ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 1ರಿಂದ ಅಪಾರ್ಟ್ ಮೆಂಟ್ ಮೇಂಟೆನೆನ್ಸ್ ಶುಲ್ಕ ಹೆಚ್ಚಳ

ಸದ್ಯಕ್ಕೆ ಪ್ರತಿಯೊಂದು ಅಪಾರ್ಟ್ ಮೆಂಟ್ ನಿಂದ ವಸೂಲಿಯಾಗುತ್ತಿರುವ ನಿರ್ವಹಣಾ ಶುಲ್ಕದ ಮೇಲೆ ಶೇ. 15.55ರಷ್ಟು ತೆರಿಗೆ ಹಾಕಲಾಗುತ್ತಿದೆ. ಜುಲೈ 1ರಿಂದ ಜಿಎಸ್ ಟಿ ಜಾರಿಗೊಂಡರೆ, ನಿರ್ವಹಣಾ ಶುಲ್ಕದ ಮೇಲೆ ವಿಧಿಸಲಾಗುವ ತೆರಿಗೆ ಶೇ. 15.55ರಿಂದ

|
Google Oneindia Kannada News

ಬೆಂಗಳೂರು, ಮೇ 27: ನೀವು ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದೀರಾ? ಹಾಗಿದ್ದರೆ ಕೇಳಿ. ಪ್ರತಿ ತಿಂಗಳು ನೀವು ನೀಡುವ ನಿರ್ವಹಣಾ ಶುಲ್ಕ ಜುಲೈ 1ರಿಂದ ಹೆಚ್ಚಳವಾಗುತ್ತದೆ.

ಹೇಗಂತೀರಾ? ಇದು ಜುಲೈ 1ರಿಂದ ರಾಷ್ಟ್ರಾದ್ಯಂತ ಜಾರಿಯಾಗಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಪರಿಣಾಮ. ಜಿಎಸ್ ಟಿ ಜಾರಿಗೊಂಡರೆ ನೀವು ಈಗ ಸದ್ಯಕ್ಕೆ ಪಾವತಿಸುತ್ತಿರುವ ನಿರ್ವಹಣಾ ಶುಲ್ಕಕ್ಕೆ ಹೆಚ್ಚುವರಿ ಹಣವನ್ನು ಪಾವತಿಸಬೇಕಿದೆ.[ಜಿಎಸ್ ಟಿ ಪರಿಣಾಮ: ಹೊಸ ಮನೆ ಕೊಳ್ಳೋರಿಗೆ ಕೊಂಚ ಹೆಚ್ಚು ಹೊರೆ!]

Get Ready To Pay More Towards Maintenance Charges For Your Apartment From July 1

ಅದರ ಲೆಕ್ಕಾಚಾರ ಹೇಗೆ? ಇಲ್ಲಿದೆ ನೋಡಿ ಮಾಹಿತಿ. ಸದ್ಯಕ್ಕೆ ಪ್ರತಿಯೊಂದು ಅಪಾರ್ಟ್ ಮೆಂಟ್ ನಿಂದ ವಸೂಲಿಯಾಗುತ್ತಿರುವ ನಿರ್ವಹಣಾ ಶುಲ್ಕದ ಮೇಲೆ ಶೇ. 15.55ರಷ್ಟು ತೆರಿಗೆ ಹಾಕಲಾಗುತ್ತಿದೆ. ಇದರಲ್ಲಿ ಶೇ. 15ರಷ್ಟು ಸೇವಾ ತೆರಿಗೆ, ಶೇ. 0.5ರಷ್ಟು ಸ್ವಚ್ಛ ಭಾರತ ತೆರಿಗೆ ಹಾಗೂ ಶೇ. 0.05ರಷ್ಟು ಕೃಷಿಯೇತರ ತೆರಿಗೆಯಾಗಿರುತ್ತಿದೆ.[ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?]

ಆದರೆ, ಜುಲೈ 1ರಿಂದ ಜಿಎಸ್ ಟಿ ಜಾರಿಗೊಂಡರೆ, ನಿರ್ವಹಣಾ ಶುಲ್ಕದ ಮೇಲೆ ವಿಧಿಸಲಾಗುವ ತೆರಿಗೆ ಶೇ. 15.55ರಿಂದ ಶೇ. 18ಕ್ಕೆ ಏರಲಿದೆ. ಅಂದರೆ, ಹಾಲಿ ತೆರಿಗೆಗಿಂತ ಶೇ. 2.5ರಷ್ಟು ಹೆಚ್ಚಾಗಲಿದೆ. ಹೀಗಾಗಿ, ಬಾಡಿಗೆದಾರ ಅಥವಾ ಫ್ಲಾಟ್ ನ ಮಾಲೀಕ ನೀಡುವ ನಿರ್ವಹಣಾ ವೆಚ್ಛವೂ ಏರಿಕೆಯಾಗಲಿದೆ.[ಮೇ 30ಕ್ಕೆ ಹೋಟೆಲ್ ಗಳು ಬಂದ್, ಊಟ-ತಿಂಡಿಗೆ ವ್ಯವಸ್ಥೆ ಮಾಡಿಕೊಳ್ರೀ...]

English summary
With the implementation of the new tax regime from July 1, you will have to shell out additional 2.5% tax on maintenance charges of your flat. As per the rates decided under the GST, now maintenance charges will attract a tax rate of 18% instead of the existing rate of 15.55%, which is roughly an increase of 2.5%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X