ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನುಷ್ಠಾನ ಯೋಗ್ಯ ಸಲಹೆಗೆ ಮಣೆ: ಜಾರ್ಜ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 07 : ರಾಜಧಾನಿ ಅಭಿವೃದ್ಧಿಗೆ ಅನುಷ್ಠಾನ ಯೋಗ್ಯ ಸಲಹೆಗಳನ್ನು ಯಾರೇ ಹೇಳಿದರೂ ಅದನ್ನು ಜಾರಿಗೆ ತರಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ನಮ್ಮ ಮೆಟ್ರೋ ರೈಲು 3 ನಿಮಿಷಕ್ಕೊಂದರಂತೆ ಸಂಚಾರ: ಜಾರ್ಜ್ನಮ್ಮ ಮೆಟ್ರೋ ರೈಲು 3 ನಿಮಿಷಕ್ಕೊಂದರಂತೆ ಸಂಚಾರ: ಜಾರ್ಜ್

ಬೆಂಗಳೂರು ಫಾರ್ವರ್ಡ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರ ಯೋಜಿತವಾಗಿ ನಿರ್ಮಾಣವಾಗಿಲ್ಲ, ಐಟಿ ಕ್ಷೇತ್ರದ ಬೆಳವಣಿಗೆ ಬಳಿಕ ರಾಜಧಾನಿ ನಾಗಾಲೋಟದಿಂದ ಪ್ರಗತಿ ಹೊಂದುತ್ತಿದೆ. ಇದಕ್ಕೆ ಅನುಗುಣವಾಗಿ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ ಎಂದರು.

George: Give us ideas to strengthen Bengaluru

ಸರ್ಕಾರ ಸಾಕಷ್ಟು ಅನುದಾನ ನೀಡಿದರೂ, ಇನ್ನಷ್ಟು ಮೂಲ ಸೌಕರ್ಯ ಕೊಡುವ ಅನಿವಾರ್ಯ ಎದುರಾಗಿದೆ. ನಾಗರಿಕರು ಸ್ಪಷ್ಟ ಸಲಹೆಗಳನ್ನು ನೀಡಿದರೆ ಅದನ್ನು ಒಪ್ಪಲು ಸಿದ್ಧ ಎಂದು ಘೋಷಿಸಿದರು.

ಜಾರ್ಜ್, ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆಜಾರ್ಜ್, ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಬೆಂಗಳೂರು ಮಹಾನಗರ ಎದುರಿಸುತ್ತಿರುವ ಮೂಲಸೌಕರ್ಯ ಸಮಸ್ಯೆಗೆ ನಾಗರಿಕರ ಸಲಹೆ ಪಡೆದು ಪರಿಹಾರ ಒದಗಿಸುವ ಆಶಯದೊಂದಿಗೆ ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಫಾರ್ವರ್ಡ್ ಚಳವಳಿಗೆ ಚಾಲನೆ ನೀಡಿದೆ.

ಮೂಲಸೌಕರ್ಯ, ಸಾರಿಗೆ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಇಂಧನ, ಸುರಕ್ಷತೆ ಹಾಗೂ ಪರಿಸರ-ಈ ಆರು ಪ್ರಮುಖ ವಿಷಯಗಳನ್ನು ಮುಂದಿಟ್ಟು ಸಾರ್ವಜನಿಕರು ಹಾಗೂ ನಾಗರಿಕ ಸಂಘಟನೆಗಳ ಸಹಕಾರ ಕೋರಲಾಗಿದೆ.

ಇದರ ಮೂಲಕವೇ ನಗರದ ಸಮಸ್ಯೆಗೆ ಸ್ಪಷ್ಟ ಪರಿಹಾರ ಕಂಡುಕೊಳ್ಳುವ ನಾಗರಿಕರ ಸಹಭಾಗಿತ್ವಕ್ಕೂ ಬೆಂಗಳೂರು ಫಾರ್ವರ್ಡ್ ಮುನ್ನುಡಿ ಬರೆದಿದೆ. ಬಿಬಿಎಂಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.

ಬೆಂಗಳೂರು ಅಭಿವೃದ್ಧಿ ಹೊಣೆ ಹೊತ್ತಿರುವ ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರು ರಾಜಧಾನಿ ಮೂಲಸೌಕರ್ಯಕ್ಕಾಗಿ ಸಹಕರಿಸುವ ವಾಗ್ದಾನ ನೀಡಿದರು. ನಾಗರಿಕ ಸಂಘಟನೆಗಳ ಪ್ರಮುಖರು ಕೂಡ ಸ್ಥಳೀಯ ಸಮಸ್ಯೆಗಳ ಆದ್ಯತೆ ನೀಡಿ ಅವುಗಳನ್ನು ಜಾರಿ ಮಾಡುವಂತೆ ಪಾಲಿಕೆ ಹಾಗೂ ಸರ್ಕಾಋದ ಮೇಲೆ ಒತ್ತಡ ಹೇರುವಂತೆ ಸಲಹೆ ನೀಡಿದರು.

ಡಿ.09 ಕ್ಕೆ ಸಂಪರ್ಕ ಸಭೆ: ನಾಗರಿಕರಿಂದ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಲು ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳಲ್ಲಿ ಐದು ಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತದೆ. ಪಾಲಿಕೆಯ ಪೂರ್ವ ಪಶ್ಚಿಮ, ದಕ್ಷಿಣ ವಲಯ ಹಾಗೂ ಯಲಹಂಕ-ಮಹದೇವಪುರ-ಬೊಮ್ಮನಹಳ್ಳಿ, ಒಳಗೊಂಡ ವಲಯ ಹಾಗೂ ಆರ್ ಆರ್ ನಗರ-ದಾಸರಹಳ್ಳಿ ಪ್ರದೇಶ ಒಳಗೊಂಡ ವಲಯದಲ್ಲಿ ಸಭೆ ನಿಗದಿಯಾಗಿದೆ.

English summary
Those who come to Bengaluru don't leave the city. such is the impression the city has on its dwellers but this magnetism poses stiff challenges, said Minister KJ George.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X