ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದ್ರಗ್ರಹಣ: ಮಧ್ಯಾಹ್ನದಿಂದಲೇ ಘಾಟಿ ಸುಬ್ರಮಣ್ಯ ದೇವಾಲಯ ಬಂದ್

By ದೊಡ್ಡಬಳ್ಳಾಪುರ ಪ್ರತಿನಿಧಿ
|
Google Oneindia Kannada News

Recommended Video

Lunar Eclipse July 27, 2018 : ಮಧ್ಯಾಹ್ನದಿಂದ ಘಾಟಿ ಸುಬ್ರಮಣ್ಯ ದೇವಸ್ಥಾನ ಬಂದ್ | Oneindia Kannada

ದೊಡ್ಡಬಳ್ಳಾಪುರ, ಜುಲೈ.27: ದೇಶದಾದ್ಯಂತ ಚಂದ್ರಗ್ರಹಣ ಹಿನ್ನಲೆ ಇಂದು ಶುಕ್ರವಾರ ಎಲ್ಲಾ ದೇವಾಲಯಗಳಲ್ಲೂ ಮಧ್ಯಾಹ್ನದಿಂದಲೇ ದರ್ಶನವನ್ನು ಬಂದ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸುಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ದೇವರ ದರ್ಶನ ಇಂದು ಮಧ್ಯಾಹ್ನವೇ ಬಂದ್ ಆಗುತ್ತಿದೆ.

ಸಂಜೆ 5.30 ರಿಂದ ನಾಳೆ ಶನಿವಾರ ಬೆಳಗ್ಗೆಯವರೆಗೂ ಪೂಜಾ ಕೈಂಕರ್ಯಗಳು ಇರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಜುಲೈ 27 ರಾತ್ರಿ ಅಂದರೆ ಇಂದು ರಾತ್ರಿ12.45 ರಿಂದ ನಾಳೆ ಬೆಳಗ್ಗೆ 3.49 ರವರೆಗೆ ಚಂದ್ರ ಗ್ರಹಣ ಇರುವುದರಿಂದ ಇಂದು 5 ರಿಂದ ನಾಳೆ ಬೆಳಗ್ಗೆ 7.39 ರವರೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.

ಚಂದ್ರ ಗ್ರಹಣಕ್ಕೆ ಆಷಾಢ ಶುಕ್ರವಾರ ಚಾಮುಂಡಿ ದೇವಿ ದರ್ಶನ ಸಮಯ ಬದಲುಚಂದ್ರ ಗ್ರಹಣಕ್ಕೆ ಆಷಾಢ ಶುಕ್ರವಾರ ಚಾಮುಂಡಿ ದೇವಿ ದರ್ಶನ ಸಮಯ ಬದಲು

ಶನಿವಾರ (ಜುಲೈ 28) ಬೆಳಗ್ಗೆ 9 ಗಂಟೆ ನಂತರ ದೇವಸ್ಥಾನವನ್ನು ಶುಚಿಗೊಳಿಸಿ ಎಂದಿನಂತೆ ಪೂಜಾ ಕಾರ್ಯಗಳು ನಡೆಯಲಿವೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಯಿಂದ ನಾಗದೋಷ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಆಗಮಿಸುವ ಭಕ್ತಾಧಿಗಳಿಗೆ ಘಾಟಿ ಸುಬ್ರಮಣ್ಯ ಅರ್ಚಕರು ತಿಳಿಸಿದ್ದಾರೆ.

Ghati Subramanya temple will closed from afternoon

ಚಂದ್ರ ಗ್ರಹಣ ಸಂಭವಿಸುತ್ತಿರುವುದರಿಂದ ದಕ್ಷಿಣಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿನ ಪೂಜಾ ವೇಳಾ ಪಟ್ಟಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದಲ್ಲದೆ, ದೇವರ ದರ್ಶನದ ಅವಧಿಯಲ್ಲೂ ತುಸು ವ್ಯತ್ಯಾಸ ಮಾಡಲಾಗಿದೆ.

ಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿ

ಸುಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಇಂದು ಶುಕ್ರವಾರ ಸಂಜೆ 7 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.

English summary
Doddaballapura Ghati Subramanya temple will closed from afternoon in the wake of the lunar eclipse. Temple administration said that worship will not be until Saturday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X