ಕೆಎಸ್ಒಯು ಮಾನ್ಯತೆ ರದ್ದಾಗಿದ್ದಕ್ಕೆ ನೇಣು ಹಾಕಿಕೊಂಡ ಯುವತಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 17 : ಕರ್ನಾಟಕ ಮುಕ್ತವಿಶ್ವವಿದ್ಯಾಲಯದಲ್ಲಿ ಕೋರ್ಸ್ ಮಾಡುತ್ತಿದ್ದ ವಿದ್ಯಾರ್ಥಿನಿ ವಿವಿಯ ಮಾನ್ಯತೆ ರದ್ದಾಗಿ ತಾನು ಮಾಡುತ್ತಿದ್ದ ಕೋರ್ಸ್ ಅರ್ಧಕ್ಕೆ ನಿಂತಿದ್ದರಿಂದ ಬೇಸರಗೊಂಡು ನೇಣಿಗೆ ಶರಣಾಗಿದ್ದಾಳೆ.

ಸಾವಿರಾರು ವಿದ್ಯಾರ್ಥಿಗಳ ಕನಸು ನುಚ್ಚುನೂರು: ಮುಕ್ತ ವಿವಿಗೆ ಬೀಗ?

ವಿಜಯನಗರದ ಗಂಗಾಧರ್ ಬಡಾವಣೆಯಲ್ಲಿ ವಾಸವಿದ್ದ ಸಂಜನಾ ದ್ವಿಪಿಯುಸಿ ಫೇಲ್ ಆಗಿದ್ದಳು. ಆ ನಂತರ ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿವಿ ಯಲ್ಲಿ ಅನಿಮೇಷನ್ ಕೋರ್ಸ್ಗೆ ಸೇರಿದ್ದಳು. ಆದರೆ ಮುಕ್ತವಿವಿಯ ಯು.ಜಿ.ಸಿ ಮಾನ್ಯತೆ ರದ್ದಾದ ಕಾರಣ ಅನಿಮೇಷನ್ ಕೋರ್ಸ್ ಅನೂರ್ಜಿತಗೊಂಡಿತು.

Girl commit suicide in Vijayanagar

ಇದರಿಂದ ತೀರ್ವ ಬೇಸರಗೊಂಡಿದ್ದ ಸಂಜನಾ ಖಿನ್ನತೆಗೆ ಒಳಗಾಗಿದ್ದಳು. ತಾನು ಅನರಕ್ಷಸ್ಥೆ ಎಂದು ಸದಾ ಚಿಂತಿಸುತ್ತಿದ್ದಳು. ಆಕೆಯ ಪೋಷಕರು ಸಂಜನಾಳಿಗೆ ಮನೋವೈದ್ಯರಿಂದ ಚಿಕಿತ್ಸೆ ಕೂಡ ಕೊಡಿಸಿದ್ದರು. ಆದರೆ ಆಕೆ ನವೆಂಬರ್ 15ರಂದು ನೇಣಿಗೆ ಶರಣಾಗಿದ್ದಾಳೆ. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮುಕ್ತ ವಿವಿ ಮಾನ್ಯತೆ ರದ್ದಿಗೆ ವಾಸ್ತು ದೋಷ ಕಾರಣವೇ!?

ಯು.ಜಿ.ಸಿಯ ನಿಯಮ ಉಲ್ಲಂಘಿಸಿ ಕೊರ್ಸ್ ಆರಂಭಿಸಿದ್ದಕ್ಕೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದು ಮಾಡಲಾಗಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Girl commit suicide for not getting her degree. Sanjana admited for animation course in KSOU mysore. but due to UGC grant cancelation her degree get void.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ