ ಮೃತ ದುರ್ದೈವಿ. ಖಾಸಗೀ ಕಾಲೇಜಿನ ಪಿಯುಸಿ ಓದುತ್ತಿದ್ದ ಕೀರ್ತನಾ ಪ್ರತಿದಿನ ಕಾಲೇಜು 4:30ಕ್ಕೆ ಮುಗಿದರೂ ಆಕೆ ಮನೆಗೆ ಬರುತ್ತಿದ್ದದ್ದು ಮಾತ್ರ ರಾತ್ರಿ 8:30ಕ್ಕೆ ಹೀಗಾಗಿ ಆತಂಕಗೊಂಡ ತಂದೆ ರಮೇಶ್ ಪತ್ನಿಗೆ ತಿಳಿಸಿದ್ದಾರೆ. ಪತ್ನಿ ನೀವೆ ಅವಳಿಗೆ ಹೇಳಿ ಎಂದಿದ್ದಾರೆ. ಬುಧವಾರ ಸಂಜೆ ಕೀರ್ತನಾಗೆ ಕರೆ ಮಾಡಿದ ತಂದೆ ಮನೆಗೆ ಲೇಟಾಗಿ ಬರುವ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ. ಕೀರ್ತನಾ ಆ ವೇಳೆ ಫೋನ್ ಕಟ್ ಮಾಡಿದ್ದು, ಮನೆಗೆ ಎಂದಿನಂತೆ ಆಗಮಿಸಿದ್ದಾಳೆ.[ಮ್ಯೂಸಿಕ್ ಚಾನೆಲ್ ನಿರೂಪಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ]

Go to the parents to teach wit, PU student who lost their lives

ಮನೆಗೆ ಬಂದ ಮಗಳಿಗೆ 'ರಾತ್ರಿ ಇಷ್ಟೋತ್ತಿಗೆ ಬಂದರೆ ನೀನು ಓದಿಕೊಳ್ಳುವುದು ಯಾವಾಗ, ಮಲಗುವುದು ಯಾವಾಗ ಎಂದು ತಂದೆ ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ಕೀರ್ತನಾ ಎದ್ದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಪೋಷಕರು ಆಕೆಯನ್ನು ಏನು ಮಾಡಿಕೊಳ್ಳುತ್ತಿದ್ದಾಳೋ ಎಂದು ತಡೆಯಲು ಮುಂದಾಗಿದ್ದಾರೆ. ಆಕೆ ನೇಣುಹಾಕಿಕೊಳ್ಳುವ ಹಾಗೆ ನಾಟಕ ಮಾಡಿದ್ದು ತಂದೆ ಆಕೆಯನ್ನುತಡೆಯುವ ವೇಳೆಗಾಗಲೇ ಆಕೆ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದಾಳೆ.[ಮರಕ್ಕೆ ನೇಣು ಬಿಗಿದುಕೊಂಡು ಪ್ರಿಯಕರನೊಂದಿಗೆ ವಿವಾಹಿತೆ ಆತ್ಮಹತ್ಯೆ]

ಇನ್ನು ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓದುವ ಮಕ್ಕಳಿಗೆ ಪೋಷಕರು ಏನೂ ಹೇಳಬಾರದೆಂದು ಅಪೇಕ್ಷಿಸುವ ಪೀಳಿಗೆ ಇಂದು ನಿರ್ಮಾಣವಾಗಿರುವುದು ಶೋಚನೀಯ ಎಂಬುದು ಚಿಂತಕರ ಮಾತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Go to the parents to teach wit, A student who lost their lives. PUC Student Keerthana committed to hanging suicide in Bapurjinagar Byatarayanapura in bengaluru.
Please Wait while comments are loading...