ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಮುಖಂಡನಿಂದ ಲಕ್ಷ ಲಕ್ಷ ದೋಚಿದ ಫೇಸ್‌ಬುಕ್ ಗೆಳತಿ

|
Google Oneindia Kannada News

ಬೆಂಗಳೂರು, ಸೆ.29: ಫೇಸ್‌ಬುಕ್ ಮೂಲಕ ಯುವತಿಯೊಬ್ಬಳು ಪರಿಚಯವಾಗಿ ಜೆಡಿಎಸ್ ಮುಖಂಡನಿಂದ ಲಕ್ಷ ಲಕ್ಷ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಉದ್ಯಮಿಯ ಪುತ್ರಿ ಎಂದು ಪರಿಚಯಿಸಿಕೊಂಡ ಯುವತಿ ಜೆಡಿಎಸ್ ಮುಖಂಡನಿಂದ 9.70 ಲಕ್ಷ ರೂ ದೋಚಿದ್ದಳು, ಆಕೆಯನ್ನು ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫೇಸ್‌ಬುಕ್ ಹ್ಯಾಕ್‌: 5 ಕೋಟಿ ಫೇಸ್‌ಬುಕ್ ಖಾತೆಗಳು ಸಮಸ್ಯೆಯಲ್ಲಿ! ಫೇಸ್‌ಬುಕ್ ಹ್ಯಾಕ್‌: 5 ಕೋಟಿ ಫೇಸ್‌ಬುಕ್ ಖಾತೆಗಳು ಸಮಸ್ಯೆಯಲ್ಲಿ!

ಅಂದ್ರಹಳ್ಳಿ ಮುಖ್ಯರಸ್ತೆ ತಿಗಳರಪಾಳ್ಯದ ನಿವಾಸಿ ಹರಿಣಿ(25) ಸಂಬಂಧಿಗಳಾದ ರವಿ(40) ಪ್ರಕಾಶ್ (39) ಬಂಧಿತರು, ಆರೋಪಿಗಳ ಬಳಿ 4.50 ಲಕ್ಷ ರೂ ನಗದು, ಕೃತ್ಯಕ್ಕೆ ಬಳಸಿದ್ದ ಆಟೋ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

Girl cheated JDS leader as Facebook friend

ಇವರ ವಿರುದ್ಧ ಜೆಡಿಎಸ್ ಬೆಂಗಳೂರು ನಗರ ಘಟಕದ ಕಾರ್ಯದರ್ಶಿ ಎಲ್ ಶ್ರೀನಿವಾಸ್ ದೂರು ದಾಖಲಿಸಿದ್ದರು. ಆಕೆ ಆಗಸ್ಟ್ 24ರಂದು ಶ್ರೀನಿವಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಸಂದೇಶ ಕಳಿಸಿದ್ದಳು, ಅದಕ್ಕೆ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದರು, ಇದಾದ ಬಳಿಕ ಆಕೆ ಪೇ ಪದೇ ಮೆಸೇಜ್ ಕಳುಹಿಸುತ್ತಿದ್ದಾಗ ನಂಬರ್ ನ್ನು ವಿನಿಮಯ ಮಾಡಿಕೊಂಡಿದ್ದರು.

ಯಾರಿದು ಅಜಿತ್ ಮೋಹನ್, ಫೇಸ್ಬುಕ್ ಇಂಡಿಯಾದ ಹೊಸ ಎಂಡಿ ಯಾರಿದು ಅಜಿತ್ ಮೋಹನ್, ಫೇಸ್ಬುಕ್ ಇಂಡಿಯಾದ ಹೊಸ ಎಂಡಿ

ತಾನು ಉದ್ಯಮಿಯ ಪುತ್ರಿ, ಮ್ಯೂಸಿಕಲ್ ಸಂಸ್ಥೆಯೊಂದನ್ನು ನಡೆಸುತ್ತಿರುವುದಾಗಿ ಸುಳ್ಳು ಹೇಳಿದ್ದಳು, ಸಂಸ್ಥೆ ನಡೆಸಲು ಜಾಗ ಹುಡುಕುತ್ತಿದ್ದೇನೆ ಎಂದು ಹೇಳಿ ನಂಬಿಸಿದ್ದಳು. ಆ.29ರಂದು ಶ್ರೀನಿವಾಸ್ ಗೆ ಕರೆ ಮಾಡಿ ವಿವಿಧ ಕಾರಣಗಳನ್ನು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು.

ಲೋಕಸಭೆ: ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಸುಳ್ಳುಸುದ್ದಿ, ನಿಂದನೆಗೆ ಕಡಿವಾಣ ಲೋಕಸಭೆ: ಫೇಸ್‌ಬುಕ್‌, ಟ್ವಿಟ್ಟರ್‌ನಲ್ಲಿ ಸುಳ್ಳುಸುದ್ದಿ, ನಿಂದನೆಗೆ ಕಡಿವಾಣ

ಶ್ರೀನಿವಾಸ್ 2.70 ಲಕ್ಷ ರೂ ನೀಡಿದ್ದ ಬಳಿಕ ಮೂರ್ನಾಲ್ಕು ಬಾರಿ ಇದೇ ರೀತಿಯಾದಾಗ ಆತನಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದ.ಇದೀಗ ಆಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

English summary
Jnana Bharati police have arrested a girl who cheated Rs.9 lakhs to JDS leader who have become friends through Facebook account. Accused identified as Harini and she had fake fb account as Swathi Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X