ಎಟಿಎಂ ಕಾರ್ಡ್ ಮೂಲಕ ಬಿಎಂಟಿಸಿ ಬಸ್ ಪಾಸ್ ಪಡೆಯಿರಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್,28: ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ನಗದು ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಈ ಸಮಸ್ಯೆ ನಿವಾರಣೆಗಾಗಿ ಹಾಗು ಪಾರದರ್ಶಕತೆ ಕಾಯ್ದುಕೊಳ್ಳಲು ನಗದು ರಹಿತ ವ್ಯವಹಾರದತ್ತ ಬಿಎಂಟಿಸಿ ಹೆಜ್ಜೆ ಇಟ್ಟಿದೆ.

ಇನ್ನು ಮುಂದೆ ಮಾಸಿಕ ಬಸ್ ಪಾಸ್ ಪಡೆಯುವವರು ಎಟಿಎಂ ಕಾರ್ಡ್ ಮೂಲಕವೇ ಪಡೆಯಬಹುದು ಎಂದು ತಿಳಿಸಿದೆ. ಎಟಿಎಂ ಮುಂದೆ ಕ್ಯೂ ನಿಂತು ಹಣ ಡ್ರಾ ಮಾಡಿ ಪಾಸ್ ಖರೀದಿಸಬೇಕಾದ ಅಗತ್ಯವನ್ನು ಸಂಸ್ಥೆ ತಪ್ಪಿಸಿದೆ.

Get BMTC monthly bus pass through swiping machine

ಲಕ್ಷಾಂತರ ಜನರ ಪ್ರಯಾಣಿಕರು ಪ್ರತಿ ನಿತ್ಯ ಬಿಎಂಟಿಸಿಯನ್ನೇ ನೆಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಸುಮಾರು 6 ಕೋಟಿ ರೂ. ಮೊತ್ತದ ಮಾಸಿಕ್ ಪಾಸ್ ಗಳು ವಿತರಣೆಯಾಗುತ್ತಿವೆ.

ಸಾಮಾನ್ಯ ದಿನಗಳಲ್ಲೇ ಚಿಲ್ಲರೆ ಸಮಸ್ಯೆ ಎದುರಿಸುತ್ತಿದ್ದ ಬಿಎಂಟಿಸಿ ಸಿಬ್ಬಂದಿ ನೋಟು ನಿಷೇಧದ ನಂತರ ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ರೂ.500 ನೋಟಿಗೆ 10 ದಿನದ ಬಾಸ್ ಅನ್ನು ಸಹ ಬಿಎಂಟಿಸಿ ವಿತರಿಸಿತ್ತು.

ಇದೀಗ ಚಿಲ್ಲರೆ ಸಮಸ್ಯೆ ಮತ್ತು ನೋಟು ನಿಷೇಧ ಸಮಸ್ಯೆ ನಾಗರಿಕಕರನ್ನು ಕಾಡದಂತೆ ನಗರದ 10 ಟಿಟಿಎಂಸಿ ಸೇರಿ 56 ಪ್ರಮುಖ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಸ್ವೈಪಿಂಗ್ ಯಂತ್ರಗಳನ್ನು ಸ್ಥಾಪಿಸಿದೆ.

ನೋಟು ನಿಷೇಧದಿಂದಾಗಿ ಚಿಲ್ಲರೆ ಸಮಸ್ಯೆ ಖಂಡಿತ ಕಾಡುತ್ತದೆ ಆದ್ದರಿಂದ ಡೆಬಿಟ್ ಹಾಗು ಕ್ರೆಡಿಟ್ ಸ್ವೈಪ್ ಯಂತ್ರಗಳನ್ನು ಬಿಎಂಟಿಸಿಯ ಹಲವು ಕೇಂದ್ರಗಳಲ್ಲಿ ಅಳವಡಿಸಲಾಗಿದೆ. ಇದು ಶಾಶ್ವತವಾಗಿ ನಿಲ್ದಾಣಗಳಲ್ಲಿ ಲಭ್ಯವಿರಲಿದೆ ಎಂದು ಬಿಎಂಟಿಸಿ ತಿಳಿಸಿದೆ.

ಯಾವ ಯಾವ ನಿಲ್ದಾಣಗಳಲ್ಲಿ ಸ್ವೈಪಿಂಗ್ ಯಂತ್ರವಿದೆ?

ಶಿವಾಜಿನಗರ ಬಸ್ ನಿಲ್ದಾಣ, ದೇವನಹಳ್ಳಿ, ಹೆಸರಘಟ್ಟ, ಕೆ.ಆರ್.ಮಾರ್ಕೆಟ್, ನೆಲಮಂಗಲ, ಸರ್ಜಾಪುರ, ಕುಮಾರಸ್ವಾಮಿ ಲೇಔಟ್, ಜಾಲಹಳ್ಳಿ ಕ್ರಾಸ್, ಜೈ ಭೀಮಾನಗರ, ಪೀಣ್ಯ 2ನೇ ಹಂತ, ಕೆ.ಆರ್.ಪುರಂ, ಯಲಹಂಕ, ವಿದ್ಯಾರಣ್ಯಪುರ, ಬಸವೇಶ್ವನಗರ ಸೇರಿ 10 ಟಿಟಿಎಂಸಿ ಕೇಂದ್ರಗಳಲ್ಲಿ ಸ್ವೈಪಿಂಗ್ ಯಂತ್ರ ಲಭ್ಯವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Metro Transport Corporation decides to issue monthly bus pass through debit and credit swiping machine due to demonetisation form December onwards.
Please Wait while comments are loading...