ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದನ್ ನಿಲೇಕಣಿ ಪರ ಗಿರೀಶ್ ಕಾರ್ನಾಡ್ ಪ್ರಚಾರ

|
Google Oneindia Kannada News

ಬೆಂಗಳೂರು, ಮಾ. 31 : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಪರ ಪ್ರಚಾರಕ್ಕೆ ಸಾಹಿತಿಗಳು ಕೈ ಜೋಡಿಸಿದ್ದಾರೆ. ಹಿರಿಯ ಸಾಹಿತಿ ಗಿರೀಶ್‌ ಕಾರ್ನಾಡ್‌ ಭಾನುವಾರ ನಂದನ್‌ ನಿಲೇಕಣಿ ಅವರ ಪತ್ನಿ ರೋಹಿಣಿ ಅವರೊಂದಿಗೆ ನಗರದ ವಿವಿಧೆಡೆ ಸಂಚರಿಸಿ, ಮತ ಯಾಚಿಸಿದರು.

ಭಾನುವಾರ ಸಾಹಿತಿ ಗಿರೀಶ್ ಕಾರ್ನಾಡ್, ನಿರ್ದೇಶಕ ಚೈತನ್ಯ ಮುಂತಾದವರು ರೋಹಿಣಿ ನಿಲೇಕಣಿ ಅವರೊಂದಿಗೆ ಜೆ.ಪಿ.ನಗರ, ಗಾಂಧಿ ಬಜಾರ್ ಮುಂತಾದ ಪ್ರದೇಶಗಳಲ್ಲಿ ಮತಯಾಚನೆ ಮಾಡಿದರು. ಹಿರಿಯ ಸಾಹಿತಿ ಕೆ.ಮರುಳಸಿದ್ದಪ್ಪ ಅವರನ್ನು ಭೇಟಿಮಾಡಿ ಚುನಾವಣೆಯಲ್ಲಿ ನಂದನ್ ನಿಲೇಕಣಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಪ್ರಚಾರದ ವೇಳೆ ಮಾತನಾಡಿದ ಗಿರೀಶ್ ಕಾರ್ನಾಡ್, ನಂದನ್‌ ನಿಲೇಕಣಿ ಅವರಂಥ ಅಭ್ಯರ್ಥಿ ಬೆಂಗ­ಳೂರಿನಲ್ಲಿ ಹಿಂದೆ ಚುನಾವ­ಣೆಗೆ ಸ್ಪರ್ಧಿಸಿರಲಿಲ್ಲ. ರಾಜಕಾರಣದಲ್ಲಿ ಹಲವು ಬದಲಾ­ವಣೆ ತರುವ ಕೌಶಲಗಳು ಅವ­ರಲ್ಲಿವೆ. ನಾವೆಲ್ಲ ಅವರನ್ನು ಬೆಂಬಲಿಸ­ಬೇಕು ಎಂದು ಕರೆ ನೀಡಿದರು. ಚಿತ್ರಗಳಲ್ಲಿ ನೋಡಿ ಕಾರ್ನಾಡ್, ರೋಹಿಣಿ ನಿಲೇಕಣಿ ಪ್ರಚಾರ

ನಿಲೇಕಣಿ ಪರ ಸಾಹಿತಿಗಳ ಪ್ರಚಾರ

ನಿಲೇಕಣಿ ಪರ ಸಾಹಿತಿಗಳ ಪ್ರಚಾರ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಪ್ರರ ಪ್ರಚಾರಕ್ಕೆ ಸಾಹಿತಿಗಳು ಕೈಜೋಡಿಸಿದ್ದಾರೆ.

ಗಿರೀಶ್ ಕಾರ್ನಾರ್ಡ್ ಪ್ರಚಾರ

ಗಿರೀಶ್ ಕಾರ್ನಾರ್ಡ್ ಪ್ರಚಾರ

ಹಿರಿಯ ಸಾಹಿತಿ ಗಿರೀಶ್‌ ಕಾರ್ನಾಡ್‌ ಭಾನುವಾರ ನಂದನ್‌ ನಿಲೇಕಣಿ ಅವರ ಪತ್ನಿ ರೋಹಿಣಿ ಅವರೊಂದಿಗೆ ನಗರದ ವಿವಿಧೆಡೆ ಸಂಚರಿಸಿ ಮತ ಯಾಚಿಸಿದರು.

ರಾಜಕಾರಣದಲ್ಲಿ ಬದಲಾವಣೆ ತರುತ್ತಾರೆ

ರಾಜಕಾರಣದಲ್ಲಿ ಬದಲಾವಣೆ ತರುತ್ತಾರೆ

"ನಂದನ್‌ ನಿಲೇಕಣಿ ಅವರಂಥ ಅಭ್ಯರ್ಥಿ ಬೆಂಗ­ಳೂರಿನಲ್ಲಿ ಹಿಂದೆ ಚುನಾವ­ಣೆಗೆ ಸ್ಪರ್ಧಿಸಿರಲಿಲ್ಲ. ರಾಜಕಾರಣದಲ್ಲಿ ಹಲವು ಬದಲಾ­ವಣೆ ತರುವ ಕೌಶಲಗಳು ಅವ­ರಲ್ಲಿವೆ. ನಾವೆಲ್ಲ ಅವರನ್ನು ಬೆಂಬಲಿಸ­ಬೇಕು" ಎಂದು ಗಿರೀಶ್ ಕಾರ್ನಾಡ್ ಕರೆ ನೀಡಿದರು.

ಸಾಹಿತಿಗಳ ಬೆಂಬಲ ಕೇಳಿದ ಕಾರ್ನಾಡ್

ಸಾಹಿತಿಗಳ ಬೆಂಬಲ ಕೇಳಿದ ಕಾರ್ನಾಡ್

ಮನೆ-ಮನೆ ಪ್ರಚಾರದ ನಡುವೆ ಹಿರಿಯ ಸಾಹಿತಿ ಕೆ.ಮರುಳಸಿದ್ದಪ್ಪ ಅವರನ್ನೂ ಭೇಟಿಮಾಡಿ ಚುನಾವಣೆಯಲ್ಲಿ ನಂದನ್ ನಿಲೇಕಣಿ ಅವರನ್ನು ಬೆಂಬಲಿಸುವಂತೆ ಕಾರ್ನಾಡ್ ಮನವಿ ಮಾಡಿದರು.

ಮನೆ-ಮನೆ ಪ್ರಚಾರ

ಮನೆ-ಮನೆ ಪ್ರಚಾರ

ಭಾನುವಾರ ಸಾಹಿತಿ ಗಿರೀಶ್ ಕಾರ್ನಾಡ್, ನಿರ್ದೇಶಕ ಚೈತನ್ಯ ಮುಂತಾದವರು ರೋಹಿಣಿ ನಿಲೇಕಣಿ ಅವರೊಂದಿಗೆ ಜೆ.ಪಿ.ನಗರ, ಗಾಂಧಿ ಬಜಾರ್ ಮುಂತಾದ ಪ್ರದೇಶಗಳಲ್ಲಿ ಮತಯಾಚನೆ ಮಾಡಿದರು.

ಸಾಹಿತಿಗಳ ಬೆಂಬಲ

ಸಾಹಿತಿಗಳ ಬೆಂಬಲ

ರಾಜಕಾರಣದಲ್ಲಿ ಹಲವಾರು ಬದಲಾವಣೆಗಳನ್ನು ತರುವ ಕನಸು ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರಿಗೆ ಚುನಾವಣೆಯಲ್ಲಿ ಸಾಹಿತಿಗಳ ಬೆಂಬಲ ದೊರಕಿದಂತಾಗಿದೆ.

ರೋಹಿಣಿ ನಿಲೇಕಣಿ ಪ್ರಚಾರ

ರೋಹಿಣಿ ನಿಲೇಕಣಿ ಪ್ರಚಾರ

ಪತಿ ನಂದನ್ ನಿಲೇಕಣಿ ಪರವಾಗಿ ಹಲವು ದಿನಗಳಿಂದ ಪ್ರಚಾರ ನಡೆಸುತ್ತಿರುವ ರೋಹಿಣಿ ನಿಲೇಕಣಿ ಜೆ.ಪಿ.ನಗರ, ಗಾಂಧಿ ಬಜಾರ್ ಮುಂತಾದ ಸ್ಥಳಗಳಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿ ಪ್ರಚಾರ ನಡೆಸಿದರು.

English summary
Elections 2014 : well-known Kannada writer and theater personality Girish Karnad, announced his support for Nandan Nilekani in Bangalore South. Girish Karnad joined Rohini Nilekani on her door to door campaign in JP Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X