ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಕಾಮಗಾರಿ: ರಾಜ್ಯ ಚುನಾವಣಾ ಆಯೋಗಕ್ಕೆ ದೂರು

|
Google Oneindia Kannada News

ಬೆಂಗಳೂರು, ಮಾರ್ಚ್ 06: ಒಂದು ರಸ್ತೆ ಇರುವಾಗ ಮತ್ತೊಂದು ರಸ್ತೆ ನಿರ್ಮಿಸಲು ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ವಿರೋಧಿಸಿ ಜಿಕೆವಿಕೆ ಬಡಾವಣೆಯ ನಿವಾಸಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಕೇವಲ ಚುನಾವಣೆ ದೃಷ್ಟಿಯಿಂದ ಜಿಕೆವಿಕೆ ಬಡಾವಣೆಗೆ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಜಿಕೆವಿಕೆ ಬಡಾವಣೆಯ ನಿವಾಸಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಹೊಸ ರಸ್ತೆ ನಿರ್ಮಿಸಲು ಜಕ್ಕೂರು ವಾಯುನೆಲೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಅಲ್ಲದೆ, ತೆರಿಗೆದಾರರ ಕೋಟ್ಯಂತರ ರೂಪಾಯಿ ವ್ಯರ್ಥವಾಗಲಿದೆ. ಇದರ ಬದಲಿಗೆ, ಪ್ಲಾಂಟೇಷನ್ ರಸ್ತೆಯನ್ನು ವಿಸ್ತರಣೆ ಮಾಡಬೇಕು. ಈ ರಸ್ತೆಯು ಶೋಭಾ ಅಲ್ಟಿಮಾ ಕ್ಯಾಂಪಸ್ , ಐಟಿಸಿ ಗಾರ್ಡನ್‌ ಎನ್‌ಕ್ಲೇವ್‌ ಬಳಿ ಕೊನೆಗೊಳ್ಳುತ್ತದೆ. ಎನ್‌ಕ್ಲೇವ್ ಪಕ್ಕದಲ್ಲೇ ಜಿಕೆವಿಕೆ ಬಡಾವಣೆ ಇದೆ. ಇಲ್ಲಿ ಖಾಲಿ ನಿವೇಶನವಿದ್ದು, ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ರಸ್ತೆಯನ್ನು ಮತ್ತಷ್ಟು ವಿಸ್ತರಿಸಬಹುದು ಎಂದು ಸಲಹೆ ನೀಡಿದ್ದಾರೆ.

GKVK lay out residents write to election commission

ಬಳ್ಳಾರಿ ರಸ್ತೆಯಿಂದ ಜಕ್ಕೂರು ಫ್ಲೈಯಿಂಗ್‌ ಶಾಲೆಯ ಮೂಲಕ ಜಿಕೆವಿಕೆ ಬಡಾವಣೆಗೆ ರಸ್ತೆ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಜಕ್ಕೂರು ಪ್ಲಾಂಟೇಷನ್ ರಸ್ತೆ ಈ ಬಡಾವಣೆಯನ್ನು ಸಂಪರ್ಕಿಸುತ್ತದೆ. ಒಂದು ರಸ್ತೆ ಇರುವಾಗ ಮತ್ತೊಂದು ರಸ್ತೆ ನಿರ್ಮಿಸುವ ಔಚಿತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.

English summary
Residents of GKVK layout written a letter to state election commission chief Sanjeev kumar alleging that the BBMP is constructing a road from Ballary road GKVK layout via Jakkur Flying school which is unnecessary as there is already had good connectivity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X