ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋರಕ್ಷಣೆಗಾಗಿ ಇಂದು ಬೆಂಗಳೂರಿನಲ್ಲಿ ಬಿಜೆಪಿ ಯಜ್ಞ

|
Google Oneindia Kannada News

ಬೆಂಗಳೂರು, ಜನವರಿ 31: ಭಾರತೀಯರಲ್ಲಿ ಗೋವಿನಿಂದಾಗುವ ವಿವಿಧ ಉಪಯೋಗಗಳ ಕುರಿತು ಅರಿವು ಮೂಡಿಸುವ ಮತ್ತು ಗೋ ರಕ್ಷಣೆಯ ಕುರಿತು ಕಾಳಜಿ ಮೂಡಿಸುವ ಸಲುವಾಗಿ ರಾಜ್ಯ ಬಿಜೆಪಿ ಗೋರಕ್ಷಾ ಯಜ್ಞವನ್ನು ಹಮ್ಮಿಕೊಂಡಿದೆ. ಜೆ.ಪಿ.ನಗರದ ಪುಟ್ಟೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಸತ್ಯಗಣಪತಿ ದೇವಸ್ಥಾನ ಮೈದಾನದಲ್ಲಿ ಯಜ್ಞ ನಡೆಯಲಿದೆ.

ಫೆ.2 ರಂದು ಮಧ್ಯಾಹ್ನ 2 ರಿಂದ ಫೆ.3ರ ಮಧ್ಯಾಹ್ನ 2 ರವರೆಗೆ ಅಂದರೆ 24 ಗಂಟೆಗಳ ಕಾಲ ಈ ಯಜ್ಞ ನಡೆಯಲಿದೆ. ಈ ಯಜ್ಞದಲ್ಲಿ ಗೋವಿನ ವಿವಿಧ ಉಪಯೋಗ ಮತ್ತು ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲಾಗುತ್ತದೆ. ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವ ಉದ್ದೇಶಕ್ಕಾಗಿ ಜಾನುವಾರುಗಳನ್ನು ರಕ್ಷಿಸುವುದು ಎಷ್ಟು ಅನಿವಾರ್ಯ ಎಂಬುದನ್ನೂ ಈ ಮೂಲಕ ತಿಳಿಸಲಾಗುತ್ತದೆ ಎಂದು ಬಿಜೆಪಿಯ ಗೋ ಸಂರಕ್ಷಣಾ ಘಟಕದ ಸಂಚಾಲಕ ಸಿದ್ಧಾರ್ಥ ಗೋಯೆಂಕಾ ತಿಳಿಸಿದ್ದಾರೆ.

ಗೋಹತ್ಯೆ ನಿಷೇಧ: ಸಂತರು ಸೇರಿ 50ಕ್ಕೂ ಹೆಚ್ಚು ಮಂದಿ ರಕ್ತದಲ್ಲಿ ಪತ್ರಗೋಹತ್ಯೆ ನಿಷೇಧ: ಸಂತರು ಸೇರಿ 50ಕ್ಕೂ ಹೆಚ್ಚು ಮಂದಿ ರಕ್ತದಲ್ಲಿ ಪತ್ರ

ಯಜ್ಞದ ಜೊತೆ ಅಖಂಡ ಭಾರತ ಎಂಬ ಕಾರ್ಯಕ್ರಮವೂ ನಡೆಯಲಿದೆ. ಮಾತ್ರವಲ್ಲ ನೃತ್ಯದ ಮೂಲಕ ರಾಮ-ಸೀತೆಯರ ಕಲ್ಯಾಣ ಮಹೋತ್ಸವವನ್ನೂ ತೋರಿಸಲಾಗುತ್ತದೆ.

Go Raksha Yagna from BJP in Bengaluru

ಯಜ್ಞದ ಸಮಾರೋಪ ಕಾರ್ಯಕ್ರಮ ಫೆ.3 ರಂದು ನಡೆಯಲಿದ್ದು, ಆ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

English summary
To create awareness to people on multi dimensional importance of the cow and to protect cattle population in India, Karnataka BJP organises a 24 hour Go Raksha Aashtayama Yagna on Feb 2nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X