ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಣಿ ಕಾಲೇಜಿನಲ್ಲಿ ಆರ್‌ಟಿಐ ಕಾರ್ಯಕರ್ತನಿಂದ ಕಿರುಕುಳ: ಆರೋಪ

By Nayana
|
Google Oneindia Kannada News

ಬೆಂಗಳೂರು, ಜು.17: ನಗರದ ಮಹಾರಾಣಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಅಕ್ರಮವಾಗಿ ನೆಲೆಯೂರಿ, ಸ್ವಂತ ಮನೆಯನ್ನು ಕಟ್ಟಿಕೊಂಡಿರುವ ಆರ್‌ಟಿಐ ಕಾರ್ಯಕರ್ತ ಸೋಗಿನ ನವೀನ್‌ಕುಮಾರ್‌ನನ್ನು ತಕ್ಷಣ ತೆರವುಗೊಳಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಆಗ್ರಹಿಸಿದ್ದಾರೆ.

ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆರ್‌ಟಿಐ ಕಾರ್ಯಕರ್ತನ ಸೋಗಿನಲ್ಲಿ ಒಬ್ಬಾತ ನಡೆಸುತ್ತಿದ್ದ ದರ್ಬಾರು ಮರೆಯುವ ಮುನ್ನವೇ ನಗರದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಶಿಕ್ಷಣ ಇಲಾಖೆ ಆಯುಕ್ತೆ ಮಂಜುಳಾ ಮತ್ತು ಉಪನ್ಯಾಸಕಿಯರು ನೀಡಿದ್ದ ದೂರಿನ ಆಧಾರದ ಮೇಲೆ ಸೋಮವಾರ ಮಧ್ಯಾಹ್ನ ಮಹಾರಾಣಿ ಕಾಲೇಜಿಗೆ ಮಹಿಳಾ ಆಯೋಗ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಣುಕಾ ಹಾಗೂ 47 ವಿದ್ಯಾರ್ಥಿನಿಯರು ನಾಗಲಕ್ಷ್ಮೀಬಾಯಿ ಅವರಿಗೆ ದೂರು ನೀಡಿದ್ದಾರೆ.

ಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕ

ಕ್ಯಾಂಟೀನ್‌ ಹೈಜಾಕ್‌: ಈ ಹಿಂದೆ ಕುಮಾರ್‌ ಎನ್ನುವವರು ಮಹಾರಾಣಿ ಕಾಲೇಜಿನಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದರು. ನವೀನ್‌ಕುಮಾರ್‌ ಬಂದ ನಂತರ ಕುಮಾರ್‌ನನ್ನು ಕ್ಯಾಂಪಸ್‌ನಿಂದ ಓಡಿಸಿ ತಾನ ಕ್ಯಾಂಟೀನ್‌ ಹೈಜಾಕ್‌ ಮಾಡಿದ್ದಾನೆ. ಉಪನ್ಯಾಸಕರು ಕಾಲೇಜಿನಿಂದ ಹೊರಗೆ ಹೋದರೆ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುವುದು, ಇತರೆ ಇಲಾಖೆ ಸಭೆಗೆ ಹೋದರೂ ಪ್ರಶ್ನಿಸುತ್ತಿದ್ದ.

Girls, teachers allege harassment by canteen operator

ಪ್ರಾಂಶುಪಾಲರಿಗೆ ಪಾಠ: ತಾನೊಬ್ಬ ಆರ್‌ಟಿಐ ಕಾರ್ಯಕರ್ತ ಎನ್ನುವ ಸೋಗಿನಲ್ಲಿ ಎರಡು ವರ್ಷಗಳ ಹಿಂದೆ ಮಹಾರಾಣಿ ಕಾಲೇಜು ಕ್ಯಾಂಪಸ್‌ಗೆ ಕಾಲಿಟ್ಟಿದ್ದ ನವೀನ್‌ಕುಮಾರ್‌ ಎಎಂಬಾತ ಉಪನ್ಯಾಸಕರು ಮತ್ತು ಹಿಂದಿನ ಪ್ರಿನ್ಸಿಪಾಲ್‌ ಬಗ್ಗೆ ಮೇಲಿಂದ ಮೇಲೆ ಮಾಹಿತಿ ಕೋರಿ ಅರ್ಜಿ ಸಲ್ಲಿಸುತ್ತಿದ್ದ, ಅರ್ಜಿಯಲ್ಲಿ ಸಿಕ್ಕ ಮಾಹಿತಿಗಳನ್ನು ಸಾರ್ವನಿಕ ಉಪಯೋಗಕ್ಕೆ ಮಾಡಿಕೊಂಡಿದ್ದಾನೆ. ಈತನ ಕೆಟ್ಟ ವರ್ತನೆ ವಿರುದ್ಧ ಹಿಂದಯೇ ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಸಿಟಿವಿಯಲ್ಲಿ ಸೆರೆ: ಕಾಲೇಜು ಕ್ಯಾಂಪಸ್‌ನಲ್ಲಿ ರಾತ್ರಿ ಇಡೀ ನವೀನ್‌ಕುಮಾರ್‌ ಗಸ್ತು ತಿರುಗುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಈತನನ್ನು ಸ್ಥಳದಲ್ಲೇ ವಶಕ್ಕೆ ಪಡೆದು ವಿಚಾರಣೆ ಮಾಡಲು ಯತ್ನಿಸಿದರೂ ಆರೋಪಿ ಪೊಲೀಸರ ಕೈಗೆ ಸಿಗಲಿಲ್ಲ.

ಅವರ ತಂದೆ-ತಾಯಿ ಮಾತನಾಡಿಸಿ ಕ್ಯಾಂಟೀನ್‌ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲದ ಬಗ್ಗೆಯೂ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.

English summary
Students and women professors of Maharani's Arts, commerce and management college for women, sheshadri road are being harased by a self proclaimed RTI activist who runs the college canteen , B Renuka incharge principal has alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X